ದಾವಣಗೆರೆ: ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ಸಂಗೀತ ಶಿಕ್ಷಕಿ ಸಿ.ಕೆ. ರುದ್ರಾಕ್ಷಿಬಾಯಿ ಆಯ್ಕೆಯಾಗಿದ್ದಾರೆ ಎಂದು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.
ದಾವಣಗೆರೆ ತಾಲೂಕಿನ ಪುಟ್ಟ ಹಳ್ಳಿ ಚಿನ್ನಸಮುದ್ರ ಮೂಲದವರಾದ ರುದ್ರಾಕ್ಷಿಬಾಯಿ ಶ್ರೀ ಸಿದ್ಧಗಂಗಾ ಸಂಸ್ಥೆ ಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ 500ಕ್ಕೂ ಹೆಚ್ಚು ಕಡೆ ಕಾರ್ಯಕ್ರಮಗಳ ನೀಡಿದ್ದಾರೆ. ಅಂತಹ ಗ್ರಾಮೀಣ ಪ್ರತಿಭೆಯನ್ನ ಗುರುತಿಸಿ ಜಾನಪದ ಅಕಾಡೆಮಿಯ ಸಹ ಸದಸ್ಯೆಯನ್ನಾಗಿ ಆಯ್ಕೆ ಮಾಡಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಶ್ರೀ ಸಿದ್ಧಗಂಗಾ ಸಂಸ್ಥೆ ಯ ಡಾ| ಡಿ.ಎಸ್. ಜಯಂತ್ ಮಾತನಾಡಿ, ಸಿ.ಕೆ. ರುದ್ರಾಕ್ಷಿಬಾಯಿ ನಮ್ಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಮೆರಗು ನೀಡುತ್ತಿದ್ದಾರೆ. ಸಾಕಷ್ಟು ಸಂಕಷ್ಟಗಳ ನಡುವೆಯೂ ಜಾನಪದ ಅಕಾಡೆಮಿಯ ಸಹ ಸದಸ್ಯೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು. ಸಿ.ಕೆ. ರುದ್ರಾಕ್ಷಿಬಾಯಿ ಮಾತನಾಡಿ, ಅಪ್ಪಟ ಗ್ರಾಮೀಣ ಭಾಗದಿಂದ ಹೊರ ಬಂದಿರುವ ತಮ್ಮನ್ನು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಗುರುತಿಸಿ ಸಹ ಸದಸ್ಯೆಯನ್ನಾಗಿಆಯ್ಕೆ ಮಾಡಿದ್ದಾರೆ.
ಜಾನಪದ ಕ್ಷೇತ್ರಕ್ಕೆ ನನ್ನಿಂದಆಗುವ ಎಲ್ಲಾ ರೀತಿಯ ಕೆಲಸ ಮಾಡುವುದಾಗಿ ತಿಳಿಸಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎನ್. ಸ್ವಾಮಿ, ಕೆ. ರಾಘವೇಂದ್ರ ನಾಯರಿ, ಕೆ. ರಾಘವೇಂದ್ರನಾಯ್ಕ, ಸಿ. ಪುಟ್ಟ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ:ಗ್ರಾಮೀಣದಲ್ಲಿ ಬಿಜೆಪಿ ಬೇರು ಬಲವರ್ಧನೆ