Advertisement

ಅಕ್ಟೋಬರ್‌ 1ರಿಂದ ಜಾರಿ; ಆಟೋರಿಕ್ಷಾ ಕನಿಷ್ಟ ಬಾಡಿಗೆ ದರ ಏರಿಕೆ

05:05 PM Jul 13, 2022 | Team Udayavani |

ಧಾರವಾಡ: ಪ್ರಯಾಣದ ಮೊದಲ 1.6 ಕಿಲೋ ಮೀಟರ್‌ವರೆಗೆ ಈ ವರೆಗೂ ಜಾರಿಯಲ್ಲಿದ್ದ ಆಟೋಗಳ ಕನಿಷ್ಟ ಬಾಡಿಗೆ ದರವನ್ನು 28 ರೂ. ಗಳಿಂದ 30 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದ ಅವರು, ಈ ಪರಿಷ್ಕೃತ ದರಗಳು ಅಕ್ಟೋಬರ್‌ 1ರಿಂದ ಜಾರಿಗೊಳ್ಳಲಿವೆ.

ಎಲ್ಲಾ ಆಟೋರಿಕ್ಷಾಗಳು ಆಗಸ್ಟ್‌ 15ರೊಳಗೆ ಕಡ್ಡಾಯವಾಗಿ ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಅವಳಿನಗರದಲ್ಲಿ ಬಾಡಿಗೆಯ ರಹದಾರಿ ಹೊಂದಿರುವ ಆಟೋರಿಕ್ಷಾಗಳು ಪ್ರಯಾಣದ ಪ್ರಾರಂಭಿಕ 1.6 ಕಿಮೀ ವರೆಗೆ 30 ರೂ. ಕನಿಷ್ಟ ಬಾಡಿಗೆ ದರ, ನಂತರದ ಪ್ರತಿ ಒಂದು ಕಿಮೀಗೆ 15 ರೂ. ಹಾಗೂ ರಾತ್ರಿ 10ರಿಂದ ಬೆಳಗಿನ 5 ಗಂಟೆವರೆಗೆ ಅರ್ಧ ಪಟ್ಟು ಹೆಚ್ಚುವರಿ ದರ ಪಡೆಯಬಹುದು. ಎಲ್ಲಾ ಆಟೋರಿಕ್ಷಾಗಳು ಆ. 15 ರೊಳಗೆ ಕಡ್ಡಾಯವಾಗಿ ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸಿಕೊಂಡು ಮೀಟರ್‌ ಸತ್ಯಾಪನೆ ಮಾಡಿಸಿಕೊಳ್ಳಬೇಕು. ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅವಳಿನಗರದಲ್ಲಿ ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸುವ ಮತ್ತು ಪೂರೈಸುವ ಡೀಲರ್‌ಗಳ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಿ ತ್ವರಿತ ಸೇವೆ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮೂಲ ಸೌಕರ್ಯಕ್ಕೆ ಸೂಚನೆ: ಅವಳಿನಗರದ ಬಸ್‌, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಿಪೇಡ್‌ ಆಟೋಕ್ಷಾ ಸ್ಟ್ಯಾಂಡ್‌ಗಳನ್ನು ನಿರ್ಮಿಸಿ ಕೊಡಬೇಕು. ಅವಳಿನಗರದ ಎಲ್ಲ ವಲಯಗಳ ವ್ಯಾಪ್ತಿಗಳಲ್ಲಿ ಆಟೋರಿಕ್ಷಾ ಸ್ಟ್ಯಾಂಡ್‌ ಗಳು, ಶೌಚಾಲಯಗಳನ್ನು ನಿರ್ಮಿಸಿ ಸ್ಥಳೀಯ ಆಟೋರಿಕ್ಷಾ ಚಾಲಕರ ಸಂಘದವರಿಗೆ ನಿರ್ವಹಣೆ ಜವಾಬ್ದಾರಿ ವಹಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಆಟೋಸ್ಟ್ಯಾಂಡ್‌ಗಳನ್ನು ನಿರ್ಮಿಸಿ ನಗರದ ಸೌಂದಯಿìಕರಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಎಸ್‌ಪಿ ಲೋಕೇಶ್‌ ಜಗಲಾಸರ್‌ ಮಾತನಾಡಿ, ಬಿಎಸ್‌-4 ಹಾಗೂ ಮಾಲೀಕತ್ವ ವರ್ಗಾವಣೆಯಾಗಿರುವ ಆಟೋಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಈ ಹಿಂದೆ ಪೊಲೀಸ್‌ ಅಥವಾ ಆರ್‌ಟಿಒ ವರದಿ ಆಧರಿಸಿ ರಹದಾರಿ ರದ್ದುಪಡಿಸಿದ್ದರೆ ಅವುಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.

Advertisement

ಹು-ಧಾ ಉಪ ಪೊಲೀಸ್‌ ಆಯುಕ್ತ ಗೋಪಾಲ ಬ್ಯಾಕೋಡ್‌ ಮಾತನಾಡಿ, ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸುವ ಡೀಲರ್‌ಗಳು ಆಟೋರಿಕ್ಷಾಗಳ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಬಾರದು. ನಿಗದಿತ ದರ ಮಾತ್ರ ವಿಧಿಸಬೇಕು. ಕಾನೂನು ಮಾಪನಶಾಸ್ತ್ರ ಇಲಾಖೆ ಅ ಧಿಕಾರಿಗಳು ಡೀಲರ್‌ಗಳಿಗೆ ಈ ಕುರಿತು ಎಚ್ಚರಿಕೆ ನೀಡಬೇಕು ಎಂದರು. ಹು-ಧಾ ಪಶ್ಚಿಮ ಆರ್‌ಟಿಒ ಬಿ.ಶಂಕರಪ್ಪ, ಪೂರ್ವ ವಿಭಾಗದ ಆರ್‌ಟಿಒ ಕೆ.ದಾಮೋದರ ಇನ್ನಿತರರಿದ್ದರು.

ಒಂದು ಬಾರಿ ರಹದಾರಿ
ಈಗಾಗಲೇ ನೋಂದಣಿಯಾಗಿರುವ ಭಾರತ್‌ ಸ್ಟೇಜ್‌-4 ಮಾಪನದ ವಾಹನಗಳಿಗೆ ಹಾಗೂ ಮಾಲೀಕತ್ವ ವರ್ಗಾವಣೆ ಸಂದರ್ಭದಲ್ಲಿ ರದ್ದಾಗಿರುವ ಹಳೆಯ ಆಟೋರಿಕ್ಷಾಗಳ ಭೌತಿಕ ಸಾಮರ್ಥ್ಯ (ಫಿಟ್‌ನೆಸ್‌) ಎಮಿಷನ್‌ ಮೊದಲಾದ ಮಾನದಂಡಗಳನ್ನು ಪರಿಶೀಲಿಸಿ ಒಂದು ಬಾರಿ ರಹದಾರಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

50 ರೂ.ಗೆ ಏರಿಸಲು ಆಟೋ ಚಾಲಕರ ಮನವಿ
2018ರ ಅಕ್ಟೋಬರ್‌ ತಿಂಗಳಲ್ಲಿ ಆಟೋಗಳ ಬಾಡಿಗೆ ದರ ನಿಗದಿಪಡಿಸಲಾಗಿತ್ತು. ಪೆಟ್ರೋಲ್‌ ಮತ್ತು ಎಲ್‌ಪಿಜಿ ದರಗಳಲ್ಲಿ ಏರಿಕೆ ಆಗಿರುವುದರಿಂದ ಕನಿಷ್ಟ ಬಾಡಿಗೆ ದರವನ್ನು ಪರಿಷ್ಕರಿಸಲು ಕೋರಿ ಆಟೋರಿಕ್ಷಾ ಚಾಲಕರ ಸಂಘದಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗಳನ್ನು ಪರಿಶೀಲಿಸಿದ ಪ್ರಾಧಿಕಾರವು ವಿಸ್ತೃತವಾಗಿ ಚರ್ಚಿಸಿ ದರ ಪರಿಷ್ಕರಣೆಯ ನಿರ್ಧಾರ ಪ್ರಕಟಿಸಿದೆ.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಆಟೋರಿಕ್ಷಾ ಚಾಲಕರ ಸಂಘದ ಎನ್‌.ಎನ್‌. ಇನಾಮದಾರ, ದೇವಾನಂದ ಜಗಾಪುರ, ಬಿ.ಎ.ಮುಧೋಳ ಸೇರಿದಂತೆ ಹಲವರು, ಕಳೆದ ಮೂರ್‍ನಾಲ್ಕು ವರ್ಷಗಳ ಅವಧಿಯಲ್ಲಿ ಪೆಟ್ರೋಲ್‌ ಹಾಗೂ ಎಲ್‌ಪಿಜಿ ದರಗಳಲ್ಲಿ ಏರಿಕೆಯಾಗಿದೆ. ಕನಿಷ್ಟ ಬಾಡಿಗೆ ದರವನ್ನು ಪ್ರತಿ 2 ಕಿಲೋ ಮೀಟರ್‌ಗೆ 50 ರೂ.ಗಳಂತೆ ನಿಗದಿಗೊಳಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next