ಇಲಾಖೆ ಅಥವಾ ಅಧಿಕಾರಿಗಳು ಅಂತಹ “ಸಂವಿಧಾನೇತರ ವ್ಯಕ್ತಿಗಳೊಂದಿಗೆ’ ಸಂಬಂಧವಿಟ್ಟು ಕೊಂಡರೆ ಅಥವಾ ಸಂಪರ್ಕದಲ್ಲಿದ್ದರೆ
ಆಯೋಗ ಸಹಿಸುವುದಿಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದೂ ರಾವತ್ ಎಚ್ಚರಿಕೆ ನೀಡಿದರು.
Advertisement
3 ದಿನಗಳ ಚುನಾವಣಾ ಪೂರ್ವ ಸಿದ್ಧತಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಕೇಳಿದ್ದಕ್ಕೆ, “ದೇವೇಗೌಡರು ಅರೋಪ ಮಾಡಿದ್ದು ನಿಜ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಸತ್ಯಾಂಶ ಸಂಗ್ರಹಿಸಲಾಗುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕೈಬಿಟ್ಟಿದ್ದೇ 9.17 ಲಕ್ಷ ಹೆಸರುಗಳು. ಹೀಗಿರುವಾಗ ಅಲ್ಪಸಂಖ್ಯಾತರನ್ನು ಕೈಬಿಡಲಾಗಿದೆ ಅನ್ನುವುದರಲ್ಲಿ ಅರ್ಥವಿಲ್ಲ ಎಂದರು.