-ನಿರ್ದೇಶಕ ಯೋಗರಾಜ್ ಭಟ್ ಹೀಗೆ ಘೋಷಿಸುತ್ತಿದ್ದಂತೆ ಯುಬಿ ಸಿಟಿಯ ಸ್ಕೈಬಾರ್‌ನಲ್ಲಿದ್ದವರೆಲ್ಲರೂ ಎದುರಿಗಿದ್ದ ಎಲ್‌ಇಡಿ ಪರದೆಯನ್ನೇ ದಿಟ್ಟಿಸತೊಡಗಿದರು. ಥಟ್ಟನೆ ಲೇಸರ್ ಲೈಟ್ ಯುಬಿ ಸಿಟಿಯ ಪಕ್ಕದ ಟವರ್ ಮೇಲೆ ಬಿತ್ತು. ಎಲ್‌ಇಡಿ ಕಡೆ ನೋಡುತ್ತಿದ್ದವರ ಮುಖ ಪಕ್ಕ ತಿರುಗಿತು. ನೇರವಾಗಿ ಪಕ್ಕದ ಟವರ್ ಮೇಲೆ ಲೇಸರ್ ಲೈಟ್ ಕಲರ್‌ಫುಲ್ ಡ್ಯಾನ್ಸ್ ಮಾಡುತ್ತಾ “ಏಕಲವ್ಯ’ ಎಂದು ಬರೆದೇ ಬಿಟ್ಟಿತು. 16ನೇ ಮಹಡಿಯ ಸ್ಕೈಬಾರ್‌ನಲ್ಲಿದ್ದವರೆಲ್ಲರೂ ಜೋಶ್‌ನಿಂದ ಕಿರುಚಿದರು. ನಿರ್ದೇಶಕ ಪ್ರೇಮ್ ಎಂದಿನಂತೆ, “ಸೂಪರ್ ಸೂಪರ್’ ಎನ್ನುತ್ತಾ ನಗುತ್ತಿದ್ದರು. ಅಲ್ಲಿಗೆ ಪ್ರೇಮ್ ಹಾಗೂ ರಕ್ಷಿತಾ ಕನಸು ನನಸಾಗುವ ಜೊತೆಗೆ ರಾಣಾ ಅವರ ಎಂಟ್ರಿ ಕೂಡಾ ಭರ್ಜರಿಯಾಗಿಯೇ ಆಯಿತು.
Advertisement
ಇಷ್ಟು ದಿನ ಬೇರೆ ಹೀರೋಗಳಿಗೆ ಸಿನಿಮಾ ಮಾಡುತ್ತಿದ್ದ ಪ್ರೇಮ್ ಈ ಬಾರಿ ತಮ್ಮ ಕುಟುಂಬದಿಂದಲೇ ಒಬ್ಬರನ್ನು ಹೀರೋ ಆಗಿ ಲಾಂಚ್ ಮಾಡಿದ್ದಾರೆ. ಅದು ಅವರ ಭಾಮೈದ. ರಕ್ಷಿತಾ ಅವರ ಸಹೋದರ ಅಭಿಷೇಕ್ “ಏಕಲವ್ಯ’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದಾರೆ. ಸಿನಿಮಾ ಆರಂಭದಿಂದಲೂ ಸಖತ್ ಸೌಂಡ್ ಮಾಡುತ್ತಲೇ ಬರುವ ಪ್ರೇಮ್ ಈ ಬಾರಿ ತಮ್ಮ ಭಾಮೈದ ಲಾಂಚ್ ಅನ್ನು ವಿಭಿನ್ನವಾಗಿಯೇ ಮಾಡಿದರು. ಸಾಮಾನ್ಯವಾಗಿ ಸ್ಕೈಬಾರ್‌ನಲ್ಲಿ ಸಿನಿಮಾ ಲಾಂಚ್ ಆಗೋದು ಕಡಿಮೆ. ಆದರೆ, ಪ್ರೇಮ್ ತಮ್ಮ “ಏಕಲವ್ಯ’ ಚಿತ್ರವನ್ನು ಅಲ್ಲೇ ಅದ್ಧೂರಿಯಾಗಿ ಲಾಂಚ್ ಮಾಡಿದರು.
Related Articles
ಪ್ರೇಮ್ “ಏಕಲವ್ಯ’ ಚಿತ್ರದ ಟೈಟಲ್ ಅನ್ನು ಭಿನ್ನವಾಗಿ ಬರೆಸಿದ್ದಾರೆ. ಮೇಲ್ನೋಟಕ್ಕೆ ಅದು “ಏಕ್ ಲವ್ ಯಾ’ ಎಂದು ಕಾಣುತ್ತದೆ. ಆದರೆ, ಟೈಟಲ್ “ಏಕಲವ್ಯ’. ಪ್ರೇಮ್ ಈ ರೀತಿ ಬರೆಸಲು ಕಾರಣ ಚಿತ್ರದ ಕಥೆ. “ಏಕಲವ್ಯ’ ಚಿತ್ರದ ಕಥೆ ಕೂಡಾ ತುಂಬಾ ಸ್ಟೈಲಿಶ್ ಹಾಗೂ ಮಾಡರ್ನ್ ಆಗಿದ್ದು, ಅದಕ್ಕೆ ತಕ್ಕಂತೆ ಟೈಟಲ್ ಡಿಸೈನ್ ಮಾಡಿಸಲಾಗಿದೆ. ಜೊತೆಗೆ ಈ ಚಿತ್ರಕ್ಕೆ ಲವ್ ಇಸ್ ಆಲ್ ಯು ನೀಡ್ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಈ ಚಿತ್ರಕ್ಕಾಗಿ ರಾಣಾ ಸಾಕಷ್ಟು ತಯಾರಿ ಕೂಡಾ ನಡೆಸಿದ್ದಾರೆ. “ದಿ ವಿಲನ್’ ಸೆಟ್‌ನಲ್ಲೇ ತರಬೇತಿ ಪಡೆದಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ಕ್ಯಾಮರಾ ಮುಂದೆ ನಟಿಸುವ ಮುನ್ನ ರಾಣಾ ಅವರು ಆ ದೃಶ್ಯವನ್ನು ಮಾಡಿ, ತರಬೇತಿ ಪಡೆಯುತ್ತಿದ್ದರಂತೆ.
Advertisement
ಪ್ರೇಮ್, ಹೆಂಡ್ತಿ-ಮಗನಿಗೆ ಹೆಚ್ಚು ಟೈಮ್ ಕೊಡಲ್ಲ. ಹಾಗಾಗಿ, ಅವರು ಒಳ್ಳೆಯ ಗಂಡ ಅಲ್ಲ. ಆದರೆ ಒಳ್ಳೆಯ ನಿರ್ದೇಶಕ. ಸಿನಿಮಾವನ್ನು ತುಂಬಾ ಪ್ರೀತಿಸಿ, ಅದರಲ್ಲೇ ಮುಳುಗಿರುತ್ತಾರೆ..-ರಕ್ಷಿತಾ ರವಿಪ್ರಕಾಶ್ ರೈ