Advertisement
ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರವೂ ಇದಾಗಿದ್ದು, ಅನಗತ್ಯ ವಿವಾದಕ್ಕೆಡೆ ಮಾಡದೆ ಹಾಗೂ ಬಣ ರಾಜಕೀಯಕ್ಕೂ ಅವಕಾಶ ಕೊಡದೆ ಸಂಘಟನ ಸಾಮರ್ಥ್ಯವಿರುವ ಹೊಸ ಮುಖವನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಸೂತ್ರ ರೂಪಿಸುತ್ತಿದ್ದಾರೆ.
ಹೊಸ ಅಭ್ಯರ್ಥಿ ತಣ್ತೀಸಿದ್ಧಾಂತ ಆಧಾರಿತವಾಗಿಯೇ ಟಿಕೆಟ್ ನೀಡಲು ವರಿಷ್ಠರು ನಿರ್ಧರಿ ಸಿದ್ದಾರೆ ಎನ್ನಲಾಗಿದೆ. ಪಕ್ಷ ನಿಷ್ಠೆಗೆ ಆದ್ಯತೆ ನೀಡುವ ಮೂಲಕ ಅಚ್ಚರಿಯ ಆಯ್ಕೆಗೆ ಮುಂದಾಗುವುದಲ್ಲದೇ ಸಾಮಾಜಿಕ ನ್ಯಾಯ ಪಾಲನೆಯ ಸಂದೇಶ ರವಾನಿಸುವ ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ ಎನ್ನುತ್ತವೆ ಸ್ಥಳೀಯ ಮೂಲಗಳು.
Related Articles
ಕ್ಷೇತ್ರಕ್ಕೆ ಹೊರಗಿನಿಂದ ಅಭ್ಯರ್ಥಿಯನ್ನು ತರುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ಇಲ್ಲ. ಇತ್ತೀಚೆಗೆ ಪಕ್ಷದ ಹಿರಿಯರ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಹೊರಗಿನವರಿಗೆ ಅವಕಾಶ ನೀಡದಂತೆ ಒತ್ತಾಯಿಸುವ ನಿರ್ಣಯ ಕೈಗೊಂಡು ವರಿಷ್ಠರಿಗೆ ತಲುಪಿಸಲಾಗಿದೆ. ಒಟ್ಟೂ ಬೆಳವಣಿಗೆಯಿಂದ ಮತ್ತೆ ಕೆಲವು ಹೆಸರುಗಳು ಚಾಲ್ತಿಗೆ ಬಂದಿದ್ದು, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ ರಾವ್, ಆರ್‌ಎಸ್‌ಎಸ್ ಮುಂದಾಳು ಯತೀಶ್ ಆರುವಾರು ಅವರ ಹೆಸರು ಮುಂಚೂಣಿಯಲ್ಲಿವೆ. ದಿನೇಶ್ ಮೆದು ಅವರ ಹೆಸರೂ ಕೇಳಿ ಬಂದಿದ್ದು, ಅವರು ಕ್ಷೇತ್ರದವರಲ್ಲ ಎನ್ನುವ ಅಂಶವೂ ಚರ್ಚೆಯಲ್ಲಿದೆ.
Advertisement