Advertisement

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

11:26 PM May 18, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದೀಗ ರಾಜ್ಯಕ್ಕೆ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟನೆ ಹೊರಡಿಸುವ ಮೂಲಕ ಸರಕಾರವನ್ನು ಕೆಣಕಿದೆ.

Advertisement

ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.

ಅಪರಾಧಿಗಳಿಗೆ ಶ್ರೀರಕ್ಷೆ- ಅಮಾಯಕರಿಗೆ ಶಿಕ್ಷೆ. ರಕ್ತ ಸಿಕ್ತ ಕೈನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಪರಾಧಗಳು ಜರಗಿವೆ. ಗೂಂಡಾ ರಾಜ್ಯವಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು ಕಾಂಗ್ರೆಸ್‌ ಸರಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿ ಮಾಡಿದೆ. ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ.

ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೋ, ಗಲಭೆ ಇತ್ಯಾದಿಗಳ ಲೆಕ್ಕವೇ ಬೇರೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಖುದ್ದು ಒಂದಿಷ್ಟು ಗಲಭೆಗಳನ್ನು ಸೃಷ್ಟಿಸಿದೆ. ಹನುಮ ಧ್ವಜ, ಹಿಂದೂಗಳ ಮೇಲೆ ಕೇಸ್‌, ಹಿಂದೂಗಳ ಬಂಧನ, ರಾಮನಗರ ವಕೀಲರ ಪ್ರಕರಣಗಳಲ್ಲಿ ಸರಕಾರವೇ ಕೈ ಮಿಲಾಯಿಸಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next