Advertisement
ಪ್ರಥಮ ಹಂತದಲ್ಲಿ ಸುಮಾರು 12.8 ಕೋ.ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ದ್ವಿತೀಯ ಹಂತದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಲಿಂಗೇಶ್ವರ ಸನ್ನಿಧಿ, 2.40 ಕೋಟಿ ರೂ. ವೆಚ್ಚದಲ್ಲಿ ವೀರಭದ್ರ ದೇವರ ದೀಪದಳಿ, 1.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ, 1 ಕೋಟಿ ರೂ. ವೆಚ್ಚದಲ್ಲಿ ಸ್ವಾಗತ ಮಂಟಪ, ರಾಜಗೋಪುರ ನಿರ್ಮಾಣ ಸೇರಿದಂತೆ 13.20 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ವಿವಿಧ ವಾರ್ಡ್‌ಗಳ ನೂರಾರು ಕಾರ್ಯಕರ್ತರು ನಿರಂತರ ಕರಸೇವೆಯಲ್ಲಿ ತೊಡಗಿದ್ದಾರೆ.
ಅನುಜ್ಞಾ ಕಲಶ ಪ್ರಕ್ರಿಯೆ, ಬಾಲಾಲಯ ಪ್ರತಿಷ್ಠೆ ಇತ್ಯಾದಿ ಪೂರ್ಣಗೊಂಡಿದ್ದು, ಡಿ. 12ರಂದು ವಾಸ್ತುಪೂಜಾ ಪ್ರಕ್ರಿಯೆಗಳು ನಡೆಯಲಿವೆ. ಡಿ. 14ರಂದು ಬೆಳಗ್ಗೆ 11.50ಕ್ಕೆ ಶಿಲಾಪೂಜಾ ಪುರಸ್ಸರ ಶಿಲಾನ್ಯಾಸ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.