Advertisement

Election campaign: ಆಂಧ್ರದಲ್ಲಿ ಕಾಂಡೋಮ್‌ ಪ್ಯಾಕ್‌ ಮೂಲಕ ಚುನಾವಣಾ ಪ್ರಚಾರ!

09:45 PM Feb 22, 2024 | Team Udayavani |

ಅಮರಾವತಿ: ರಾಜಕೀಯಕ್ಕೂ ಕಾಂಡೋಮ್‌ಗಳಿಗೂ ಎತ್ತಣಿಂದೆತ್ತ ಸಂಬಂಧ ಹೇಳಿ? ಆದರೆ ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಕಾಂಡೋಮ್‌ ಪ್ಯಾಕ್‌ಗಳು ಬಳಕೆಯಾಗುತ್ತಿವೆ ಅಂದರೆ ನಂಬು ತ್ತೀರಾ? ನಂಬಲೇಬೇಕು.

Advertisement

ಆಂಧ್ರದ ಆಡಳಿತ ಪಕ್ಷ ಮತ್ತು ಪ್ರತಿಪಕ್ಷವು ತಮ್ಮ ಪಕ್ಷದ ಹೆಸ ರನ್ನು ಮುದ್ರಿ ಸಿ ಸಾರ್ವಜನಿಕರಿಗೆ ಕಾಂಡೋಮ್‌ ಪ್ಯಾಕ್‌ ವಿತರಿಸುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.

ಸಿಎಂ ಜಗನ್‌ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಪಾರ್ಟಿ ಮತ್ತು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಕಾರ್ಯಕರ್ತರು ಮತದಾರರಿಗೆ ಕಾಂಡೋಮ್‌ ಪ್ಯಾಕ್‌ ವಿತರಿಸುತ್ತಿರುವುದರ ವಿಡಿಯೋ ಕೂಡ ವೈರಲ್‌ ಆಗಿದೆ. ಮತ್ತೂಂದು ವಿಡಿಯೋದಲ್ಲಿ, ಕಾಂಡೋಮ್‌ ಪ್ಯಾಕ್‌ ವಿತರಣೆ ಬಗ್ಗೆ ವ್ಯಕ್ತಿಯೊಬ್ಬ ಪ್ರಶ್ನಿಸಿದಾಗ, ಟಿಡಿಪಿ ಕಾರ್ಯಕರ್ತ ಎನ್ನಲಾಗಿರುವ ವ್ಯಕ್ತಿ, ಮನೆಯಲ್ಲಿ ಮಕ್ಕಳು ಜಾಸ್ತಿಯಿದ್ದರೆ ಹೆಚ್ಚು ಹಣ ವಿತರಿಸಬೇಕಾಗುತ್ತದೆ. ಹೀಗಾಗಿ ಕಾಂಡೋಮ್‌ ಪ್ಯಾಕ್‌ ವಿತರಿಸಲಾಗುತ್ತಿದೆ ಎಂದು ಉತ್ತರಿಸುತ್ತಾನೆ.

 

Advertisement

Udayavani is now on Telegram. Click here to join our channel and stay updated with the latest news.

Next