Advertisement
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ವತಿಯಿಂದ ರಾಮಕುಂಜದ ವಿಶ್ವೇಶ ನಗರದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಅರ್ಬಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಮ್ಮೇಳನಾಂಗಣದ ಡಾ| ಎಂ. ಚಿದಾನಂದ ಮೂರ್ತಿ ಸಭಾಂಗಣದ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಎಲ್ಲ ಭಾಷೆಗಳನ್ನು ಪ್ರೀತಿಸಿದವರು. ನಮಗೆ ಭಾಷಾಭಿಮಾನವಿದೆಯೇ ಹೊರತು ದುರಭಿಮಾನವಿಲ್ಲ. ಯಾವ ಭಾಷೆಯನ್ನು ಕಲಿತರೂ ಕನ್ನಡವನ್ನು ಮರೆಯದಿರಿ. ಕನ್ನಡ ಭಾಷೆಯನ್ನು ಹೆಚ್ಚೆಚ್ಚು ಬಳಸುವ ಮೂಲಕ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ಸಾಹಿತ್ಯ ಸಮ್ಮೇಳನಗಳು ಜ್ಞಾನ ಮತ್ತು ಹೃದಯ ಸಾಗರದ ಮಂಥನವಾಗಿ ಅಮೃತ ಉಕ್ಕುವಂತಹ ಸಾರಸ್ವತ ಯಜ್ಞವಾಗಬೇಕು ಎಂದರು. ಪ್ರದರ್ಶನ ಮಳಿಗೆ ಉದ್ಘಾಟನೆ ಪುಸ್ತಕ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ, ವೇದಿಕೆಯಲ್ಲಿ ಕಲ್ಪವೃಕ್ಷಕ್ಕೆ ನೀರೆರೆದು ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸಾಹಿತ್ಯ ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ಮಾಧ್ಯಮಗಳಾಗಬೇಕು. ಕನ್ನಡದ ಬಗೆಗಿನ ಪ್ರೀತಿ ನಿತ್ಯ ನಿರಂತರವಾಗಿರಬೇಕು. ಹೆತ್ತವರು ಮತ್ತು ಶಿಕ್ಷಕರು ಮಾರ್ಗದರ್ಶನ ನೀಡಿದಾಗ ಮಕ್ಕಳಿಗೆ ಸಾಹಿತ್ಯ ಮತ್ತು ಭಾಷೆಯ ಬಗೆಗೆ ಒಲವು ಮೂಡಲು ಸಾಧ್ಯ ಎಂದು ಅವರು ನುಡಿದರು. ಕಸಾಪ ದ.ಕ. ಜಿಲ್ಲಾಧ್ಯಕ್ಷ ಎಸ್.ಪ್ರದೀಪ್‌ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿದರು. ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪ್ರಾಚ್ಯವಸ್ತು ಪ್ರದರ್ಶನವನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಕಲಾ ಪ್ರದರ್ಶನವನ್ನು ಸಾಹಿತಿ ವಿ.ಬಿ.ಅರ್ತಿಕಜೆ, ವಿಜ್ಞಾನ ಪ್ರದರ್ಶನವನ್ನು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ ಉದ್ಘಾಟಿಸಿದರು. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಜಯಂತಿ ಆರ್. ಗೌಡ, ತೇಜಸ್ವಿನಿ ಕಟ್ಟಪುಣಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮುಖ್ಯಅತಿಥಿಗಳಾಗಿದ್ದರು. ಕಸಾಪ ಜಿಲ್ಲಾ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ, ಮಂಗಳೂರು ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ. ಸತೀಶ್ ಭಟ್, ಸಂಚಾಲಕ ಪ್ರೊ| ವೇದವ್ಯಾಸ ರಾಮಕುಂಜ, ಗೌರವ ಕಾರ್ಯದರ್ಶಿ ಸತೀಶ್ ನಾಯಕ್ ಕಡಬ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಪ್ರಮುಖರಾದ ಎಸ್.ಕೆ. ಆನಂದ್ ಮಾಸ್ಟರ್ ಪ್ಲಾನರಿ, ಡಾ| ಶ್ರೀಧರ್ ಎಚ್.ಜಿ. ಪುತ್ತೂರು ಉಪಸ್ಥಿತರಿದ್ದರು.
Related Articles
Advertisement