Advertisement
ಶಿಸ್ತು ಕ್ರಮಕ್ಕೆ ಆಗ್ರಹ: ತಾಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಗ್ರಾಪಂನಲ್ಲಿ ಶುಕ್ರವಾರ ನಡೆದ ವಿಧಾನಪರಿಷತ್ ಚುನಾ ವಣೆಗೆ ನಾರಾಯಣಪುರ ಗ್ರಾಪಂ ಮತಗಟ್ಟೆ ಸಂಖ್ಯೆ 205ರಲ್ಲಿ ನಡೆದಿರುವ ಮತದಾನವನ್ನು ಬಹಿರಂಗ ಹಾಗೂ ಚುನಾವಣೆ ನಿಯಮ ಉಲ್ಲಂಘಿಸಿ ಚುನಾವಣಾ ಅಭ್ಯರ್ಥಿಗಳ ಪರ ವಾದ ಬೂತ್ ಏಜೆಂಟರುಗಳೇ ಮತ ಚಲಾವಣೆ ಮಾಡಿದ್ದಾರೆ.
Related Articles
Advertisement
2 ಮತ ಅಸಿಂಧು ಮಾಡಿ: ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ 207 ಮತಗಟ್ಟೆ ಸಂಖ್ಯೆಯಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಪಂ ಸದಸ್ಯ ನಂಜೇಶ್ ಮತ್ತು ಸವಿತಾ ಇಬ್ಬರು ಮತದಾನ ಮಾಡುವಾಗ ಮತದಾನವನ್ನು ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಪರವಾದ ಏಜೆಂಟರುಗಳು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಿ ಮತದಾನ ಮಾಡಿದ್ದಾರೆ.
ಎರಡು ಮತಗಳನ್ನು ಅಸಿಂಧು ಮಾಡಬೇಕು ಎಂದು ಮತಗಟ್ಟೆ ಚುನಾವಣಾಧಿಕಾರಿ ಗಳಿಗೆ ಅಚ್ಚಲು ಗ್ರಾಪಂ ಸದಸ್ಯ ಕುಮಾರಸ್ವಾಮಿ ದೂರು ನೀಡಿದ್ದಾರೆ. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಳ್ಳಹಳ್ಳಿ ಗ್ರಾಪಂ ಮತಗಟೆ ಸಂಖ್ಯೆ 219ರಲ್ಲಿ ನಡೆದ ಚುನಾವಣೆಯಲ್ಲಿ ಕೆಲವು ಮತದಾರರು ಮತಗಳನ್ನು ಏಜೆಂಟರುಗಳಿಗೆ ಬಹಿರಂಗ ಪಡಿಸಿ ಮತದಾನ ಮಾಡಿದ್ದಾರೆ.
ಈ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ವಿಡಿಯೋ ಪರಿಶಿಲಿಸಿ ಬಹಿರಂಗ ಪಡಿಸಿ ಮತದಾನ ಮಾಡಿರುವ ಮತಗಳನ್ನು ಅಸಿಂಧು ಮಾಡಬೇಕು ಎಂದು ಪಿಆರ್‌ಒ ಅವರಿಗೆ ಬೂತ್ ಏಜೆಂಟ್ ಸುಂದರ್ ರಾಜ್ ದೂರು ನೀಡಿದ್ದಾರೆ.