Advertisement
ಸರ್ಜಿಕಲ್ ಸ್ಟ್ರೈಕ್ ಅವಶ್ಯವಾಗಿತ್ತುಸರ್ಜಿಕಲ್ ದಾಳಿಯ ಪೂರ್ವದಲ್ಲಿ ಅಂತಹದ್ದೊಂದು ಸಾಹಸವನ್ನು ಭಾರತ ಮೆರೆಯಬೇಕಾದ ಸನ್ನಿವೇಶಗಳು ಸೃಷ್ಟಿ ಯಾಗಿದ್ದವು. ಉರಿ ಎಂಬ ಪ್ರದೇಶದಲ್ಲಿ ಹತ್ತೂಂಬತ್ತು ಸೈನಿಕರನ್ನು ಹತ್ಯೆ ಮಾಡಲಾಗಿದ್ದರೆ, ಅಲ್ಲಲ್ಲಿ ದಾಳಿಗಳು ನಡೆದು ಸೈನಿಕರ ಆತ್ಮಸ್ಥೈರ್ಯವೇ ಕುಸಿಯುವಂತಹ ಸಂದರ್ಭ ಬರಲಾರಂಭಿಸಿತ್ತು. ಭಾರತೀಯ ಸೈನ್ಯ ತಾನು ಸಮರ್ಥ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಡುವ ಅಗತ್ಯವೂ ಇತ್ತಲ್ಲದೆ ಭಯೋತ್ಪಾದಕರಿಗೆ, ಪಾಕಿಸ್ತಾನಕ್ಕೆ ಪ್ರಖರ ಸಂದೇಶವನ್ನು ನೀಡುವ ಅಗತ್ಯವೂ ಇತ್ತು. ಈ ಎಲ್ಲ ಕಾರಣಗಳೂ ಒಂದಾಗಿ ಸರ್ಜಿಕಲ್ ಸ್ಟ್ರೈಕ್ ಯೋಜನೆ ಕಾರ್ಯಗತವಾಯಿತು ಎಂದರು.
ಅನ್ಯ ರಾಷ್ಟ್ರದ ಭೂಭಾಗದೊಳಗೆ ಹೋಗಿ ನಿರ್ದಿಷ್ಟ ಸ್ಥಳದಲ್ಲಿ ದಾಳಿ ಮಾಡಿ ಬರುವುದಕ್ಕೆ ಸಾಕಷ್ಟು ತಯಾರಿ ಹಾಗೂ ಗೌಪ್ಯತೆ ಎರಡೂ ಬೇಕು. ಅದರಲ್ಲೂ ಯಾವುದೇ ಪ್ರಾಣ ಹಾನಿಯಿಲ್ಲದೆ ಮರಳಿ ಬರುವುದೆಂದರೆ ಸುಲಭದ ಮಾತಲ್ಲ. ಸುಮಾರು ಐದು ಭಯೋತ್ಪಾದಕ ನೆಲೆಗಳನ್ನು ಗುರುತಿಸಿ, ಅವುಗಳ ಮೇಲೆ ದಾಳಿ ನಡೆಸಿ, ಅರವತ್ತರಿಂದ ಎಪ್ಪತ್ತು ಭಯೋತ್ಪಾದಕರನ್ನು ವಧಿ ಸಿ ನಮ್ಮ ಸೈನಿಕರು ಮರಳಿ ಬಂದಿರುವುದು ದೇಶದ ತಾಕತ್ತನ್ನು ಇಡಿಯ ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು. ಸದೃಢ ಭಾರತ
ಪೋಖ್ರಾನ್ ಅಣು ಬಾಂಬ್ ಪರೀಕ್ಷೆಯ ಸಂದರ್ಭದಲ್ಲಿ ಅಮೆರಿಕದಂತಹ ರಾಷ್ಟ್ರಗಳು ನಮ್ಮ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಎಚ್ಚರಿಕೆ ನೀಡಿದ್ದವು. ಆದರೆ ಪೋಖ್ರಾನ್ ಘಟನೆಯ ಇಪ್ಪತ್ತು ವರ್ಷಗಳ ಅನಂತರ ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂದು ಭಾರತ ಘಂಟಾಘೋಷವಾಗಿ ಹೇಳಿಕೊಂಡಾಗ ಪಾಕಿಸ್ತಾನದ ಆಪ್ತರಾಷ್ಟ್ರವಾದ ಚೀನಾವೂ ಸೊಲ್ಲೆತ್ತಿಲ್ಲ. ಅಮೆರಿಕದಂತಹ ಬಲಾಡ್ಯ ದೇಶಗಳು ಮೌನ ವಹಿಸಿವೆ. ಇದು ಭಾರತ ಪ್ರಾಪಂಚಿಕವಾಗಿ ಸದೃಢವಾಗಿ ಬೆಳೆದಿರುವುದನ್ನು ತೋರಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
Related Articles
ಕ್ಯಾ| ಬೃಜೇಶ್ ಚೌಟ ಅವರನ್ನು ಸಮ್ಮಾನಿಸಲಾಯಿತು. ಸರ್ಜಿಕಲ್ ದಾಳಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ| ಕೆ. ಕೃಷ್ಣ ಕಾರಂತ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲಕ ಡಾ| ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಖೀತ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸಾಯಿಶ್ರೀ ಪದ್ಮ ಕಾರ್ಯಕ್ರಮ ನಿರೂಪಿಸಿದರು.
Advertisement
ಸರ್ಜಿಕಲ್ ದಾಳಿ ಭಾರತದ ಹೆಮ್ಮೆಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ದೇಶ ವಿಭಜನೆಯ ಕಾಲದಿಂದ ಈಗಿನ ಕಾಲದವರೆಗೂ ಪಾಕಿಸ್ತಾನ ತನ್ನ ಧೂರ್ತ ಬುದ್ಧಿಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಕಾರ್ಗಿಲ್ ಯುದ್ಧದಲ್ಲಿ ಸರಿಯಾದ ಪಾಠ ಕಲಿಸಿದ್ದರೂ ಮತ್ತೆ ಮತ್ತೆ ದಾಳಿ ಮಾಡುವ ಹುಂಬತನ ತೋರಿಸಿದೆ. ಭಯೋತ್ಪಾದನೆಯ ಮೂಲಕ್ಕೇ ಸರ್ಜಿಕಲ್ ದಾಳಿಯ ಮುಖಾಂತರ ಹೊಡೆದಿರುವುದು ಭಾರತದ ಯೋಗ್ಯತೆಯನ್ನು ಬಿಂಬಿಸಿದೆ ಮತ್ತು ಅಂತಹ ಅಗತ್ಯವೂ ಇತ್ತು ಎಂದರು.