Advertisement

ಜಿಲ್ಲೇಲಿ ಹದಿನೆಂಟು ಪಿಂಕ್‌ ಮತಗಟ್ಟೆ

04:39 PM Apr 29, 2018 | Team Udayavani |

ಶಿವಮೊಗ್ಗ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ 18 ಮತಗಟ್ಟೆಗಳನ್ನು ‘ಪಿಂಕ್‌ ಮತಗಟ್ಟೆ’ ಗಳೆಂದು ಗುರುತಿಸಲಾಗಿದ್ದು, ಈ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎಲ್ಲಾ ಮತಗಟ್ಟೆಗಳಿಗೆ ಗುಲಾಬಿ ಬಣ್ಣ ಬಳಿಯಲಾಗಿದ್ದು, ವಿಶೇಷವಾಗಿ ಸಿಂಗರಿಸಲಾಗುವುದು. ಈ ಮತಗಟ್ಟೆಗಳಲ್ಲಿ ಚುನಾವಣಾಧಿಕಾರಿ ಸೇರಿದಂತೆ ಸಂಪೂರ್ಣ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುವರು. ಬಹುತೇಕ ಪೊಲೀಸ್‌ ಸಿಬ್ಬಂದಿ ಸಹ ಮಹಿಳೆಯರೇ ಆಗಿರುವುದು ಪಿಂಕ್‌ ಮತಗಟ್ಟೆಗಳ ವಿಶೇಷವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಪ್ರೇರೇಪಿಸಲು ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶೇ.50 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವ ಮತ ಗಟ್ಟೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳೆಯರು ಮಾತ್ರವಲ್ಲದೆ ಆಯಾ ಮತಗಟ್ಟೆ ವ್ಯಾಪ್ತಿಯ ಪುರುಷ ಮತದಾರರು ಸಹ ಮತವನ್ನು ಚಲಾಯಿಸಬೇಕಾಗಿದೆ ಎಂದು ತಿಳಿಸಿದರು.

ಪಿಂಕ್‌ ಮತಗಟ್ಟೆಗಳ ವಿವರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾರೋಬೆನವಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಕಡೂರು.

ಭದ್ರಾವತಿ ಕ್ಷೇತ್ರ: ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಓಲ್ಡ್‌ ಟೌನ್‌, ಭದ್ರಾವತಿ, ಬಸವೇಶ್ವರ ವಿದ್ಯಾ ಸಂಸ್ಥೆ, ಜನ್ನಾಪುರ, ಸರ್‌ ಎಂವಿ ಆಟ್ರ್ಸಮತ್ತು ಕಾಮರ್ಸ್‌ ಕಾಲೇಜು ಭದ್ರಾವತಿ.

Advertisement

ಶಿವಮೊಗ್ಗ ಕ್ಷೇತ್ರ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಮನೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದೇಶ್ವರನಗರ, ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಶೋಕನಗರ, ಶಿವಮೊಗ್ಗ, ಜ್ಞಾನಪ್ರಭ ಎಜುಕೇಶನಲ್‌ ಇನ್ಸ್ಟಿಟ್ಯೂಟ್‌ ಶಿವಮೊಗ್ಗ. ತೀರ್ಥಹಳ್ಳಿ ಕ್ಷೇತ್ರ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸೀಬಿನಕೆರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡೇಕಲ್‌.

ಶಿಕಾರಿಪುರ ಕ್ಷೇತ್ರ: ಜವಾಹರಲಾಲ್‌ ನೆಹರು ಹಿರಿಯ ಪ್ರಾಥಮಿಕ ಶಾಲೆ, ವಿನಾಯಕನಗರ, ಶ್ರೀ ಸಿದ್ಧಲಿಂಗೇಶ್ವರ ಟೌನ್‌ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಶಿಕಾರಿಪುರ.

ಸೊರಬ ಕ್ಷೇತ್ರ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕನಕೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಗ್ವೆ. ಸಾಗರ ಕ್ಷೇತ್ರ: ಸಮುದಾಯ ಭವನ ಸಾಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲಗೇರಿ ಮಂಡ್ರಿ, ತಾಪಂ ಕಚೇರಿ ಹೊಸನಗರ.

ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಕೇಶ್‌ ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಚುನಾವಣಾ ವೀಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next