Advertisement
ಮಂಗಳವಾರ ‘ಸ್ಟ್ಯಾಂಡ್ ವಿತ್ ಮೈನಾರಿಟೀಸ್ ಬಾಂಗ್ಲಾದೇಶ’ ಎಂದು ಬರೆದಿರುವ ಕೈ ಚೀಲಗಳೊಂದಿಗೆ ಸಂಸತ್ತಿಗೆ ಬಂದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಪ್ರಿಯಾಂಕಾರೊಂದಿಗೆ ಹಲವು ಕಾಂಗ್ರೆಸ್ ಸಂಸದರು ಕೂಡ ಸಂಸತ್ ಆವರಣದಲ್ಲಿ ಕೈ ಚೀಲಗಳ ಹಿಡಿದು ಪ್ರತಿಭಟನೆ ನಡೆಸಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಘೋಷಣೆಗಳ ಕೂಗಿದರು.
ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಶೂನ್ಯವೇಳೆಯಲ್ಲೂ ಪ್ರಸ್ತಾಪ:
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಹಿಡಿದುಕೊಂಡು ಆಗಮಿಸಿದ್ದ ಕೈ ಚೀಲದಲ್ಲಿ “ಬಾಂಗ್ಲಾದೇಶ ಕೆ ಹಿಂದೂ ಔರ್ ಇಸೈಯೋಂ ಕೆ ಸಾಥ್ ಖಡೇ ಹೋ” (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ನಿಂತುಕೊಳ್ಳಿ) ಎಂದು ಬರೆಯಲಾಗಿದೆ. ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರೈಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಪ್ರಿಯಾಂಕಾ ಗಾಂಧಿ ಸೋಮವಾರ ಶೂನ್ಯವೇಳೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿ ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಬೇಕು. ಅದು ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಿ ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: https://www.udayavani.com/news-section/national-news/parliament-priyanka-gandhi-arrived-in-parliament-with-a-palestine-bag
Related Articles
Advertisement