ಮಂಗಳೂರು: ನಗರದಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದ ವಿಭಿನ್ನ ಕೋಮಿನ ಯುವಕ ಯುವತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಯುವಕನಿಗೆ ಹರಿತ ಆಯುಧದಿಂದ ಗಾಯಗೊಳಿಸಿದ ಘಟನೆ ನಗರದ ಪಂಪ್ ವೆಲ್ ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ಮಹಮ್ಮದ್ ಹರ್ಷಿದ್ ಅನ್ವರ್ (23 ವ) ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡಮಟ್ಟದ ಸ್ಫೋಟವಾಗಲಿದೆ: ಮತ್ತೆ ಕಿಡಿಕಾರಿದ ಯತ್ನಾಳ್
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಘಟನೆಗೆ ಸಂಬಂಧಿಸಿದಂತೆ ಸುಮಾರು ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಗುರುವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದ ಯುವಕ- ಯುವತಿಯನ್ನು ತಡೆದು ಹಲ್ಲೆ ನಡೆಸಲಾಗಿತ್ತು. ಯುವಕ ತನಗೆ ಬೆಂಗಳೂರಿನಲ್ಲಿ ಉದ್ಯೋಗ ಹುಡುಕಲು ಸಹಾಯ ಮಾಡಲು ಬಂದಿದ್ದ ಎಂಬುದಾಗಿ ಯುವತಿ ತಿಳಿಸಿದ್ದಾಳೆ ಎಂದು ಆಯುಕ್ತರು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಕಾಲಿಕ ಐಪಿಎಲ್ ತಂಡ ಹೆಸರಿಸಿದ ಡಿವಿಲಿಯರ್ಸ್: ರೈನಾ, ರಸೆಲ್ ಗಿಲ್ಲ ಜಾಗ!