Advertisement

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

12:26 AM Nov 01, 2020 | sudhir |

ಕಲಬುರಗಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದೂಡಿಕೆ ಮಾಡಲಾಗಿದ್ದು, ನ.2ರ ಬದಲಾಗಿ ನ.10ಕ್ಕೆ ಮತ ಎಣಿಕೆ ನಡೆಯಲಿ‌ದೆ ಎಂದು ಚುನಾವಣಾಧಿಕಾರಿಗಳಾದ‌ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ತಿಳಿಸಿದ್ದಾರೆ.

Advertisement

ಅ.28ರಂದು ಮತದಾನ ನಡೆದಿತ್ತು. ನ.10ರಂದು ಬೆಳಿಗ್ಗೆ 8 ಗಂಟೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಪೂರ್ವ ನಿಗದಿಯಂತೆ ನ.2ಕ್ಕೆ ಮತ ಎಣಿಕೆ ಕಾರ್ಯ ನಡೆಯಬೇಕಿತ್ತು. ಇದೀಗ ಭಾರತ ಚುನಾವಣಾ ಆಯೋಗವು ನ.2ರ ಬದಲಾಗಿ ನ.10ರಂದು ಮತ ಎಣಿಕೆ ನಡೆಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ‌ ಮುಂದೂಡಲ್ಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next