Advertisement

2023ರ ಎಲೆಕ್ಷನ್‌: ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ

04:41 PM Sep 04, 2021 | Team Udayavani |

ಹೊಳೆನರಸೀಪುರ: ರಾಜ್ಯದಲ್ಲಿ ಬರುವ 2023 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಜೆಡಿಎಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜಿಪಂ ಸದಸ್ಯೆ ಹಾಗು ಜಿಪಂ ಶಿಕ್ಷಣ ಹಾಗು ಆರೋಗಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ನುಡಿದರು.

Advertisement

ಪಟ್ಟಣದ ಚೆನ್ನಾಂಬಿಕ ಕನ್ವೆಂಷನಲ್‌ ಹಾಲ್‌ ನಲ್ಲಿ ತಾಲೂಕು ಮಟ್ಟದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕುಮಾರಸ್ವಾಮಿ ಅವರ ನೇತ್ರತ್ವದಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ದ. ಆದರೆ ಅದನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಪಕ್ಷ ಕಾರ್ಯಕತರುಗಳು ಮತ್ತು ಅಭಿಮಾನಿಗಳು ಪಕ್ಷ ದ ‌ ಸದಸ್ಯತ್ವವನ್ನು ಪಡೆದುಕೊಳ್ಳುವುದರಿಂದ ಮತ್ತಷ್ಟು ಬಲಗೊಳ್ಳಲಿದೆ. ಆದ್ದರಿಂದ ಇಂದಿನಿಂದ ಜಿಲ್ಲೆ ಹಾಗು ತಾಲೂಕಿನಲ್ಲಿ ಜೆಡಿಎಸ್‌ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಲು ‌ ಈ ಸಭೆ ಕರೆಯಲಾಗಿದೆ ಜೊತೆಗೆ ಬರುವ ತಾಪಂ,ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಜಯಬೇರಿ ಭಾರಿಸಲು ನಮ್ಮ ಮತದಾರರ ಆರ್ಶಿವಾದ ಬೇಕಿದೆ ಎಂದರು.

ಇದನ್ನೂ ಓದಿ:ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಇಳಿಕೆ: ಬಿಜೆಪಿ ಶಾಸಕ ಸೌಮೆನ್ TMCಗೆ ಸೇರ್ಪಡೆ

ಜೆಡಿಎಸ್‌ ಪಕ್ಷ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕುಗಳಲ್ಲಿ ಪಕ್ಷದ ಮುಖಂಡರುಗಳು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು
ಪ್ರತಿಯೊಬ್ಬರು ಸದಸ್ಯತ್ವ ಪ ‌ಡೆದು ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಕಾರಣರಾಗಬೇಕೆಂದು ಮನವಿ ಮಾಡಿದರು.

ಯಾವ ತಾಲೂಕು ಮತ್ತು ಜಿಲ್ಲೆ ಅತಿಯಾದ ಹೆಚ್ಚು  ಸದಸ್ಯತ್ವವನ್ನು ಮಾಡುವುದೋ ಆ ಜಿಲ್ಲೆಯ  ಮತ್ತು ತಾಲೂಕಿನ ಅಧ್ಯಕ್ಷರನ್ನು ಮಾಜಿ‌
ಪ್ರಧಾನಿ ದೇವೇಗೌಡ ಅವರು ರಾಜ್ಯ ಮಟ್ಟದಲ್ಲಿ ಗೌರವಿಸಿ ಸನ್ಮಾನಿಸಲಿದ್ದಾರೆ. ಈ ಸನ್ಮಾನದ ಭಾಗ್ಯ ನಮ್ಮ ಜಿಲ್ಲೆ ಮತ್ತು ತಾಲೂಕಿಗೆ ಲಭಿಸುವಂತಾಗಬೇಕು.ಎಂಬ ಭಯಕೆ ತಮ್ಮದಾಗಿದೆ.ಇದಕ್ಕೆ ಕಾರಣ ದೇವೇಗೌಡ ಸ್ವಂತ ಜಿಲ್ಲೆ ಮತ್ತು ತಾಲೂಕು ಹೊಳೆನರಸೀಪುರ ಆಗಿರುವುದರಿಂದ ನಮ್ಮ ತಾಲೂಕಿಗೆ ಈ ಭಾಗ್ಯ ದೊರಕಲಿ ಎಂಬ ಹೆಬ್ಬಯಕೆ ತಮ್ಮದಾಗಿದೆ ಎಂದರು.

Advertisement

ಸದಸ್ಯತ್ವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗು ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ, ಜಿಲ್ಲೆ ಮತ್ತು ತಾಲೂಕಿಗೆ ಬಹಳಷ್ಟು ಅಭಿವೃದ್ದಿಗಳ
ಕಾಮಗಾರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ವಿವರಿಸಿದರು. ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ತಾಲೂಕಿನ
ಗ್ರಾಮೀಣ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next