Advertisement

ಎಂಟು ತಿಂಗಳಿಂದ ನೀಡಿಲ್ಲ ವೇತನ

03:58 PM Nov 19, 2018 | Team Udayavani |

ಗಂಗಾವತಿ: ಸರಕಾರದ ಖಜಾನೆ-02ದಿಂದ ಅಂಗನವಾಡಿ ನೌಕರರಗೆ ನೇರ ವೇತನ ಪಾವತಿ ನೆಪದಲ್ಲಿ ಸರಕಾರ 8 ತಿಂಗಳಿಂದ ರಾಜ್ಯದ ಅಂಗನವಾಡಿ ನೌಕರರ ವೇತನ ಬಾಕಿ ಉಳಿಸಿಕೊಂಡಿದ್ದು, ಅಂಗನವಾಡಿ ನೌಕರರು ಕುಟುಂಬ ನಿರ್ವಹಣೆ ಸೇರಿ ಇತರೆ ಖರ್ಚಿಗೆ ಸಾಲ ಮಾಡುವ ಸ್ಥಿತಿ ಬಂದೊದಗಿದೆ. ಇದುವರೆಗೂ ನೌಕರರ ವೇತನವನ್ನು ತಾಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳು ಬಿಲ್‌ ಮಾಡುವ ಮೂಲಕ ವೇತನ ಪಾವತಿ ವ್ಯವಸ್ಥೆ ಇತ್ತು. ಇದರಿಂದ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿಯಾಗುತ್ತಿರಲಿಲ್ಲ. 

Advertisement

ಸರಕಾರದ ಖಜಾನೆಯಿಂದ ನೇರವಾಗಿ ವೇತನ ಪಾವತಿ ಮಾಡುವಂತೆ ಅಂಗನವಾಡಿ ನೌಕರರು ಹಲವು ಬಾರಿ ಹೋರಾಟ ಮಾಡಿದ್ದರಿಂದ ಸರಕಾರ ಖಜಾನೆ -02ರಿಂದ ವೇತನ ಪಾವತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಫ್ಟ್‌ವೇರ್‌ ಸಿದ್ಧತೆ ಮತ್ತು ಕಳೆದ ವರ್ಷ ಮಾಜಿ ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ ಬಜೆಟ್‌ನಲ್ಲಿ 2 ಸಾವಿರ ವೇತನ ಹೆಚ್ಚಳ ಮಾಡಿ ಹಣ ಮೀಸಲಿರಸದೇ ಇಲಾಖೆಯಲ್ಲಿ ಸರಿದೂಗಿಸುವಂತೆ ಸೂಚನೆ ನೀಡಿ¨ª‌ರಿಂದಾಗಿ ವೇತನ ಪಾವತಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ನೌಕರರ ವೇತನ ವಿಳಂಬದಿಂದ ಅವರ ಕುಟುಂಬಕ್ಕೆ ಮಾತ್ರ ಸಂಕಷ್ಟ ಎದುರಾಗಿಲ್ಲ, ಬದಲಿಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳ ಮಾಲೀಕರು ಬಾಡಿಗೆ ಪಾವತಿಸುವಂತೆ ಪ್ರತಿದಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ ಹಾಕುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಮೊಟ್ಟೆ ಮತ್ತು ಗ್ಯಾಸ್‌ ಸಿಲಿಂಡರ್‌ಗಳಿಗೆ ಹಣ ಪಾವತಿಸಿಲ್ಲದ ಕಾರಣ ಪೂರೈಕೆ ನಿಲುಗಡೆ ಮಾಡಲು ಟೆಂಡರ್‌ ಪಡೆದವರು ಯೋಚಿಸುತ್ತಿದ್ದಾರೆ. ಮಹತ್ವದ ಮಾತೃ ಪೂರ್ಣಯೋಜನೆಗೆ ಸಾಲ ಮಾಡಿ ತರಕಾರಿ ಮತ್ತು ಇತರೆ ಸರಕು ಖರೀದಿಸಿರುವ ಕಾರಣ ಅಂಗಡಿಯವರಿಗೆ ಪ್ರತಿ ದಿನ ಸುಳ್ಳು ಹೇಳುವ ಸ್ಥಿತಿಯುಂಟಾಗಿದೆ. 

ಇನ್ನೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ವೇತನ ಇಲ್ಲದ ಕಾರಣ ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ-ಕಾಲೇಜು ಶುಲ್ಕ, ಹಾಲು, ತರಕಾರಿ, ಆಹಾರ ಪದಾರ್ಥಗಳಿಗೆ ಪಾವತಿಸಲು ಹಣದ ತೊಂದರೆಯಿಂದ ಕಷ್ಟವಾಗಿದೆ.

ಸರಕಾರದ ಖಜಾನೆಯಿಂದ ನೇರವಾಗಿ ಪಾವತಿ ಮಾಡುವ ನೆಪದಲ್ಲಿ 8 ತಿಂಗಳಿಂದ ವೇತನವನ್ನು ವೇತನ ಬಿಡುಗಡೆ ಮಾಡಿಲ್ಲ. ಕುಟುಂಬ ನಿರ್ವಹಣೆಗೆ ಹಣವಿಲ್ಲ. ಕೆಲವೆಡೆ ಬಾಡಿಗೆ ಕಟ್ಟಡದಲ್ಲಿ ನಡೆಯುವ ಕೇಂದ್ರಗಳಿಗೆ ಬಾಡಿಗೆ ಕೊಡಲು ಹಣವಿಲ್ಲ ಕಟ್ಟಡ ಮಾಲೀಕರ ಒತ್ತಡಕ್ಕೆ ಸಾಕಾಗಿ ಹೋಗಿದೆ.
ಹೆಸರೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆ

Advertisement

ವೇತನ ನೇರಪಾವತಿ ಮತ್ತು ವೇತನ ಹೆಚ್ಚಳ ಮಾಡುವ ತಾಂತ್ರಿಕ ನೆಪವೊಡ್ಡಿ ಸರಕಾರ 8 ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದು, ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕುಟುಂಬ ನಿರ್ವಾಹಣೆಗೆ ತೊಂದರೆಯಾಗಿದೆ. ಅನೇಕ ಹೋರಾಟ ಮಾಡಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಬಾಕಿ ವೇತನ ಪಾವತಿಸದಿದ್ದರೆ ರಾಜ್ಯಮಟ್ಟದಲ್ಲಿ ಅಂಗನವಾಡಿ ನೌಕರರ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.
ವರಲಕ್ಷ್ಮೀ 
ರಾಜ್ಯಾಧ್ಯಕ್ಷರು ಸಿಐಟಿಯು ಸಂಘಟನೆ.

ಕೆ.ನಿಂಗಜ್ಜ 

Advertisement

Udayavani is now on Telegram. Click here to join our channel and stay updated with the latest news.

Next