ಉಳ್ಳಾಲ: ಒಂದು ತಿಂಗಳು ಉಪವಾಸ ಆಚರಿಸಿ ಅಲ್ಲಾಹನಿಗಾಗಿ ಪುಣ್ಯಕಾರ್ಯ ನಿರ್ವಹಿಸಿ ಈದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಭಕ್ತಿಯಿಂದ ಇದ್ದುಕೊಂಡು ಅರ್ಹರಿಗೆ ಜಕಾತ್ ನೀಡಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಬೇಕಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ್ ಹೇಳಿದರು.
ಉಳ್ಳಾಲ ದರ್ಗಾದಲ್ಲಿ ಬುಧವಾರ ಈದ್ ನಮಾಝ್ ಮತ್ತು ದರ್ಗಾ ಝಿಯಾರತ್ ಮುಗಿಸಿದ ಬಳಿಕ ಅವರು ಮಾತನಾಡಿದರು.
ನಗರಾಭಿವೃದ್ಧಿ ಸಚಿವರಾದ ಯು.ಟಿ. ಖಾದರ್ ಮಾತನಾಡಿ, ರಮ್ಜಾನ್‌ನ 30 ವ್ರತಾನುಷ್ಠಾನದ ಬಳಿಕ ಆಚರಿಸಲಾಗುವ ಪವಿತ್ರ ಈದುಲ್ ಫಿತ್ರ ಹಬ್ಬವೂ ಸಮಾನತೆ, ಪ್ರೀತಿ, ವಿಶ್ವಾಸ, ಸೌಹಾರ್ದ ಸಂದೇಶ ನೀಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಜೀವಿಸಿ ಧರ್ಮದ ಪಾವಿತ್ರ್ಯ, ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸಕ್ಕೆ ಮುಂದಾಗಬೇಕು. ವಿಶ್ವಶಾಂತಿಗಾಗಿ ಪ್ರಯೊಬ್ಬರೂ ಪ್ರಾರ್ಥಿಸಬೇಕು ಎಂದರು.
ಖತೀಬರಾದ ಅಬ್ದುಲ್‌ಅಝೀಝ್ ಬಾಖವಿ ಈದ್ ನಮಾಝ್ ಮತ್ತು ಖುತಾº ಪಾರಾಯಣ ಮಾಡಿದರು. ಸಹಾಯಕ ಖಾಝಿ ಅಬ್ದುಲ್ ರವೂಫ್Ø ಮುಸ್ಲಿಯಾರ್ ಝಿಯಾರತ್ ನೆರವೇರಿಸಿದರು. ಮಂಗಳೂರು ನಗರ ಪೊಲೀಸ್‌ಆಯುಕ್ತ ಸಂದೀಪ್ ಪಾಟೀಲ್ ದರ್ಗಾಕ್ಕೆ ಭೇಟಿ ನೀಡಿ ಈದ್ ಶುಭ ಹಾರೈಸಿದರು.
ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಮಹಮ್ಮದ್, ಉಪಾಧ್ಯಕ್ಷ ಬಾವಾ ಮಹಮ್ಮದ್, ಆಝಾದ್ ಇಸ್ಮಾಯಿಲ್, ಅಮೀರ್, ಆಸಿಫ್ ಅಬ್ದುಲ್ಲ, ಫಾರೂಕ್ ಉಳ್ಳಾಲ್, ಯು.ಕೆ. ಮಹಮ್ಮದ್ ಮುಸ್ತಫಾ ಮಂಚಿಲ, ಅಲಿಮೋನು, ಮಹಮ್ಮದ್ ಅಳೇಕಲ, ಅಬೂಬಕ್ಕರ್ ಅಲಿನಗರ, ಹಮೀದ್ ಅಳೇಕಲ, ಇಬ್ರಾಹಿಂ ಉಳ್ಳಾಲ ಬೈಲು, ಹಮೀದ್‌ಕೋಡಿ, ಮೊಯ್ದಿನಬ್ಬ ಆಝಾದ್ ನಗರ, ಕಬೀರ್‌ಚಾಯಬ್ಬ, ಆದಂ, ಬಾಝಿಲ್‌ಡಿ’ಸೋಜಾ, ಉಳ್ಳಾಲ ನಗರಸಭಾ ಸದಸ್ಯ ಅಶ್ರಫ್, ಮಹಮ್ಮದ್ ಮೋನು ಮುಕ್ಕಚ್ಚೇರಿ ಉಪಸ್ಥಿತರಿದ್ದರು.