ಇಂದೋರ್: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ‘Ek Ped Maa Ke Naam’(ತಾಯಿಯ ಹೆಸರಿನಲ್ಲಿ ಒಂದು ಗಿಡ) ಅಭಿಯಾನವು ಹವಾಮಾನ ಬದಲಾವಣೆಯ ಸವಾಲುಗಳಿಗೆ ಸೂಕ್ತ ಉತ್ತರವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಂದೋರ್‌ನಲ್ಲಿ ಒಂದೇ ದಿನದಲ್ಲಿ 11 ಲಕ್ಷ ಗಿಡಗಳನ್ನು ನೆಟ್ಟು ವಿಶ್ವದಾಖಲೆ ನಿರ್ಮಿಸುವ ಕಾರ್ಯಕ್ರಮಕ್ಕೆ ಅಮಿತ್ ಶಾ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಇಡೀ ದೇಶದಲ್ಲಿ ಸ್ವಚ್ಛತೆ, ಉತ್ತಮ ಆಡಳಿತ, ಸಹಕಾರ ಮತ್ತು ಭಾಗವಹಿಸುವಿಕೆಗೆ ಹೆಸರುವಾಸಿಯಾಗಿರುವ ಇಂದೋರ್ ಇಂದಿನಿಂದ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನಕ್ಕೆ ಹೆಸರುವಾಸಿಯಾಗಲಿದೆ ಎಂದರು.
ಜೂನ್ 5 ರಂದು ವಿಶ್ವ ಪರಿಸರ ದಿನದಂದು ಪ್ರಧಾನಿ ಮೋದಿ ಅವರು ಅಭಿಯಾನವನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ ದೇಶಾದ್ಯಂತ ಸುಮಾರು 140 ಕೋಟಿ ಗಿಡಗಳನ್ನು ನೆಡಲಾಗುವುದು, ಮಧ್ಯಪ್ರದೇಶದಲ್ಲಿ 5.5 ಕೋಟಿ ಸಸಿಗಳನ್ನು ನೆಡಲಾಗುತ್ತಿದೆ. ಹೀಗಾಗಿ ಮಧ್ಯಪ್ರದೇಶ “ಭಾರತದ ಶ್ವಾಸಕೋಶ” ಎಂದು ಬಣ್ಣಿಸಿದರು.
“ಅಭಿವೃದ್ಧಿ ನಡೆಯುತ್ತಿದೆ ಮತ್ತು ನಾವು ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದೇವೆ. ಮೋದಿಜಿಯವರು ಹಿಂದಿನದನ್ನು ಪ್ರತಿಬಿಂಬಿಸುವಂತೆ ಮತ್ತು ಮುಂದಿನ ಪೀಳಿಗೆಗೆ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ಪರಿಸರ ಕಾಳಜಿ ದೇಶಕ್ಕೆ ಮಾತ್ರವಲ್ಲ.Carbon dioxide and monoxide ಓಝೋನ್ ಮಟ್ಟವನ್ನು ಕಡಿಮೆ ಮಾಡಿ ಅದರ ಪದರದಲ್ಲಿ ರಂಧ್ರಗಳನ್ನು ಸೃಷ್ಟಿಸಿದೆ” ಎಂದು ಶಾ ಹೇಳಿದರು.
ಇಂದೋರ್‌ನ 2,649 ಸ್ಥಳಗಳಲ್ಲಿ ಒಟ್ಟು 51 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಗಡಿ ಭದ್ರತಾ ಪಡೆಯ (BSF) ರೇವತಿ ಶೂಟಿಂಗ್ ರೇಂಜ್‌ನ ವಿಸ್ತಾರವಾದ ಕ್ಯಾಂಪಸ್‌ನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ 11 ಲಕ್ಷ ಸಸಿಗಳನ್ನು ನೆಡಲಾಗಿದೆ. 100 ಸಂಸ್ಥೆಗಳಿಂದ 50 ಸಾವಿರ ಮಂದಿ ಈ ಅಭೂತಪೂರ್ವ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಅಸ್ಸಾಂನಲ್ಲಿ 9,25,000 ಗಿಡಗಳನ್ನು ನೆಟ್ಟಿರುವ ಹಿಂದಿನ ದಾಖಲೆ ಈಗ ಮುರಿದು ಬಿದ್ದಿದೆ.