Advertisement
ದೂರು ಸಲ್ಲಿಕೆಗೆ “ಸಮಾಧಾನ್’ ಸಮಾಧಾನ್ ಕೊಂಡಿಯಲ್ಲಿ ದೂರುದಾರರು ಹೆಸರು, ವಿಳಾಸ, ಇಮೈಲ್, ಮೊಬೈಲ್ ಸಂಖ್ಯೆ, ಇತ್ಯಾದಿ ವಿವರಗಳನ್ನು ನೀಡಿ ಆಯಾ ವಿಧಾನಸಭಾ ಕ್ಷೇತ್ರವನ್ನು ಆರಿಸಿ ದೂರು ಸಲ್ಲಿಸಬಹುದು. ಕಡ್ಡಾಯ ತುಂಬಬೇಕಿರುವ ಫೀಲ್ಡ್‌ಗಳಿಗೆ * ಚಿಹ್ನೆ ಹಾಕಲಾಗಿದೆ. ಹಾಗಾಗಿ ದೂರು ಸಬ್‌ಮಿಟ್ ಮಾಡುವಾಗ ಕೋಡ್ ದಾಖಲಿಸುವ ಪ್ರಶ್ನೆಯೊಂದನ್ನು ಬಿಟ್ಟರೆ ಪೇಜ್ ಬೇರೇನನ್ನೂ ಕೇಳುವುದಿಲ್ಲ. ಸುಲಭವಾಗಿ ದೂರು ಸಲ್ಲಿಸಿ ಸ್ವೀಕೃತಿ ಪಡೆಯಬಹುದು. ಸಮಾಧಾನ್‌ನಲ್ಲಿ ವೀಡಿಯೊ, ಆಡಿಯೋ, ಫೋಟೊ ದಾಖಲೆ ಅಪ್‌ಲೋಡ್ ಮಾಡಲು ಅವಕಾಶವಿದೆ. ದೂರುದಾರರ ನೈಜತೆ ತಿಳಿಯಲು ಒಟಿಪಿ ದಾಖಲಿಸಿಕೊಂಡಿದ್ದರೆ ಪೂರಕವಾಗುತ್ತಿತ್ತು.
ರಾಜಕೀಯ ಪಕ್ಷಗಳು, ಪ್ರಚಾರ ನಡೆಸುವವರು ಏಕಗವಾಕ್ಷಿ ಆನ್‌ಲೈನ್ ಸೇವೆ “ಸುವಿಧಾ’ ಮೂಲಕ ಪ್ರಚಾರ ಸಂಬಂಧಿ ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಇಮೈಲ್, ಎಪಿಕ್ ಸಂಖ್ಯೆ ಸಲ್ಲಿಸಬೇಕು. ಬಳಿಕ ಪ್ರಚಾರ ಕಾರ್ಯಕ್ರಮದ ದಿನಾಂಕ ಆಯ್ಕೆ ಮಾಡಿ, ಜಿಲ್ಲೆ, ಕ್ಷೇತ್ರ, ಪೊಲೀಸ್ ಠಾಣೆಯ ವಿವರಗಳನ್ನು ನೀಡಿ, ಕೋಡ್ ದಾಖಲಿಸಿ ಅರ್ಜಿ ಸಬ್‌ಮಿಟ್ ಮಾಡ ಬೇಕು. ನಿಗದಿತ ಸಮಯದೊಳಗೆ ಅರ್ಜಿ ಗಳನ್ನು ಪರಿಶೀಲಿಸಲಾಗುತ್ತದೆ. ಅಂತಿಮವಾಗಿ ಚುನಾವಣಾ ಧಿಕಾರಿಗಳ ಕಚೇರಿಯಲ್ಲೇ (ಆರ್‌ಒ) ಇದಕ್ಕೆ ಅನುಮತಿ ಪಡೆಯಬಹುದಾಗಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಇದೇ ಮಾದರಿಯ ಸೇವೆ ಒದಗಿಸಬೇಕು ಎಂಬ ಆಗ್ರಹವೂ ಇದೆ. ಮೊಬೈಲ್ ಆ್ಯಪ್ ಅಗತ್ಯ
ಮೊಬೈಲ್ ಫೋನ್ ಸ್ನೇಹಿ ಆ್ಯಪ್ ಆಗಿ ಸಮಾಧಾನ್ ಮತ್ತು ಸುವಿಧಾ ಸೇವೆಗಳನ್ನು° ಅಭಿವೃದ್ಧಿ ಪಡಿಸಿ ಒದಗಿಸಿದರೆ ಹೆಚ್ಚು ಅನುಕೂಲ. ಈಗ ಇರುವ ವ್ಯವಸ್ಥೆ ಕ್ಲಿಷ್ಟಕರವೆಂದೇನಲ್ಲ. ಬ್ರೌಸರ್‌ನಲ್ಲಿ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಕೊಂಡಿಯನ್ನು ಬಳಸಿ ಕೊಳ್ಳಬಹುದು. ಆದರೆ ಮೊಬೈಲ್ ಆ್ಯಪ್ ಆದರೆ ಇನ್ನಷ್ಟು ಸುಲಭವಾಗಿ ದೂರು ಸಲ್ಲಿಸಲು, ಮೊಬೈಲ್‌ಗೆ
ಬಂದ ಫೊಟೋ, ವೀಡಿಯೊ ಅಪ್ಲೋಡ್ ಮಾಡಲು, ಸ್ಟೇಟಸ್ ಟ್ರ್ಯಾಕಿಂಗ್ ಸಾಧ್ಯ. ಈ ಬಗ್ಗೆ ಆಯೋಗ ಗಮನ ಹರಿಸಲಿ. 2016ರಲ್ಲಿ ನಡೆದ ಪ. ಬಂಗಾಲ ವಿಧಾನಸಭೆ ಚುನಾವಣೆಗೆ ಮತ್ತು ಬಿಹಾರ, ಅಸ್ಸಾಂ ಚು. ಆಯೋಗಗಳು ಸಮಾಧಾನ್ ಆ್ಯಪ್ ಅಭಿವೃದ್ಧಿ ಪಡಿಸಿವೆ. ಬಿಹಾರ ಚು. ಆಯೋಗವು ಸಮಾಧಾನ್‌ನ ಜತೆಗೆ ಎಲೆಕಾಂ (ಪತ್ರಿಕಾ ಪ್ರಕಟನೆ), ಮತದಾನ್ (ಮತದಾರರ ಮಾಹಿತಿ), ಸುಗಮ್ ವಿಹಾರ್ (ವಾಹನ ನಿರ್ವಹಣೆ) ಆ್ಯಪ್ ಬಿಡುಗಡೆಗೊಳಿಸಿತ್ತು. ಮಣಿಪುರದಲ್ಲಿ ಇ ಮಣಿಪುರ ಆ್ಯಪ್ ಇದೆ. ಇವುಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿ ಕಾಣಿಸುತ್ತಿವೆ.
Related Articles
ಸಮಾಧಾನ್‌ನಲ್ಲಿ ಚುನಾವಣಾ ಆಯುಕ್ತರು, ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಅವಕಾಶವಿದೆ. ದೂರು ಸಬ್‌ಮಿಟ್ ಮಾಡಿದ ಕೂಡಲೇ ರಿಜಿಸ್ಟ್ರೇಶನ್ ಸಂಖ್ಯೆ ದೊರೆಯುತ್ತದೆ. ಈ ಸಂಖ್ಯೆ ಯನ್ನು ಮತ್ತು ಮೊಬೈಲ್ ಸಂಖ್ಯೆಯನ್ನು ಸಲ್ಲಿಸಿ ದೂರಿನ ಸ್ಥಿತಿ ಬಗ್ಗೆ ತಿಳಿಯುವ ಟ್ರ್ಯಾಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಆನ್‌ಲೈನ್‌ನಲ್ಲಿ ದೂರಿನ ಸ್ವೀಕೃತಿ ದೃಢೀಕರಣವಾಗುವುದಲ್ಲದೆ ಸ್ಥಿತಿ, ಜರಗಿಸಿದ ಕ್ರಮ ತಿಳಿಯಲು ಸಾಧ್ಯವಾಗುತ್ತದೆ. ಸುವಿಧಾದಲ್ಲಿಯೂ ಈ ವ್ಯವಸ್ಥೆ ಇದೆ. ಚು. ಅಧಿಕಾರಿಗಳ ಲಾಗಿನ್‌ಗೆ ಮತ್ತು ಈಗಾಗಲೇ ಕಾಯ್ದಿರಿಸಲಾದ ಸ್ಥಳಗಳ, ಕಾರ್ಯಕ್ರಮಗಳ (ಪ್ರಚಾರ) ಪಟ್ಟಿಯನ್ನೂ ವೀಕ್ಷಿಸಲು ಅವಕಾಶ ಇದೆ. ಇಲ್ಲಿ ಜಿಲ್ಲೆ, ಕ್ಷೇತ್ರದ ವಿವರ, ದಿನಾಂಕ ಹಾಕಿ ಶೋ ಒತ್ತಿದರೆ ಪಟ್ಟಿ ತೆರೆದುಕೊಳ್ಳುತ್ತದೆ. ಇಲ್ಲಿ ಅನುಮತಿ ನೀಡಲಾಗಿದೆಯೇ ಇಲ್ಲವೇ ಎಂಬುದೂ ತಿಳಿಯುತ್ತದೆ.
Advertisement
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ