Advertisement

ನಿರ್ಮಾಣವಾಗಲಿದೆ ಬಿಟ್‌ ಕಾಯಿನ್‌ ನಗರ

06:28 PM Nov 22, 2021 | Team Udayavani |

ಸ್ಯಾನ್‌ ಸಾಲ್ವಡಾರ್‌: ಕೇಂದ್ರ ಅಮೆರಿಕದ ರಾಷ್ಟ್ರ ಎಲ್‌ ಸಾಲ್ವಡಾರ್‌ ಶೀಘ್ರದಲ್ಲಿಯೇ ಬಿಟ್‌ ಕಾಯಿನ್‌ ಆಧಾರಿತ ನಗರ ನಿರ್ಮಾಣ ಮಾಡಲಿದೆ. ಈ ಬಗ್ಗೆ ಅಲ್ಲಿನ ಅಧ್ಯಕ್ಷ ನಯೀಬ್‌ ಬುಕೆಲಿ ಘೋಷಣೆ ಮಾಡಿದ್ದಾರೆ.

Advertisement

ಬಿಟ್‌ ಕಾಯಿನ್‌ಗಾಗಿಯೇ ವಿಶೇಷವಾಗಿರುವ ಬಾಂಡ್‌ ಅನ್ನು 2022ರಲ್ಲಿ ಜಾರಿಗೆ ತರಲಾಗುತ್ತದೆ ಎಂದು ಅವರು ಪ್ರಕಟಿಸಿದ್ದಾರೆ. ಕೆಲ ಸಮಯದ ಹಿಂದೆ ಅಮೆರಿಕದ ಮಯಾಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವೇಳೆ ಬುಕೆಲಿ, ಬಿಟ್‌ ಕಾಯಿನ್‌ ಅನ್ನು ನಗದು ವ್ಯವಹಾರಕ್ಕೆ ಬಳಕೆ ಮಾಡಲು ಅನುಮತಿ ನೀಡಲಿರುವ ಮೊದಲ ರಾಷ್ಟ್ರ ಎಲ್‌ ಸಾಲ್ವಡಾರ್‌ ಆಗಲಿದೆ ಎಂದು ಹೇಳಿದ್ದರು. ಸೆ.7ರ ಬಳಿಕ ಆ ದೇಶದಲ್ಲಿ ಅಮೆರಿಕನ್‌ ಡಾಲರ್‌ ಜತೆಗೆ, ಬಿಟ್‌ ಕಾಯಿನ್‌ ಅನ್ನೂ ವ್ಯವಹಾರಕ್ಕೆ ಬಳಕೆಗೆ ಅನುಮೋದನೆ ನೀಡಲಾಗಿದೆ.

ಹೊಸ ನಗರವನ್ನು ಗಲ್ಫ್ ಆಫ್ ಫೊನ್ಸೆಕಾ ವ್ಯಾಪ್ತಿಯಲ್ಲಿ ಕೊಂಚಾಗುವ ಜ್ವಾಲಾಮುಖೀ ಸಮೀಪವೇ ಹೊಸ ನಗರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಇಂಧನಕ್ಕಾಗಿ ಜಿಯೋ ಥರ್ಮಲ್‌ ವ್ಯವಸ್ಥೆಯನ್ನು ಹೊಂದಲಿದೆ. ಜತೆಗೆ ನಗದು ವಹಿವಾಟಿನಂತೆ, ಬಿಟ್‌ ಕಾಯಿನ್‌ ಅನ್ನು ಸಾಮಾನ್ಯ ವಹಿವಾಟಿಗೆ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಹೊಸ ನಗರದಲ್ಲಿ ಹೂಡಿಕೆ ಮಾಡಲು ಎಲ್ಲ ರೀತಿಯ ಅವಕಾಶ ಮಾಡಿಕೊಡಲಾಗುತ್ತದೆ. ಕೇವಲ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಮಾತ್ರ ವಿಧಿಸಲಾಗುತ್ತದೆ. ಉಳಿದ ತೆರಿಗೆಯನ್ನು ಮುನಿಸಿಪಲ್‌ ಬಾಂಡ್‌ಗಳ ಮೂಲಕ ಪಡೆಯಲಾಗುತ್ತದೆ. ಅದರ ಮೂಲಕ ಸ್ಥಳೀಯ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ ಎಂದು ಎಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲಿ ಹೇಳಿದ್ದಾರೆ. ಅವರ ಸರ್ಕಾರ ಬಿಟ್‌ ಕಾಯಿನ್‌ಗಾಗಿ  150 ಮಿಲಿಯನ್‌ ಡಾಲರ್‌ ಮೊತ್ತದ ನಿಧಿಯನ್ನೂ ಸ್ಥಾಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next