Advertisement

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

12:22 PM Jan 22, 2022 | Team Udayavani |

ಕುರುಗೋಡು: ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆಯನ್ನು ನಿವಾರಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಿಸಲು ಮುಂದಾಗಿದೆ ಆದ್ದರಿಂದ 6 ತಿಂಗಳಿಂದ 3 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಂಗನವಾಡಿ ಮಕ್ಕಳಿಗೆ ಎರಡು ತಿಂಗಳದ  ತಲಾ ಒಬ್ಬ ಮಕ್ಕಳಿಗೆ 24 ಮೊಟ್ಟೆ ಗಳನ್ನು ಸಮೀಪದ ರಾಮಚಂದ್ರಪುರ ಕ್ಯಾಂಪ್ 15ನೇ ಅಂಗನವಾಡಿ ಕೇಂದ್ರದಲ್ಲಿ ವಿತರಣೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಅಂಬಮ್ಮ ಮಾತನಾಡಿ, ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿದೆ. ಮಕ್ಕಳ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಅಂಗವೈಕಲ್ಯತೆ, ಉಸಿರಾಟದ ತೊಂದರೆ, ಉಬ್ಬಸ, ಹೃದಯ ಸಂಬಂಧಿಕಾಯಿಲೆಗಳು ಬರುತ್ತಿರುವುದರಿಂದ ಮೊ ಟ್ಟೆ ನೀಡುವಂತೆ ಸಲಹೆ ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅಂಗನವಾಡಿಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಮೊಟ್ಟೆ ವಿತರಿಸಲು ಮುಂದಾಗಿದೆ ಎಂದರು.

ಅಲ್ಲದೆ ಸರ್ಕಾರವು ಅಂಗನವಾಡಿ ಕೇಂದ್ರಗಳ ಮೂಲಕ ಕೋಳಿಮೊಟ್ಟೆ ವಿತರಿಸುವ ಕಾರ್ಯ ಹಲವೆಡೆ ಸ್ಥಗಿತಗೊಂಡಿತ್ತು. ಲಾಕ್‍ಡೌನ್‍ನಿಂದಾಗಿ ಬಡ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಪೌಷ್ಟಿಕತೆಗೆ ಈಡಾಗುವ ಆತಂಕವೂ ಎದುರಾಗಿತ್ತು. ಇದನ್ನು ಅರಿತ ಸರಕಾರ 2021 ಡಿಸಂಬರ್ ಮತ್ತು 2022 ಜನವರಿ ತಿಂಗಳ ಒಟ್ಟು 42 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಕ್ಕಳಿಗೆ ತಲಾ ಒಬ್ಬ ಮಕ್ಕಳಿಗೆ 24 ಮೊಟ್ಟೆ ವಿತರಣೆ ಮಾಡಲಾಗಿದೆ ಎಂದರು.

ಸರಕಾರ ನೀಡಿರುವ ಈ ಒಂದು ಯೋಜನೆ ಯಿಂದ ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ತಗ್ಗಿಸುವುದು, 6 ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಮಟ್ಟ ಹೆಚ್ಚಿಸುವುದು, ಗರ್ಭಿಣಿಯರು, ಬಾಣಂತಿಯರಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಹಾಲಿನ ಪುಡಿ ಮೊದಲಾದ ಆಹಾರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಆದರೆ, 2 ತಿಂಗಳುಗಳಿಂದ  ಹಲವೆಡೆ ಮಕ್ಕಳಿಗೆ ಮೊಟ್ಟೆ ನೀಡುವುದು ಸ್ಥಗಿತ ವಾಗಿತ್ತು, ಇದರಿಂದ ಬಡ ಕುಟುಂಬಗಳು ಕಷ್ಟದಲ್ಲಿ ಸಿಲುಕುವುದನ್ನು ಕಂಡ ಸರಕಾರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ಉದ್ದೇಶ ಕೈಗೊಂಡಿದೆ ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಬಾಲ ವಿಕಾಶ ಸಮಿತಿಯ ಹಿರಿಯ ಮುಖಂಡರಾದ ಎ. ಉಮಾ ಮಹೇಶ್ವರ್, ಗ್ರಾಪಂ ಸದಸ್ಯರಾದ ಲಲಿತಮ್ಮ ಜಡೆಪ್ಪ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next