Advertisement

ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಚಂದ್ರಪ್ಪ

07:17 PM Oct 25, 2020 | Suhan S |

ಮೊಳಕಾಲ್ಮೂರು: ರಾಜ್ಯದಲ್ಲಿ ಗಲಾಟೆ, ದೌರ್ಜನ್ಯ ಮಾಡಿ ಮತ ಯಾಚಿಸುವ ಬಿಜೆಪಿ ಬದಲು ಸರ್ವ ಸಮುದಾಯಗಳ ಏಳಿಗೆಗಾಗಿ ಹಲವಾರು ಯೋಜನೆಗಳ ಮೂಲಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತÂದ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮಾಜಿ ಸಂಸದಬಿ.ಎನ್‌. ಚಂದ್ರಪ್ಪ ಕರೆ ನೀಡಿದರು.

Advertisement

ಪಟ್ಟಣದ ಶಿವ ಸದನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಕಾಂಗ್ರೆಸ್‌ ಪಕ್ಷ ನೂರಾರು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಕೈಗೊಂಡ ಆಧಾರದಲ್ಲಿ ಮತದಾರರಲ್ಲಿ ಮತಯಾಚನೆ ಮಾಡಲಾಗುತ್ತಿದೆ. ಆದರೆ ಬಿಜೆಪಿಯವರು ದೌರ್ಜನ್ಯ, ಗಲಾಟೆ ಮಾಡುವ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದ್ದಾರೆ. ಬುದ್ಧಿವಂತ ಪದವೀಧರರು ಯೋಚನೆ ಮಾಡಿ ಶಿಕ್ಷಕರು ಮತ್ತು ಪದವೀಧರರ ಅಭಿವೃದ್ಧಿಗೆ ಶ್ರಮಿಸಿದ ಕಾಂಗ್ರೆಸ್‌ ಅಭ್ಯರ್ಥಿ ರಮೇಶಬಾಬು ಅವರನ್ನು ಗೆಲ್ಲಿಸಬೇಕೆಂದರು.

ಅಭ್ಯರ್ಥಿ ರಮೇಶ್‌ಬಾಬು ಮಾತನಾಡಿ, ಶಿಕ್ಷಕರು ಮತ್ತು ಪದವೀಧರರ ಹಲವಾರು ಸಮಸ್ಯೆಗಳನ್ನುಅರಿತಿದ್ದೇನೆ. ಸರ್ಕಾರದಲ್ಲಿ 6 ಲಕ್ಷ ಹುದ್ದೆಗಳಲ್ಲಿ 4.5 ಲಕ್ಷ ಹುದ್ದೆಗಳು ಭರ್ತಿಯಾಗಿದ್ದು ಉಳಿದ 1.5 ಲಕ್ಷ ಹುದ್ದೆಗಳಭರ್ತಿಗೆ ಶ್ರಮಿಸಲಾಗುವುದು. ಯುವಕರಿಗೆ ಸ್ವಂತ ಉದ್ಯೋಗ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು. ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಸುಮಾರು 80 ಸಾವಿರ ಜನರು ಪದವಿ ಪಡೆದ ಶಿಕ್ಷಕರಿದ್ದಾರೆ. ಅವರ ಪದೋನ್ನತಿಗೆ ಶ್ರಮಿಸಲಾಗುವುದು. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಸಮಸ್ಯೆ, ಅತಿಥಿ ಉಪನ್ಯಾಸಕರ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ನಿವಾರಿಸಿ ಅಭಿವೃದ್ಧಿಗೆ ಶ್ರಮಿಸಲಿರುವುದರಿಂದ ತಮ್ಮನ್ನು ಗೆಲ್ಲಿಸಬೇಕೆಂದು ಕೋರಿದರು.

ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ವಚನ ಭ್ರಷ್ಟ ಸಚಿವ ಬಿ. ಶ್ರೀರಾಮುಲು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಈ ಭಾಗದ ಜನರನ್ನು ವಂಚಿಸಿದ್ದಾರೆ. ಕೋವಿಡ್‌ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಎಸಗಿ ಅಸಮರ್ಥರಾದ ಹಿನ್ನೆಲೆಯಲ್ಲಿ ಆರೋಗ್ಯ ಖಾತೆ ಬದಲು ಸಮಾಜಕಲ್ಯಾಣ ಇಲಾಖೆ ನೀಡಲಾಗಿದೆ ಎಂದು ಟೀಕಿಸಿದರು.

ಜಿಪಂ ಸದಸ್ಯ ಡಾ| ಯೋಗೇಶ್‌ಬಾಬು, ಮಾಜಿ ಎಂಎಲ್ಸಿ ಜಯಮ್ಮ ಬಾಲರಾಜ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಟೇಲ್‌ ಜಿ. ಪಾಪನಾಯಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು, ಚಳ್ಳಕೆರೆಯ ಕೆ.ಟಿ. ತಿಪ್ಪೇಸ್ವಾಮಿ, ರಾಜ್ಯ ಸಮಿತಿಯ ದಿವಾಕರ್‌, ಕೆಪಿಸಿಸಿ ಸದಸ್ಯ ಭಕ್ತಪ್ರಹ್ಲಾದ, ಎಸ್‌ಸಿ ಘಟಕದ ಸಂಚಾಲಕ ಡಿ.ಎಚ್‌. ನಾಗರಾಜ್‌ ಕಟ್ಟೆ, ಕೆ. ಜಗಲೂರಯ್ಯ, ವಿ. ಮಾರನಾಯಕ, ಎಸ್‌. ಜಯಣ್ಣ, ಪಪಂ ಸದಸ್ಯರಾದ ಎಂ. ಅಬ್ದುಲ್ಲಾ, ನಬಿಲ್‌ ಅನ್ಸಾರ್‌, ಮಾಜಿ ಅಧ್ಯಕ್ಷ ಜಿ. ಪ್ರಕಾಶ್‌, ನಜೀರ್‌ ಅಹಮ್ಮದ್‌, ನಾಗರಾಜ್‌, ಪರಮೇಶ್ವರಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷ ಡಾ| ದಾದಾಪೀರ್‌, ಕಾರ್ಯಾಧ್ಯಕ್ಷ ಜಗ ದೀಶ್‌, ಮಹಿಳಾ ಯುವ ಕಾಂಗ್ರೆಸ್‌ ಅಧ್ಯಕ್ಷೆ ಇಂದಿರಮ್ಮ, ತಾಪಂ ಅಧ್ಯಕ್ಷೆ ಡಿ. ಬೋರಮ್ಮ, ಎಸ್‌ಟಿ ಘಟಕದ ಟಿ.ಎಸ್‌. ಪಾಲಯ್ಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next