Advertisement

ಬೈಂದೂರಿನಲ್ಲಿ ಶೇ.75.30; ಕಾಸರಗೋಡಿನಲ್ಲಿ ಶೇ. 79.02 ಮತದಾನ

11:50 PM Apr 23, 2019 | Team Udayavani |

ಕುಂದಾಪುರ/ಬೈಂದೂರು: ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಶೇ.75.30 ಮತದಾನವಾಗಿದೆ. ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಲ್ಲಿ ಕೇವಲ ಶೇ. 59.05ರಷ್ಟು ಮತದಾನವಾಗಿತ್ತು.

Advertisement

ಕುಂದಾಪುರ ಮತ್ತು ಬೈಂದೂರಿನ ಒಟ್ಟು 65 ಗ್ರಾಮಗಳ 246 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 2,26,587 ಮತದಾರರಿದ್ದು, ಶೇ.75.30 ಮಂದಿ ಮತ ಚಲಾಯಿಸಿದ್ದಾರೆ.

ಕೈಕೊಟ್ಟ ವಿವಿಪ್ಯಾಟ್‌
ವಾರಾಹಿ ಮತಗಟ್ಟೆಯಲ್ಲಿ 4 ಬಾರಿ ವಿವಿ ಪ್ಯಾಟ್‌ ಸಮಸ್ಯೆಯಿಂದ ತೊಂದರೆಯಾದರೆ ಜನ್ಸಾಲೆಯಲ್ಲಿ 2 ಗಂಟೆ ಮತದಾನ ವಿಳಂಬಗೊಂಡಿತು. ಸಿದ್ದಾಪುರ, ಹೆಮ್ಮಾಡಿ, ವಂಡ್ಸೆಯಲ್ಲೂ ತೊಂದರೆಯಾಗಿತ್ತು. ಖಂಬದಕೋಣೆ, ಆಲೂರು, ಗುಡ್ಡೆಯಂಗಡಿ, ಎರು ಕೋಣೆ, ಹೊಸೂರು, ಕಡಲಿ ಹೊಸೂರುಗಳಲ್ಲಿ ಮತದಾನ ಆರಂಭ ವಿಳಂಬವಾಗಿತ್ತು.

ನಕ್ಸಲ್‌ ಪೀಡಿತ ಹಳ್ಳಿಹೊಳೆ, ಮಚ್ಚಟ್ಟು, ತೊಂಬಟ್ಟು ಭಾಗದಲ್ಲಿ ಭದ್ರತೆಗೆ ಅರೆ ಸೇನಾ ಪಡೆ ಮತ್ತು ನಕ್ಸಲ್‌ ನಿಗ್ರಹ ದಳದ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪಶ್ಚಿಮ ವಲಯದ ಐಜಿಪಿ ಅರುಣ್‌ ಚಕ್ರವರ್ತಿ, ಡಿಸಿ ಹೆಪ್ಸಿಬಾ ರಾಣಿ, ಎಸ್ಪಿ ನಿಶಾ ಜೇಮ್ಸ್‌, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮತಗಟ್ಟೆಗಳಿಗೆ ಭೇಟಿ ನೀಡಿದರು. ಎಡಿಸಿ ವಿದ್ಯಾ ಕುಮಾರಿ ಮಸ್ಟರಿಂಗ್‌ ಕೇಂದ್ರದಲ್ಲಿ ಉಸ್ತುವಾರಿ ವಹಿಸಿದ್ದರು. ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಬಿ.ಕೆ., ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

ಬಿಜೂರು: ಮತ ಬಹಿಷ್ಕಾರ!
ಕುಡಿಯುವ ನೀರಿಗೆ ಪರಿಹಾರ ಆಗ್ರಹಿಸಿ ಬಿಜೂರು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಅಧಿಕಾರಿಗಳ ಮನವೊಲಿಕೆ ಬಳಿಕ 904 ಮತದಾರರಲ್ಲಿ 614 ಮಂದಿ ಮತ ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next