Advertisement
ಒಬ್ಬ ಮತದಾರನಿಗೆ 15 ಅಭ್ಯರ್ಥಿಗಳಿಗೆ ಮತದಾನ ಮಾಡುವ ಅವಕಾಶ ಇತ್ತು. ತಾಲೂಕಿನ ಎಲ್ಲಾ ಮತ ದಾರರು ನಗರದಲ್ಲಿನ ಮತಕೇಂದ್ರದಲ್ಲಿಯೇ ಮತ ದಾನ ಮಾಡಲು ಅವಕಾಶವಿದ್ದ ಪರಿಣಾಮ ಜನಸಾಂದ್ರತೆ ಹೆಚ್ಚಾಗಿತ್ತು. ಚುನಾವಣೆಯ ಸ್ಥಳದಲ್ಲಿ 10ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.
Related Articles
Advertisement
ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಮತಕೇಂದ್ರದ ಸಮೀಪ ಪ್ರಚಾರ ಮಾಡಿದರೂ ಈ ಬಗ್ಗೆ ತಾಲೂಕಿನಲ್ಲಿ ನೇಮಕ ಮಾಡಲಾಗಿದ್ದ ಕ್ಲಸ್ಟರ್ ಅಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನಿದ್ದರು.
ಗೊಂದಲದಲ್ಲಿ ಮತದಾರರು: ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಹಾಗೂ ಕೃಷ್ಣಗಿರಿ ಜಿಲ್ಲೆಗಳಲ್ಲಿ ರಾಜ್ಯ ಒಕ್ಕಲಿಗರ ಸಂಘದ 15 ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ನಡೆ ದಿದ್ದು, 141ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಪರಿಣಾಮ ಮತದಾರರು ಬ್ಯಾಲೇಟ್ ಪೇಪರ್ ನೋಡು ತ್ತಿದಂತೆ ಗಾಬರಿಯಾಗಿದ್ದರು. ಕೆಲವರು ಗೊಂದಲ ದಲ್ಲಿ ಮತಚಲಾವಣೆ ಮಾಡಿದರೇ, ಕೆಲವರು ಪೇಪರ್‌ಗಳಲ್ಲಿ ನಂಬರ್ ಬರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಪೆಯಂತೆ ಇದ್ದ ಬ್ಯಾಲೇಟ್ ಪೇಪರ್‌ನಲ್ಲಿ ಗೊಂದಲದಿಂದ ಜನರು 15ಕ್ಕೂ ಹೆಚ್ಚು ಮತಗಳನ್ನು ಹಾಕಿರುವ ಮಾತುಗಳು ಕೇಳಿಬಂದಿದೆ. ನೆಚ್ಚಿನ ಅಭ್ಯರ್ಥಿಗಳ ಹುಡುಕಾಟದಲ್ಲಿ ಸಮಯ ಸಾಲದೇ ಸಿಕ್ಕವರಿಗೆ ಮತಚಲಾವಣೆ ಮಾಡಿರುವ ಮಾತುಗಳು ಮತದಾರರಿಂದ ಕೇಳಿಬಂತು.
ಎಂಎಲ್‌ಸಿ ಚುನಾವಣೆಗಿಂತ ಭರ್ಜರಿ: ಡಿ.10ರಂದು ನಡೆದ ವಿಧಾನಪರಿಷತ್ ಚುನಾವಣೆಗಿಂತ ಭರ್ಜರಿ ಪ್ರಚಾರ ಹಾಗೂ ಮತದಾನ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಡೆದಿದ್ದು, ಒಂದು ಸಂಘದ ಚುನಾವಣೆ ಈ ಮಟ್ಟದಲ್ಲಿ ನಡೆದಿ ರುವುದು ಆಶ್ಚರ್ಯ ಎಂಬುದು ಸಾರ್ವಜನಿಕ ಅಭಿ ಪ್ರಾಯ. ತಾಲೂಕಿನಲ್ಲಿ ಕಡಿಮೆ ಮತದಾರರಿದ್ದರು ಗ್ರಾಮ ಗ್ರಾಮಗಳಲ್ಲಿ ಕೆಲವು ಅಭ್ಯರ್ಥಿಗಳು ಪ್ರಚಾರ ಮಾಡಿರುವುದು ವಿಶೇಷ.