Advertisement

Election 2023: ಮಂಗಳಮುಖಿ, ವಿಕಲಚೇತನರಿಂದ ಸ್ವೀಪ್ ಎಕ್ಸ್‌ಪ್ರೆಸ್‌ಗೆ ಚಾಲನೆ

06:24 PM Apr 09, 2023 | Team Udayavani |

ರಬಕವಿ-ಬನಹಟ್ಟಿ : ಯುವ ಸಮುದಾಯ ಸೇರಿದಂತೆ ಎಲ್ಲರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು, ತಾಲೂಕಾಡಳಿತವು ಸ್ವೀಪ್ ಎಕ್ಸ್‌ಪ್ರೆಸ್‌ ವಾಹನಕ್ಕೆ ಮಂಗಳಮುಖಿ, ವಿಕಲಚೇತನರಿಂದ ಚಾಲನೆ ನೀಡುವದರೊಂದಿಗೆ ಸಂಚಾರಿ ಅಣುಕು ಮತಗಟ್ಟೆ ಅಭಿಯಾನಕ್ಕೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಹಸಿರು ನಿಶಾನೆ ತೋರಿಸಿದರು.

Advertisement

ತಾಲೂಕಾಡಳಿತದ ಆವರಣದಲ್ಲಿ ಸ್ವೀಪ್ ವತಿಯಿಂದ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಿದ ಜಾಗೃತಿ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.

ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮಾತನಾಡಿ, ಪ್ರಜಾಪ್ರಭುತ್ವದ ಭದ್ರತೆಗೆ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದರು. ಪ್ರತಿ ಬಾರಿ ನಗರ ಪ್ರದೇಶದಿಂದ ಕಡಿಮೆ ಮತದಾನವಾಗುತ್ತಿರುವದರಿಂದ ಈ ಬಾರಿ ಶೇ.85 ರಷ್ಟು ಮತದಾನವಾಗಲೇಬೇಕೆಂಬ ಉದ್ದೇಶ ಹೊಂದಲಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಉತ್ತಮ ನಾಗರಿಕ ಮತದಾರರಾಗಬೇಕೆಂದರು.

ಇದನ್ನೂ ಓದಿCongress Party: ರೆಡ್ಡಿ ವಿರುದ್ಧ ಇನ್ನೂ ‘ರೆಡಿ’ ಆಗಿಲ್ಲ ಕಲಿಗಳು

ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಡಾ.ಶಶಿಧರ ನಾಡಗೌಡ, ರಬಕವಿ-ಬನಹಟ್ಟಿ ತಹಶೀಲ್ದಾರ ಡಾ. ಡಿ. ಎಚ್. ಹೂಗಾರ, ತೇರದಾಳ ತಹಶೀಲ್ದಾರ್ ಕಿರಣ ಬೆಳವಿ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next