Advertisement
ಅಕ್ಟೋಬರ್ 1 ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮೂರನೇ ಹಂತದ ಮತದಾನದ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ಎರಡರ ಚುನಾವಣಾ ಫಲಿತಾಂಶಗಳನ್ನು ಅಕ್ಟೋಬರ್ 4 ರ ಬದಲಾಗಿ ಅಕ್ಟೋಬರ್ 8 ರಂದು ಪ್ರಕಟಿಸಲಾಗುತ್ತದೆ.
ಬಿಜೆಪಿ ನಾಯಕ ಆರ್‌ಪಿ ಸಿಂಗ್ ಮಾತನಾಡಿ, ‘ಈ ಹಿಂದೆಯೂ ಚುನಾವಣ ದಿನಾಂಕಗಳನ್ನು ಮುಂದೂಡಲಾಗಿದೆ. ದೊಡ್ಡ ಸಮುದಾಯದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗ ಈ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದ್ದಾರೆ.
Related Articles
Advertisement
ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಪ್ರತಿಕ್ರಿಯಿಸಿ “ಚುನಾವಣ ಆಯೋಗದ ಬಗ್ಗೆ ನಾವು ಏನು ಹೇಳಬಹುದು ? ಬಿಜೆಪಿ 10 ವರ್ಷಗಳಲ್ಲಿ ಸ್ಪರ್ಧೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ, 5 ದಿನಗಳಲ್ಲಿ ಏನಾಗಬಹುದು? ಕಾಂಗ್ರೆಸ್ ಸಿದ್ಧವಾಗಿದೆ ಮತ್ತು ನಾವು ಎಲ್ಲ ಸ್ಥಾನಗಳನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ” ಎಂದರು.
ಅಕ್ಟೋಬರ್ 4 ರ ಬದಲಾಗಿ ಅಕ್ಟೋಬರ್ 8 ರಂದು ಮತ ಎಣಿಕೆ ದಿನವನ್ನು ಬದಲಾಯಿಸಲಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಪ್ರತಿಕ್ರಿಯಿಸಿ “ಆ ಸಮಯದಲ್ಲಿ ಹಬ್ಬವಿದೆ ಎಂದು ಚುನಾವಣ ಆಯೋಗಕ್ಕೆ ತಿಳಿದಿರಲಿಲ್ಲವೇ? ಅವರು ಪರಿಗಣಿಸಿದ ನಂತರ ಅಂತಿಮ ದಿನಾಂಕವನ್ನು ಘೋಷಿಸುತ್ತಾರೆ ಅವರು ಚುನಾವಣೆಯನ್ನು ಅನುಮಾನಾಸ್ಪದವಾಗಿ ಮಾಡುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
ಹರ್ಯಾಣ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯಿಸಿ “ಇದು ಚುನಾವಣ ಆಯೋಗದ ಹಕ್ಕು, ಅವರು ದಿನಾಂಕವನ್ನು ವಿಸ್ತರಿಸಿದ್ದಾರೆ,ಬಿಜೆಪಿ ಈಗಾಗಲೇ ಹರಿಯಾಣದಲ್ಲಿ ಸೋಲನ್ನು ಒಪ್ಪಿಕೊಂಡಿದೆ. ಹರಿಯಾಣ ಸರ್ಕಾರವು ಚುನಾವಣ ಆಯೋಗಕ್ಕೆ ಪತ್ರ ಬರೆದಾಗ, ನಾನು ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದೆ ಎಂದರು.
ತಂತ್ರಗಳನ್ನು ಅನುಸರಿಸುತ್ತಿದೆಹರ್ಯಾಣ ಮಾಜಿ ಡಿಸಿಎಂ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಅವರು ಪ್ರತಿಕ್ರಿಯಿಸಿ “ನಾವು ಇದನ್ನು ಸ್ವಾಗತಿಸುತ್ತೇವೆ, ಬಿಜೆಪಿ ತನ್ನ ಸೋಲನ್ನು ತಪ್ಪಿಸಲು ಈ ಎಲ್ಲಾ ತಂತ್ರಗಳನ್ನು ಅನುಸರಿಸುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿಕೆ ನೀಡಿದ್ದಾರೆ.