Advertisement
ಮೊದಲಿಗೆ “ಏಕ್ ಲವ್ ಯಾ’ ಬಗ್ಗೆ ಮಾತನಾಡಿದ ನಿರ್ಮಾಪಕಿ ರಕ್ಷಿತಾ ಪ್ರೇಮ್, “ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದಲ್ಲಿ ಆಡಿಯನ್ಸ್ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಪ್ರೇಕ್ಷಕರು, ಮಾಧ್ಯಮಗಳು ಮತ್ತು ಸಿನಿಮಾ ಇಂಡಸ್ಟ್ರಿ ಕಡೆಯಿಂದಲೂ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ಇಂಥದ್ದೊಂದು ಸಕ್ಸಸ್‌ಗೆ ಕಾರಣರಾದ ತಂಡದವರಿಗೆ, ಪ್ರೇಕ್ಷಕರಿಗೆ ಎಲ್ಲರಿಗೂ ಧನ್ಯವಾದಗಳು’ ಎಂದರು.
Related Articles
Advertisement
ಖುಷಿಯ ಹಿಂದೆ ಪೈರಸಿ ಬಗ್ಗೆ ಬೇಸರ: “ಇವತ್ತು ಪೈರಸಿ ಅನ್ನೋದು ಸಿನಿಮಾರಂಗಕ್ಕೆ ದೊಡ್ಡ ಶಾಪವಾಗಿದೆ. ಏನೇ ಪ್ರಯತ್ನ ಮಾಡಿದ್ರೂ ಪೈರಸಿ ತಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಒಳ್ಳೆಯ ಸಿನಿಮಾ ಸಿನಿಮಾ ಪೈರಸಿಗೆ ಬಲಿಯಾದಾಗ ತುಂಬ ನೋವಾಗುತ್ತದೆ. ಪೈರಸಿ ಅನ್ನೋದು ಕೇವಲ ನಮ್ಮ ಸಿನಿಮಾಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ಸಿನಿಮಾಗಳಿಗೂ ಪೈರಸಿ ಕಾಟ ಇದ್ದೇ ಇದೆ. ಪೈರಸಿ ಬಗ್ಗೆ ವಾಣಿಜ್ಯ ಮಂಡಳಿಗೆ, ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿಕೊಂಡರೂ, ಏನೂ ಪ್ರಯೋಜನವಾಗುತ್ತಿಲ್ಲ. ಎಲ್ಲರೂ ಒಟ್ಟಾಗಿ ಹೋರಾಡಿದರೆ ಮಾತ್ರ ಇದಕ್ಕೇನಾದ್ರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. “ಏಕ್ ಲವ್ ಯಾ’ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಮುಗಿದ ಅರ್ಧ ಗಂಟೆಯೊಳಗೆ ಅದರ ಕ್ಲೈಮ್ಯಾಕ್ಸ್ ದೃಶ್ಯಗಳು ಯು-ಟ್ಯೂಬ್, ಫೇಸ್‌ಬುಕ್, ಟೆಲಿಗ್ರಾಂ ಹೀಗೆ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದ್ದವು.
ಸುಮಾರು ಸಾವಿರಕ್ಕೂ ಹೆಚ್ಚು ಸಿನಿಮಾದ ಪೈರಸಿಯ ಆನ್ ಲೈನ್ ಲಿಂಕ್‌ಗಳನ್ನು ಹುಡುಕಿ ಡಿಲೀಟ್ ಮಾಡಲಾಗಿದೆ ಅಷ್ಟಾದರೂ, ಹೊಸ ಲಿಂಕ್‌ಗಳಲ್ಲಿ ಸಿನಿಮಾದ ಪೈರಸಿ ಕಾಪಿ ಹರಿದಾಡುತ್ತಿದೆ’ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು ನಿರ್ದೇಶಕ ಪ್ರೇಮ್.
ಜಿ. ಎಸ್. ಕಾರ್ತಿಕ ಸುಧನ್