Advertisement

Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ

06:52 PM Dec 13, 2024 | Team Udayavani |

ಲಕ್ನೋ: ದೇಶದ ಅಲ್ಪಸಂಖ್ಯಾಕರನ್ನು, ವಿಶೇಷವಾಗಿ ಮುಸ್ಲಿಮರನ್ನು “ಎರಡನೇ ದರ್ಜೆಯ” ಪ್ರಜೆಗಳಾಗಿ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ(ಡಿ13) ಆರೋಪಿಸಿದ್ದಾರೆ.

Advertisement

ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ’ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಯಾದವ್, ‘ಅಸಮಾನತೆಯನ್ನು ಬೆಳೆಸಲಾಗುತ್ತಿದೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಕೇಂದ್ರ ಸರಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

“ಈ ಸಂವಿಧಾನ ನಮ್ಮ ರಕ್ಷಾಕವಚ, ನಮ್ಮ ಭದ್ರತೆ. ಇದು ನಮಗೆ ಅಗತ್ಯವಿರುವಾಗ ಶಕ್ತಿಯನ್ನು ನೀಡುತ್ತದೆ. ತುಳಿತಕ್ಕೊಳಗಾದ, ನಿರ್ಲಕ್ಷಿತ, ದಮನಿತ ಮತ್ತು ವಂಚಿತರ ಹಕ್ಕುಗಳ ನಿಜವಾದ ರಕ್ಷಕ ಸಂವಿಧಾನ. ನಮ್ಮಂತಹವರಿಗೆ ಮತ್ತು ದೇಶದ ದುರ್ಬಲರಿಗೆ, ವಿಶೇಷವಾಗಿ ಪಿಡಿಎ ಗಾಗಿ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾಕ) ಸಂವಿಧಾನವನ್ನು ಉಳಿಸುವುದು ಜೀವನ್ಮರಣದ ವಿಷಯವಾಗಿದೆ ಎಂದರು.

‘ಕೇಂದ್ರ ಸರಕಾರವು ಅಲ್ಪಸಂಖ್ಯಾಕರನ್ನು ನಿರ್ಲಕ್ಷಿಸುತ್ತಿದೆ, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ. 20 ಕೋಟಿಗೂ ಹೆಚ್ಚು ಜನರನ್ನು, ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಲಾಗುತ್ತಿದೆ. ಅವರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವರ ಆಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ, ಮನೆಗಳನ್ನು ಕೆಡವಲಾಗುತ್ತಿದೆ ಮತ್ತು ಆಡಳಿತಾತ್ಮಕ ಸಹಾಯದಿಂದ ಆರಾಧನಾ ಸ್ಥಳಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next