ಇಳಕಲ್ಲ: ವಿದ್ಯಾರ್ಥಿಗಳು ಪಠ್ಯ ಪುಸ್ತಕವನಲ್ಲದೆ ಶ್ರೇಷ್ಠ ಮಟ್ಟದ ಕವಿಗಳು ರಚಿಸಿದ ಕಾವ್ಯ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ ಹೇಳಿದರು.
ಇಲ್ಲಿಯ ಚಿತ್ತರಗಿ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸೈಟಿಯ ವಿಜಯ ಮಹಾಂತೇಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2018-19ರ ಶೈಕ್ಷಣಿಕ ವರ್ಷದ ವಿಶೇಷ ಪ್ರತಿಭಾ ಪುರಸ್ಕಾರ ಸಮಾರಂಭ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಳಕಲ್ಲ-ಚಿತ್ತರಗಿ ಸಂಸ್ಥಾನದ ಗುರುಮಹಾಂತ ಶ್ರೀಗಳು ಮಾತನಾಡಿ, ಪ್ರತಿಯೊಂದು ಮಗುವಿಗೂ ದೈವದತ್ತವಾಗಿ ಜ್ಞಾನ ಭಂಡಾರ ಹೊಂದಿದ್ದು, ಅದನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅದಕ್ಕೆ ಪೂರಕವಾದ ಮಾರ್ಗದರ್ಶನ ನೀಡಬೇಕಾದದ್ದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ ಎಂದರು.
ಸಂಸ್ಥೆಯ ಉಪ-ಸಮಿತಿ ಚೇರಮನ್ನರು ಹಾಗೂ ಸಹಕಾರಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ರಾಜ್ಯ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾದ ದೊಡ್ಡನಗೌಡ ಪಾಟೀಲ, ಬಿಇಒ ಕಚೇರಿಯ ಶಿಕ್ಷಣ ಸಂಯೋಜಕರಾದ ಸಿದ್ದನಗೌಡ ಬಿ. ಪಾಟೀಲ ಹಾಗೂ ವಯೋನಿವೃತ್ತಿ ಹೊಂದಿದ ಪ್ರೌಢ ವಿಭಾಗದ ದೈಹಿಕ ಶಿಕ್ಷಕರಾದ ಗುರುಲಿಂಗಯ್ಯ ಮಠಪತಿ ದಂಪತಿಯನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಇಮಾಮಹುಸೇನ ಕೊನಸಾಗರ ಅವರಿಗೆ ಸಂಸ್ಥೆಯ ಸಂಸ್ಥಾಪಕ ಸದಸ್ಯ ಮಂಜುನಾಥ. ಸಿ. ಹರಿಹರ ದಂಪತಿ ಬಂಗಾರದ ಪದಕ ನೀಡಿ ಸನ್ಮಾನಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ತಿಮ್ಮಣ್ಣ ಭೋಗಾಪೂರ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಸಂಗಣ್ಣ ಕಂಪ್ಲಿ, ಪ್ರೌಢ ವಿಭಾಗದ ಚೇರಮನ್ನ ಶರಣಪ್ಪ ಅಕ್ಕಿ, ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದ ಚೇರಮನ್ನ ಗುರಣ್ಣ ಮರಟದ, ಪೂರ್ವ ಪ್ರಾಥಮಿಕ ವಿಭಾಗದ ಚೇರಮನ್ನ ಚನ್ನಬಸಯ್ಯ ಸಾಲಿಮಠ, ಕೆ. ಆರ್.ಪಿ. ವಿಜ್ಞಾನ ಘಟಕದ ಚೇರಮನ್ನ ಸಿದ್ದಣ್ಣ ಹರ್ತಿ, ಕೇಸೂರ-ದೋಟಿಹಾಳ ವಿಭಾಗದ ಚೇರಮನ್ ಬಸವರಾಜ ಮರಟದ ಹಾಗೂ ಸಂಸ್ಥೆಯ ಸಂಸ್ಥಾಪಕ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ವಿಭಾಗದ ಮುಖ್ಯಗುರುಗಳು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದರು. ಕಾರ್ಯಕ್ರಮ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ವಿದ್ಯಾರ್ಥಿಗಳಾದ ಸಹನಾ ಬುದ್ದಿನ್ನಿ ಮತ್ತು ಪಿ. ಪ್ರಿಯಾಂಕ ಪ್ರಾರ್ಥಿಸಿದರು. ಶ್ರೇಯಾ ಅಂಗಡಿ ಮತ್ತು ರೋಹಿತ ಪವಾರ ಸ್ವಾಗತಿದರು. ಅಂಜನಾ ಕೋರಾ ವಂದಿಸಿದರು. ದೀಪಾ ಭಾವಿ, ಶಗುಪ್ತಾ ಹಡಗಲಿ ನಿರೂಪಿಸಿದರು.