ಮಲ್ಪೆ: ಉದ್ಯಾವರ ಕನಕೋಡ-ಪಡುಕರೆಯ ಶ್ರೀ ಪಂಡರಿನಾಥ ಭಜನಾ ಮಂದಿರ, ಮಾತೃಮಂಡಳಿಗಳ ಆಡಳಿತ
ಮಂಡಳಿ ಸದಸ್ಯರು, ಭಕ್ತಾದಿಗಳು ಜತೆಯಾಗಿ ಸತತ 3ನೇ ವರ್ಷದಲ್ಲಿ ಸುಮಾರು 150 ಜನ ಮದುರೈ, ಕನ್ಯಾಕುಮಾರಿ, ರಾಮೇಶ್ವರ ತೀರ್ಥ ಕ್ಷೇತ್ರಗಳ ದರುಶನ ನಡೆಸಿದರು.
ಅಧ್ಯಕ್ಷ ಜನಾರ್ದನ ಕುಂದರ್ ಅವರ ನೇತೃತ್ವದಲ್ಲಿ ಫೆ.14 ರಂದು ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊರಟ ಈ ತೀರ್ಥ ಕ್ಷೇತ್ರ ಯಾತ್ರೆಯು ಫೆ.21 ರಂದು ಶೀÅ ಕ್ಷೇತ್ರಕ್ಕೆ ಹಿಂತಿರುಗುವ ಮೂಲಕ ಪುಣ್ಯಕ್ಷೇತ್ರ ದರುಶನದ ತೀರ್ಥ ಯಾತ್ರೆಯು ಯಶಸ್ವಿಯಾಗಿ ಸಮಾಪನಗೊಂಡಿತು.
ಧಾರ್ಮಿಕ ಕ್ಷೇತ್ರಗಳ ಸಂದರ್ಶನದಿಂದ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳಲಿದೆ ಎಂಬ ಮಹದಾಸೆಯಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಿಂದು ಬಾಂಧವರು ಒಟ್ಟಾಗಿ ತೀರ್ಥಕ್ಷೇತ್ರಗಳ ದರುಶನ ಭಾಗ್ಯ ಪಡೆಯುವುದು ಬಹಳ ಅಪರೂಪವಾಗಿದೆ. ಹಾಗಾಗಿ ಉದ್ಯಾವರ ಕನಕೋಡ-ಪಡುಕರೆಯ ಶೀÅ ಪಂಡರೀನಾಥ ಭಜನ ಮಂದಿರದ ಯೋಜಿತ ಈ ಕಾರ್ಯಕ್ರಮ ಮಾದರಿಯಾಗಿದೆ.
ರೈಲು ಹಾಗೂ ಬಸ್ಸುಗಳನ್ನು ಬಳಸಿಕೊಂಡು ಕೇರಳದ ಪಾಲಕ್ಕಾಡಿನಿಂದ ಪಳನಿಗೆ ತಲುಪಿ ದಂಡದಾಯುಧ ಪಾಣಿ, ಸುಬ್ರಹ್ಮಣ್ಯ ದೇವರ ದರ್ಶನ, ತಿರುಚಿಯಲ್ಲಿನ ಶ್ರೀರಂಗಮ್ ದೇವಸ್ಥಾನ, ತಂಜಾವೂರಿನ ಬೃಹದೀಶ್ವರ ದೇವಸ್ಥಾನ, ರಾಮೇಶ್ವರ, ಧನುಷ್ ಕೋಡಿ, ವಿಭೀಷಣ ದೇವಸ್ಥಾನ, ಮದುರೈ ಮೀನಾಕ್ಷಿ ಸುಂದರೇಶ್ವರ ದೇವರ ದರ್ಶನ, ಕನ್ಯಾಕುಮಾರಿ ವಿವೇಕಾನಂದ ರಾಕ್ ಮೇಮೋರಿಯಲ್ ದೇವಸ್ಥಾನ, ಗಾಂಧಿ ಮಂಟಪ, ತ್ರಿವೇಣಿ ಸಂಗಮ, ರುಚೀಂದ್ರಮ್ ದೇವಸ್ಥಾನ, ತಿರುವನಂತಪುರಂನ ಶೀÅ ಅನಂತಪದ್ಮನಾಭ ದೇವರ ದರ್ಶನ, ಅಮೃತಪುರಿ ಕಾಲ್ನಡಿಗೆ ಪಯಣದಲ್ಲಿ ಸಾಗಿ ಪೂರ್ಣ ನದಿಯಲ್ಲಿ ತೀರ್ಥಸ್ನಾನ, ಆದಿಗುರು ಶ್ರೀ ಶಂಕರಾಚಾರ್ಯರ ಜನ್ಮಸ್ಥಾನ, ಶ್ರೀ ಕೃಷ್ಣ ದೇವಸ್ಥಾನ ದರುಶನ, ಗುರುವಾಯೂರಿನ ಶೀÅ ದೇವರ ದರುಶನ ಸಹಿತ 7 ದಿನಗಳಲ್ಲಿ ಪುಣ್ಯಕ್ಷೇತ್ರಗಳ ಸಂದರ್ಶನಗಳನ್ನು ಪೂರೈಸಿರುತ್ತಾರೆ.
ಕಾಪು ಕೈಪುಂಜಾಲಿನಿಂದ ಹಿಡಿದು ಮಲ್ಪೆ, ಕೊಡವೂರು ವರೆಗಿನ ಜನರಿರುವ ಈ ತಂಡದಲ್ಲಿ ವಯೋವೃದ್ಧರೂ, ಮಹಿಳೆಯರೂ, ಮಕ್ಕಳೂ ಪಾಲ್ಗೊಂಡಿದ್ದರು.