Advertisement

Eid-e-Milad: ನಾಡಿದ್ದು ಸಂಚಾರ ಬದಲಾವಣೆ

02:48 PM Sep 14, 2024 | Team Udayavani |

ಬೆಂಗಳೂರು: ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸೆ.16ರಂದು ಮುಸ್ಲಿಂ ಸಮುದಾಯ ದವರು ನಗರದ ವಿವಿಧ ಭಾಗಗಳಿಂದ ಮೆರವ ಣಿಗೆ ಮೂಲಕ ನೃಪ ತುಂಗ ರಸ್ತೆಯ ವೈಎಂಸಿಎ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸು ವುದರಿಂದ ಈ ಭಾಗದಲ್ಲಿ ಕೆಲವೆಡೆ ಸಂಚಾರ ವ್ಯತ್ಯಯ ಉಂಟಾಗಲಿದ್ದು, ಕೆಲವೆಡೆ ಮಾರ್ಪಾಡು ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

ಈದ್‌ ಮಿಲಾದ್‌ ಮೆರವಣಿಗೆ ಮಾರ್ಗಗಳು: ಈದ್‌ ಮಿಲಾದ್‌ ಮೆರವಣಿಗೆಗಳು ಜೆ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ಮೆಂಟ್‌ ಕಡೆಗೆ, ಯಲಹಂಕ ಹೋಲ್ಡ್‌ ಟೌನ್‌ ಮಸೀದಿಯಿಂದ ಯಲಹಂಕ ಹೋಲ್ಡ್‌ ಟ್ರೈನ್‌ ಮಸೀದಿಯವರೆಗೆ, ಬೆಳ್ಳಳ್ಳಿ ಕ್ರಾಸ್‌ನಿಂದ ನಾಗವಾರ ಸಿಗ್ನಲ್, ರಾಜಗೋಪಾಲನಗರ ಮುಖ್ಯ ರಸ್ತೆಯಿಂದ ಪೀಣ್ಯ 2ನೇ ಹಂತದ ವರೆಗೆ, ಸೌತ್‌ ಎಂಡ್‌ ಸರ್ಕಲ್‌ನಿಂದ ಆರ್‌.ವಿ ರಸ್ತೆ ಮೂಲಕ ಲಾಲ್‌ ಬಾಗ್‌ ವೆಸ್ಟ್‌ ಗೇಟ್‌ ಸರ್ಕಲ್‌ವರೆಗೆ, ಬೇಂದ್ರೆ ಜಂಕ್ಷನ್‌ನಿಂದ ಓಬಳಪ್ಪ ಗಾರ್ಡನ್‌ ಜಂಕ್ಷನ್‌, ಮಹಾಲಿಂಗೇ ಶ್ವರ ಬಡಾ ವಣೆ ಯಿಂದ ಆಡುಗೋಡಿ ಈ ಮಾರ್ಗಗಳಿಂದ ವೈಎಂಸಿಎ ಮೈದಾನಕ್ಕೆ ಬರಲಿವೆ. ಸಂಚಾರ ನಿರ್ಬಂಧಿತ ಸ್ಥಳಗಳು: ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ಮೂಲಕ ಟ್ಯಾನರಿ ರಸ್ತೆ ಕಡೆಗೆ, ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ.ರಸ್ತೆ ಮೂಲಕ ನೇತಾಜಿ ಜಂಕ್ಷನ್‌ ವರೆಗೆ ಎಂ.ಎಂ.ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರದ ಬದಲು ಏಕ ಮುಖ ಸಂಚಾರ, ಹೇನ್ಸ್‌ ರಸ್ತೆಯಲ್ಲಿ ನೇತಾಜಿ ಜಂಕ್ಷನ್‌ ನಿಂದ ಪೇಸ್ಟ್‌ ಜಂಕ್ಷನ್‌ವರೆಗೆ, ನಾಗವಾರ ಜಂಕ್ಷನ್‌ ನಿಂದ ಪಾಟರಿ ಸರ್ಕಲ್‌ ರಸ್ತೆವರೆಗೆ ಭಾಗಶಃ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ವಾಹನ ನಿಲುಗಡೆ ನಿರ್ಬಂಧಿತ ರಸ್ತೆಗಳು ನೃಪತುಂಗ ರಸ್ತೆ-ಕೆ.ಆರ್‌.ವೃತ್ತದಿಂದ ಪೊಲೀಸ್‌ ಕಾರ್ನರ್‌, ಕೆ.ಜಿ.ರಸ್ತೆ- ಪೊಲೀಸ್‌ ಕಾರ್ನರ್‌ನಿಂದ ಮೈಸೂರು ಬ್ಯಾಂಕ್‌ ವೃತ್ತ, ಎನ್‌.ಆರ್‌.ರಸ್ತೆ- ಟೌನ್‌ ಹಾಲ್‌ ಜಂಕ್ಷನ್‌ನಿಂದ ಪೊಲೀಸ್‌ ಕಾರ್ನರ್‌, ಪಿ.ಕಾಳಿಂಗರಾವ್‌ ರಸ್ತೆ-ಎನ್‌.ಆರ್‌ ಜಂಕ್ಷನ್‌ನಿಂದ ಸುಬ್ಬಯ್ಯ ವೃತ್ತ, ಕಸ್ತೂರಿಬಾ ರಸ್ತೆ- ಹಡ್ರನ್‌ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ-ಸಿದ್ದಲಿಂಗಯ್ಯ ವೃತ್ತದಿಂದ ಕ್ವೀನ್ಸ್‌ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಆರ್‌ಆರ್‌ ಎಂಆರ್‌ ಜಂಕ್ಷನ್‌, ಆರ್‌ಆರ್‌ಎಂಆರ್‌ ರಸ್ತೆ-ರಿಚ್ಮಂಡ್‌ ವೃತ್ತದಿಂದ ಹಡ್ಸನ್‌ ವೃತ್ತ, ಎಂ.ಜಿ.ರಸ್ತೆ- ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತ, ಸೆಂಟ್ರಲ್‌ ಸ್ಟ್ರೀಟ್‌-ಅನಿಲ್‌ ಕುಂಬ್ಳೆ ವೃತ್ತದಿಂದ ಬಿಆವಿರ್‌ ಜಂಕ್ಷನ್‌, ಕ್ವೀನ್ಸ್‌ ರಸ್ತೆ- ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆ- ಕೆ.ಆರ್‌.ವೃತ್ತದಿಂದ ಬಾಳೇಕುಂದ್ರಿ ವೃತ್ತ, ಶೇಷಾದ್ರಿ ರಸ್ತೆ- ಮಹಾರಾಣಿ ವೃತ್ತದಿಂದ ಕೆ.ಆರ್‌.ವೃತ್ತ, ಹಳೇ ಅಂಚೆ ಕಚೇರಿ ರಸ್ತೆ- ಮೈಸೂರು ಬ್ಯಾಂಕ್‌ ವೃತ್ತದಿಂದ ಕೆ.ಆರ್‌. ವೃತ್ತದ ವರೆಗೆ, ಕಬ್ಬನ್‌ ಉದ್ಯಾನದ ಒಳ ಆವರಣ, ನೇತಾಜಿ ರಸ್ತೆ, ಹೇನ್ಸ್‌ ರಸ್ತೆ, ಎಂ.ಎಂ.ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಮಿಲ್ಲರ್ಸ್‌ ರಸ್ತೆಗಳ ಎರಡೂ ಬದಿ, ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್‌ ವರೆಗೆ ರಸ್ತೆಯ ಎರಡೂ ಬದಿ, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಪೊಲೀಸ್‌ ಠಾಣೆ ವರೆಗೆ ರಸ್ತೆಯ ಎರಡೂ ಬದಿ, ಎಚ್‌ಬಿಆರ್‌ ಬಡಾವಣೆ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್‌ ಜಂಕ್ಷನ್‌ ವರೆಗೆ ರಸ್ತೆ ಎರಡೂ ಬದಿ.

Advertisement

Udayavani is now on Telegram. Click here to join our channel and stay updated with the latest news.