Advertisement

ಎಗ್‌ ಫ್ಯಾಕ್ಟರಿ!ಮೊಟ್ಟೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತೀರಿ

04:02 PM Feb 10, 2018 | Team Udayavani |

ಮೊಟ್ಟೆಯಿಂದ ಎಷ್ಟು ರೀತಿಯ ಖಾದ್ಯಗಳನ್ನು ತಯಾರಿಸಬಹುದು? ಈ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ಕಷ್ಟ. ಏಕೆಂದರೆ ಒಂದೊಂದು ಪ್ರಾಂತ್ಯದಲ್ಲಿ ಅಲ್ಲಿನದ್ದೇ ಆದ ಒಂದಷ್ಟು ಬಗೆಯ ಮೊಟ್ಟೆಯ ಖಾದ್ಯಗಳನ್ನು ಆ ಭಾಗದ ಜನರು ಅರಿತಿರುತ್ತಾರೆ. ಆದರಲ್ಲೂ ನಮ್ಮಲ್ಲಿ ಈ ಕೆಲವೇ ಮೊಟ್ಟೆಯ ಖಾದ್ಯಗಳು ಲಭ್ಯ ಇವೆ ಎನ್ನಬಹುದು. ಭಾರತ ಸೇರಿದಂತೆ ಮೆಕ್ಸಿಕನ್‌, ಇಟಾಲಿಯನ್‌, ಬ್ರಿಟಿಷ್‌, ಫ್ರೆಂಚ್‌ ಮತ್ತು ಅಮೆರಿಕನ್‌ ಶೈಲಿಯ ಮೊಟ್ಟೆ ಖಾದ್ಯಗಳು ಒಂದೇ ಕಡೆ ಸಿಗುವ ಸ್ಥಳವೊಂದಿದೆ ನಮ್ಮ ನಗರದಲ್ಲಿ. ಅದುವೇ ಎಗ್‌ ಫ್ಯಾಕ್ಟರಿ. ಹೆಸರೇ ಸೂಚಿಸುವಂತೆ ಇದು ಮೊಟ್ಟೆ ಖಾದ್ಯಗಳನ್ನು ತಯಾರಿಸುವ ಫ್ಯಾಕ್ಟರಿ! ಜಾಗತಿಕ ಮತ್ತು ದೇಸಿ ಅಡುಗೆ ಶೈಲಿಯನ್ನು ಇಲ್ಲಿನ ಬಾಣಸಿಗರು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಬಾಯಿ ಸಿಹಿ ಮಾಡಿಕೊಳ್ಳಲು ಬ್ರೆಝಿಲ್‌ನ ಕೋಕೋನಟ್‌ ಕೇಕ್‌, ಚೀಸ್‌ಕೇಕ್‌, ಜೂಸ್‌ ಮತ್ತು ಮಿಲ್ಕ್ಶೇಕ್‌ಗಳಿವೆ.

Advertisement

ಎಲ್ಲೆಲ್ಲಿ?: ವೈಟ್‌ಹೌಸ್‌ ಬಿಲ್ಡಿಂಗ್‌, ಸೇಂಟ್‌ ಮಾರ್ಕ್ಸ್ ರಸ್ತೆ
  18ನೇ ಮುಖ್ಯರಸ್ತೆ, 5ನೇ ಹಂತ ಜೆ.ಪಿ.ನಗರ 
 ಸಂತೋಷ್‌ ಟವರ್‌, ಇ.ಪಿ.ಐ.ಪಿ ಏರಿಯಾ, ವೈಟ್‌ಫೀಲ್ಡ್‌

Advertisement

Udayavani is now on Telegram. Click here to join our channel and stay updated with the latest news.

Next