Advertisement

ಕುರುಬ ಸಮುದಾಯ ಪ್ರಗತಿಗೆ ಯತ್ನ: ರಾಧಿಕಾ

03:08 PM Jan 23, 2022 | Team Udayavani |

ಹುಣಸಗಿ: ಕುರುಬ ಸಮುದಾಯ ಸರ್ವ ರೀತಿಯಿಂದಲೂ ಪ್ರಗತಿ ಸಾಧಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹುಣಸಗಿ ತಾಲೂಕು ಮಾಹಿಳಾ ಘಟಕದ ನೂತನ ಅಧ್ಯಕ್ಷೆ ರಾಧಿಕಾ ಸಿದ್ದನಗೌಡ ಬಿರಾದಾರ ಹೇಳಿದರು.

Advertisement

ವಜ್ಜಲ್‌ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ನೂತನ ತಾಲೂಕು ಘಟಕ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುರುಬ ಸಮಾಜದ ಶೈಕ್ಷಣಿಕ, ಆರ್ಥಿಕವಾಗಿ ಸದೃಢವಾಗಬೇಕಿದೆ. ಅಲ್ಲದೆ ಮಹಿಳೆಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರುವುದು ಅವಶ್ಯ ಇದೆ. ಸ್ವಾಲಂಬಿ ಜೀವನದೊಂದಿಗೆ ತಕ್ಕಮಟ್ಟಿಗೆ ಸಮಾಜ ಸೇವೆ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿ, ಸಂಸ್ಕಾರ, ಸಂಪ್ರದಾಯ ಹಾಗೂ ಗುರುಮಾರ್ಗದರ್ಶನದಲ್ಲಿ ಕುರುಬ ಸಮಾಜ ಮುನ್ನಡೆಯಬೇಕು. ಸರಕಾರಿ ಸೌಲಭ್ಯ ಹಾಗೂ ಅಧಿಕಾರ ಪಡೆಯಲು ಶಿಕ್ಷಣದ ಜತೆಗೆ ಸಮಾಜದ ಒಗ್ಗಟ್ಟು ಅವಶ್ಯ ಎಂದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ನೂತನ ತಾಲೂಕು ಘಟಕಕ್ಕೆ ರಾಧಿಕಾ ಬಿರಾದಾರ ಅಧ್ಯಕ್ಷರನ್ನಾಗಿ ಹಾಗೂ ಶಿವಬಸಮ್ಮ ಯಮನೂರಪ್ಪ ತೊಗರಿ ಕಾರ್ಯಾಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ನೂತನವಾಗಿ ಆಯ್ಕೆಯಾದ ಕಕ್ಕೇರಾ ಹಾಗೂ ಕೆಂಭಾವಿ ಪುರಸಭೆ ಸದಸ್ಯರಿಗೆ ಮತ್ತು ವಜ್ಜಲ್‌ ಗ್ರಾಪಂ ಅಧ್ಯಕ್ಷ ಪ್ರಧಾನೆಪ್ಪ ಮೇಟಿ ಅವರನ್ನು ಸನ್ಮಾನಿಸಲಾಯಿತು.

Advertisement

ಕಾಗಿನೆಲೆ ಮಹಾಸಂಸ್ಥಾನ ಮಠದ ಲಿಂಗಬೀರ ದೇವರು, ಬಂಡೆಪ್ಪನಳ್ಳಿಯ ಮುದುಕಪ್ಪ ಮುತ್ಯಾ, ಕೆಂಚರಾಯ ಮುತ್ಯಾ, ಜೋಗೆಪ್ಪ ಪೂಜಾರಿ ಕೂಡ್ಲಿಗಿ, ನಿಂಗಪ್ಪ ಪೂಜಾರಿ ವಜ್ಜಲ್‌, ರೇವಣಸಿದ್ದಪ್ಪ ಪೂಜಾರಿ, ಜಿಲ್ಲಾಧ್ಯಕ್ಷ ವಿಶ್ವನಾಥ ನಿಲಹಳ್ಳಿ, ಸುರಪುರ ತಾಲೂಕು ಅಧ್ಯಕ್ಷ ಕಾಳಪ್ಪ ಕವಾತಿ, ಮುಖಂಡ ಯಲ್ಲಪ್ಪ ಕುರಕುಂದಿ ರವಿಚಂದ್ರ ಸಾಹುಕಾರ, ಭೀಮರಾಯ ಮೂಲಿಮನಿ, ಪರಶುರಾಮ ಚೌದ್ರಿ, ನಂದುಕುಮಾರ್‌, ಯಮನೂರಪ್ಪ, ಪರಮಣ್ಣ ಗಿಂಡಿ, ಸಿದ್ದಣ್ಣ ಅಬ್ಯಾಳ, ಸಾಬಣ್ಣ ಗಿಂಡಿ, ಬಸವರಾಜ ಮೇಟಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next