Advertisement

ಬಾಂಬೋಲಿಂನನ್ನು ದೇಶದ ಹೆಸರಾಂತ ಆಸ್ಪತ್ರೆಯನ್ನಾಗಿಸಲು ಪ್ರಯತ್ನ

04:38 PM Oct 02, 2021 | Team Udayavani |

ಪಣಜಿ: ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಬಾಂಬೋಲಿಂ) ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಬಾಂಬೋಲಿಂ ಆಸ್ಪತ್ರೆಯನ್ನು ದೇಶದಲ್ಲಿಯೇ ಒಂದು ಹೆಸರಾಂತ ಆಸ್ಪತ್ರೆಯನ್ನಾಗಿಸಲು ನನ್ನ ಪ್ರಯತ್ನ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜೆರೆಯಾಟ್ರಿಕ್ ಎಂಡಿ ಕೋರ್ಸ ಹಾಗೂ ಎಂಸಿಎಚ್ ಮತ್ತು ಡಿಎಂ ಕೋರ್ಸನ್ನು ಆರಂಭಿಸಲಾಗುವುದು ಎಂದು ಗೋವಾ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಮಾಹಿತಿ ನೀಡಿದರು.

Advertisement

ಬಾಂಬೋಲಿಂ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಜೆರೆಯಾಟ್ರಿಕ್ ಹಾಗೂ ಪೋಸ್ಟ ಕೋವಿಡ್ ವಾರ್ಡ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಆರೋಗ್ಯ ಮಂತ್ರಿ ರಾಣೆ-ರಾಜ್ಯದಲ್ಲಿ ಸದ್ಯ ಕೋವಿಡ್ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ನೀಡಲಾಗುತ್ತಿದ್ದು ಪ್ರತಿದಿನ 12 ರಿಂದ 16 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಮೊದಲ ಡೋಸ್ ಲಸಿಕಾ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಸದ್ಯ ಎರಡನೇಯ ಡೋಸ್ ಲಸಿಕೆ ನೀಡಲಾಗುತ್ತಿದೆ. ಇನ್ನು ಒಂದು ತಿಂಗಳ ಒಳಗೆ ರಾಜ್ಯದಲ್ಲಿ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಬಾಂಬೋಲಿಂ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್, ಡಾ. ಉದಯ್ ಕಾಕೋಡಕರ್, ಡಾ. ಸಂದೀಪ ಸರ್ ದೇಸಾಯಿ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next