ಗಂಗಾವತಿ: ಮುಂಬರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಶಾಂತಿ ಸುವ್ಯವಸ್ಥೆ ನಡೆಸಲು ಜಿಲ್ಲಾಡಳಿತ ಮತ್ತು ರಾಜ್ಯ ಚುನಾವಣಾ ಅಯೋಗದ ನಿರ್ದೇಶನದಂತೆ ನಗರದಲ್ಲಿ ಪ್ಯಾರಾ ಮಿಲಿಟರಿ ಪಡೆಯ ಸೈನಿಕರ ಪಥ ಸಂಚಲನವನ್ನು ಆಯೋಜನೆ ಮಾಡಲಾಗಿತ್ತು.
ನಗರದ ಶ್ರೀ ಚನ್ನಬಸವ ಸ್ವಾಮಿ ವೃತ್ತದಲ್ಲಿ ಪಥ ಸಂಚಲನಕ್ಕೆ ಚುನಾವಣಾಧಿಕಾರಿ ಮತ್ತು ಸಹಾಯಕ ಆಯುಕ್ತ ಬಸವಣ್ಣಪ್ಪ ಕಾಲಶೆಟ್ಟಿ ಚಾಲನೆ ನೀಡಿದರು.
ಶ್ರೀ ಚನ್ನಬಸವ ಸ್ವಾಮಿ ವೃತ್ತದಿಂದ ಮಹಾವೀರ ವೃತ್ತ, ಮಹಾತ್ಮ ಗಾಂಧಿ ವೃತ್ತ , ಗಣೇಶ ವೃತ್ತ ದುರ್ಗಮ್ಮ ದೇವಸ್ಥಾನ ಸೇರಿದಂತೆ ಬಸ್ ಸ್ಟ್ಯಾಂಡ್ ಹಾಗೂ ಶ್ರೀಕೃಷ್ಣದೇವರಾಯ ವೃತ್ತಗಳ ಮೂಲಕ ಪಥ ಸಂಚಲನ ನಗರದ ಪೊಲೀಸ್ ಠಾಣೆಗೆ ಮುಕ್ತಾಯಗೊಂಡಿತು.
ಇನ್ನೂ ಎರಡು ದಿನಗಳ ಕಾಲ ನಗರದ ಗ್ರಾಮೀಣ ಭಾಗದ ಸೂಕ್ಷ್ಮ ಮತ್ತು ಅಧಿಸೂಕ್ಷ್ಮ ಪ್ರದೇಶ ಮತ್ತು ವಾರ್ಡುಗಳ ಪ್ರಮುಖ ರಸ್ತೆಗಳಲ್ಲಿ ಸೈನಿಕರ ಪಥಸಂಚಲನೆ ನಡೆಯಲಿದೆ. ಈ ಸಂದರ್ಭದಲ್ಲಿ ಆರ್ ಓ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, 2023ರ ವಿಧಾನಸಭಾ ಚುನಾವಣೆ ಪ್ರಕ್ರಿಯೆನ್ನು
ಶಾಂತಿ ಮತ್ತು ಸೌಹಾರ್ದತೆ ಮತ್ತು ನ್ಯಾಯ ನಿರ್ಬಿಡೆಯಿಂದ ನಡೆಸುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ:
Congress: ವಿಜಯಪುರದಲ್ಲಿ ಹೆಚ್ಚಿದ ಬಂಡಾಯ; ಕಮಲ ಸಖ್ಯಕ್ಕೆ ಮುಂದಾದ ಕೈ ಟಿಕೆಟ್ ಆಕಾಂಕ್ಷಿ
ಈಗಾಗಲೇ ಗಂಗಾವತಿ ಕ್ಷೇತ್ರಕ್ಕೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ಮತ್ತು ಪ್ಯಾರಾ ಮಿಲಿಟರಿಯ ಸೈನಿಕ ಪಡೆಯನ್ನು ರವಾನಿಸಲಾಗಿದೆ .ಇಡೀ ಕ್ಷೇತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸೈನಿಕರ ಪಥ ಲಸಂಚಲನೆ ನಡೆಯಲಿದೆ ಸಾರ್ವಜನಿಕರು ಶಾಂತಿ ಸೌರ್ಯದಿಂದ ನಿರ್ಭೀಡಿಯಿಂದ ಮತದಾನ ಮಾಡಬೇಕು. ಜೊತೆಗೆ ಯಾವುದೇ ಚುನಾವಣಾ ನೀತಿ ಸಹಿತ ಉಲ್ಲಂಘನೆಯ ಪ್ರಕರಣಗಳು ನಡೆದಂತೆ ಎಚ್ಚರಿಕೆ ವಹಿಸಬೇಕು.ಒಂದುವೇಳೆ ನೀತಿ ಸಹಿತ ಉಲ್ಲಂಘನೆ ಪ್ರಕರಣ ನಡೆದರೆ ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಕೊಡುವಂತೆ ಮನವಿ ಮಾಡಿದರು.
ಸಾರ್ವಜನಿಕರು ಪಥಸಂಚನೆಯಲ್ಲಿ ಪಾಲ್ಗೊಂಡಿದ್ದ ಸೈನಿಕರ ಮೇಲೆ ಹೂವನ್ನು ಚೆಲ್ಲಿ ಸ್ವಾಗತ ಮಾಡಿದರು.ಸೈನಿಕರ ಪರವಾಗಿ ಜೈಯ ಘೋಷಗಳನ್ನು ಕೂಗಿದರು.