Advertisement

ಶಾಂತಿ ಸೌಹಾರ್ದತೆಯ ಸಂಕೇತವೇ ಪೈಗಂಬರ್ ಜಯಂತಿ: ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ .

04:42 PM Oct 19, 2021 | Team Udayavani |

ಗಂಗಾವತಿ: ಶಾಂತಿ ಸೌಹಾರ್ದತೆ ಪರಧರ್ಮ ಸಹಿಷ್ಣುತೆ ಪೈಗಂಬರ್ ಜಯಂತಿಯ ಮೂಲ ಉದ್ದೇಶವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇತರರ ಧರ್ಮವನ್ನು ಸೌಹಾರ್ದ ಮತ್ತು ಗೌರವಯುತವಾಗಿ ಕಾಣುವಂತೆ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಹೇಳಿದರು .

Advertisement

ಅವರು ನಗರದ ಕರ್ನೂಲ್ ಬಾಬಾ ದರ್ಗಾ ಹತ್ತಿರ ಮಹಮ್ಮದ್ ಪೈಗಂಬರ್ ಜಯಂತಿ ನಿಮಿತ್ತ ಸರಳವಾಗಿ ಆಯೋಜಿಸಿದ್ದ ಧಾರ್ಮಿಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು .

ಸರ್ಕಾರ ಕೊರೋನ ಹಿನ್ನೆಲೆಯಲ್ಲಿ ಮೆರವಣಿಗೆ ಮಾಡದಂತೆ ಆದೇಶ ವಿಧಿಸಿದ್ದರೂ ಸರಳವಾಗಿ ಕಡ್ಡಾಯವಾಗಿ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಮೆರವಣಿಗೆಗೆ ಆಯೋಜನೆ ಮಾಡಲಾಗಿದೆ. ಮೆರವಣಿಗೆ ಮೂಲ ಉದ್ದೇಶ ಮಹಾನ್ ವ್ಯಕ್ತಿಗಳ ವಿಚಾರವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು ಆ ಮೂಲಕ ಧಾರ್ಮಿಕ ಸೌಹಾರ್ದತೆ ಬೆಳೆಸಬೇಕು .

ಪ್ರತಿಯೊಬ್ಬರೂ ಮನೆಯಲ್ಲಿ ಪೈಗಂಬರ್ ಜಯಂತಿ ಆಚರಣೆ ಮಾಡುವ ಮೂಲಕ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದರು .

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹಮ್ಮದ್ ಉಸ್ಮಾನ್ ಬಿಚ್ಚುಗತ್ತಿ ,ಸಲೀಂ ,ಸಾದಿಕ್ ಸೇರಿ ಮುಸ್ಲಿಂ ಸಮಾಜದ ಅನೇಕ ಮುಖಂಡರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next