Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕಿತ್ತೊಗೆಯಲು ಜನ ನಿರ್ಧರಿಸಿದ್ದಾರೆ. ಅಧಿಕಾರ ಮಾಡುವ ಅರ್ಹತೆ ಅದಕ್ಕೆ ಇಲ್ಲ. ನನ್ನ ಮುಖ ನೋಡಿ ಮತ ಹಾಕಿ ಅಂತ ಮೋದಿ ಹೇಳುತ್ತಾರೆ. ಮತದಾರರು ಎಷ್ಟು ಬಾರಿ ಇವರ ಮುಖ ನೋಡಬೇಕು? ಮೋದಿ ಕರ್ನಾಟಕದ ಸಿಎಂ ಆಗುತ್ತಾರಾ? ಅಮಿತ್ ಶಾ ರಾಜ್ಯದ ಗೃಹ ಸಚಿವ ಆಗುತ್ತಾರಾ? ಮೋದಿ, ಶಾ ನೋಡಿ ಮತ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಹ ಹೇಳುತ್ತಾರೆ. ಹಾಗಿದ್ದರೆ ಇವರು ಏನು ಕೆಲಸ ಮಾಡಿಲ್ಲ ಎಂಬ ಅರ್ಥವೇ? ನೀವು ಮಾಡಿದ ಕೆಲಸ ಹೇಳಿ ಮತ ಕೇಳಿ ಎಂದು ಕುಟುಕಿದರು.
Related Articles
Advertisement
ಖರ್ಗೆ ರೀತಿ ಜಗದೀಶ ಶೆಟ್ಟರ ಅವರನ್ನು ಟಾರ್ಗೆಟ್ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್ ತಮ್ಮಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್ ಗೆ ಬಂದಿದ್ದಾರೆ. ಹೀಗಾಗಿ ಅವರನ್ನುಟಾರ್ಗೆಟ್ ಮಾಡುವುದು ಸಹಜ. ನಾವು ಸಹ ಅವರಷ್ಟೇ ಫೋರ್ಸ್ ಹಾಕಿ ಗೆದ್ದು ಬರಲು ಯತ್ನಿಸುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಯಾಗಿದೆ. ಖಂಡಿತ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಜನವೇ ಬಿಜೆಪಿ ಸರ್ಕಾರ ಕಿತ್ತೊಗೆಯುವ ಪಣ ತೊಟ್ಟಿದ್ದಾರೆ. ಇದು ದೇಶದ ಚುನಾವಣೆ ಅಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಇಲ್ಲಿಗೆ ಬಂದು ಲೋಕಸಭೆಗಿಂತ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳು ಆಗುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅದರ ಅರ್ಥ ಕರ್ನಾಟಕದ ಜನ ಅಷ್ಟು ಕೆಟ್ಟವರಿದ್ದಾರಾ ಪ್ರಚೋದನಕಾರಿ ಮಾತುಗಳನ್ನು ಶಾ ಬಿಡಬೇಕು. ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.