Advertisement

ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ

07:32 PM Mar 28, 2021 | Team Udayavani |

ಹಿರೇಬಾಗೇವಾಡಿ: ಮನೆಯಲ್ಲಿನ ಕಾರ್ಯಕ್ರಮಗಳಲ್ಲಿ ಹೇಗೆ ನಾವು ಸ್ವಇಚ್ಛೆಯಿಂದ ಪಾಲ್ಗೊಂಡು ನಮ್ಮ ನಮ್ಮ ಪಾತ್ರ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆಯೋ ಹಾಗೆಯೇ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ 15 ದಿನಗಳ ಕಾಲ ಸ್ವ ಇಚ್ಛೆಯಿಂದ ಸಮಯ ನೀಡಿ ಮಂಗಲಾ ಅಂಗಡಿಯವರು ಕನಿಷ್ಠ 5 ಲಕ್ಷಕ್ಕಿಂತಲೂ ಅ ಧಿಕ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಹೇಳಿದರು.

Advertisement

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಯವರ ಪರವಾಗಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಿ. ಸುರೇಶ ಅಂಗಡಿಯವರನ್ನು ಮೂರುವರೆ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೆವು. ಈಗ ಅದರ ಅಂತರ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು. ಮಂಗಲಾ ಅಂಗಡಿ ಮಾತನಾಡಿ, ದಿ. ಸುರೇಶ ಅಂಗಡಿಯವರಿಗೆ 4 ಬಾರಿ ಬೆಂಬಲಿಸಿ ಗೆಲ್ಲಿಸಿದ್ದೀರಿ. ಹಾಗೆಯೇ ಈಗ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯಲ್ಲಿ ನನಗೂ ಬೆಂಬಲಿಸಿ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು ನಂತರ ಮೋಹನ ಅಂಗಡಿ, ಚೇತನ ಅಂಗಡಿ, ಸಿದ್ದಪ್ಪ ಹುಕ್ಕೇರಿ ಮಾತನಾಡಿದರು.

ಹಿರೇಬಾಗೇವಾಡಿಯಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಂಗಲಾ ಅಂಗಡಿಯವರು ನಂತರ ಕೇದಾರ ಪೀಠದ ಶಾಖಾಮಠ ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅರಳಿಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ದೇವರು, ಬಡೆಕೊಳ್ಳಮಠ ಸದ್ಗುರು ನಾಗೇಂದ್ರ ಸ್ವಾಮೀಜಿ ಹಾಗೂ ಜಾಲಿ ಕರೆಮ್ಮ ದೇವಸ್ಥಾನದ ಉಳವಪ್ಪಜ್ಜನವರ ಆಶೀರ್ವಾದ ಪಡೆದುಕೊಂಡರು. ಘೂಳಪ್ಪ ಹೊಸಮನಿ, ಮೋಹನ ಅಂಗಡಿ, ಶ್ರದ್ಧಾ ಶೆಟ್ಟರ, ಚೇತನ ಅಂಗಡಿ, ಬಸನು ಸಪ್ಪಡ್ಲಿ, ಸಿದ್ದಪ್ಪ ಹುಕ್ಕೇರಿ, ರಘು ಪಾಟೀಲ, ಈರಪ್ಪ ಅರಳಿಕಟ್ಟಿ, ಫಡಿಗೌಡ ಪಾಟೀಲ, ಮಂಜುನಾಥ ಕುಂಬಾರ, ನೀಲಕಂಠ ಪಾರ್ವತಿ, ಪ್ರವೀಣ ಇಳಿಗೇರ, ಬಸಪ್ಪ ವಾಲಿಶೆಟ್ಟಿ, ನವೀನ ತೋಟಗಿ, ಚಂದ್ರು ಅಂಗಡಿ, ಚಂದ್ರು ಕಪರಿ, ರಾಜು ಕಪರಿ, ಬಾಬು ಫಡಗಲ್‌, ಶಂಕರಗೌಡ ಪಾಟೀಲ, ಸಾಗರ ಕೋಶಾವರ, ಉಳವಪ್ಪ ಚಚಡಿ, ಮಂಜು ಧರೆನ್ನವರ, ಆನಂದ ಪೊಲೀಶಿ, ಯಲ್ಲಪ್ಪ ಧರೆನ್ನವರ, ಮಲ್ಲಿಕಾರ್ಜುನ ಕುರಬರ, ಆನಂದ ನಂದಿ, ಮಲಗೌಡ ಹಾದಿಮನಿ, ರವಿ ಪಾರ್ವತಿ, ಸಂತೋಷ ಅಂಗಡಿ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next