ಮುಂಬೈ: ಮುಂಬರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ (ಸೆಪ್ಟೆಂಬರ್ 01) ರಾಜ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್ ನೇಮಕಕ್ಕೆ ಸಿಎಂ ಸಮ್ಮತಿ: ಶಾಸಕ ಹಾಲಪ್ಪ
ಮತ್ತೊಂದೆಡೆ ಏಕಾನಾಥ್ ಶಿಂಧೆ ಅವರನ್ನು ಠಾಕ್ರೆ ಅವರು ಗಣೇಶೋತ್ಸವ ಹಬ್ಬಕ್ಕಾಗಿ ಆಹ್ವಾನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮುಂಬರುವ ನಿರ್ಣಾಯಕ ಮಹಾನಗರ ಪಾಲಿಕೆ ಚುನಾವಣೆಯ ನಿಟ್ಟಿನಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿರುವುದಾಗಿ ಊಹಾಪೋಹ ಹಬ್ಬಿದೆ.
ದಾದರ್ ನಲ್ಲಿರುವ ರಾಜ್ ಠಾಕ್ರೆ ನಿವಾಸಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿ ನೀಡಿದ್ದಾರೆ. ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೂ, ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ನಡುವೆ ದೀರ್ಘಕಾಲದಿಂದ ರಾಜಕೀಯ ವೈಮನಸ್ಸು ಹೊಂದಿರುವುದಾಗಿ ವರದಿ ತಿಳಿಸಿದೆ.
ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಹಾರಾಷ್ಟ್ರ ನವ್ ನಿರ್ಮಾಣ ಸೇನಾ ಮೈತ್ರಿಯೊಂದಿಗೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ. ಇತ್ತೀಚೆಗಷ್ಟೇ ಬಿಜೆಪಿ ಶಿಂಧೆ ಬಣದೊಂದಿಗೆ ಕೈಜೋಡಿಸಿತ್ತು.