Advertisement
ಅನ್‌ಲಾಕ್ ಬಳಿಕವೂ ಶೇ.30ರಷ್ಟು ಕೋಳಿ ಸಾಕಾಣಿಕೆ ಉದ್ಯಮ ಆರಂಭವಾಗಿಲ್ಲ. ಹೀಗಾಗಿ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಒಂದು ದಿನಕ್ಕೆ ಒಂದೂವರೆ ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತಿದ್ದು, ಅಷ್ಟೇ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಸುಮಾರು 50 ಲಕ್ಷ ಮೊಟ್ಟೆ ರಾಜ್ಯಕ್ಕೆ ಬರುತ್ತದೆ. ಕರ್ನಾಟಕದಿಂದ 50 ಲಕ್ಷ ಮೊಟ್ಟೆ ಮುಂಬಯಿ ಮತ್ತು ಗೋವಾಕ್ಕೂ ಮಾರಾಟವಾಗುತ್ತಿದೆ ಎಂದು ಕರ್ನಾಟಕ ಸಹಕಾರಿ ಕುಕ್ಕುಟ ಮಹಾಮಂಡಲದ ಅಧ್ಯಕ್ಷ ಡಿ. ಕೆ. ಕಾಂತರಾಜು ತಿಳಿಸುತ್ತಾರೆ.
2017ರ ನವೆಂಬರ್‌ನಲ್ಲಿ ಕೋಳಿಮೊಟ್ಟೆ ಸಗಟು ಬೆಲೆ 100ಕ್ಕೆ 533 ರೂ.ಗೆ ತಲುಪಿತ್ತು. ಮಾರುಕಟ್ಟೆಯಲ್ಲಿ 6.50 ರೂ.ಗೆ ಮಾರಾಟ ಮಾಡಲಾಗಿತ್ತು.