Advertisement

ಯೋಜನೆ ಪರಿಣಾಮಕಾರಿ ಜಾರಿ

03:51 PM Mar 15, 2020 | Suhan S |

ಲಕ್ಷ್ಮೇಶ್ವರ: ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಅವರಿಗಾಗುವ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೈತರ ಫಸಲನ್ನು ಬೆಂಬಲ ಬೆಲೆಯಡಿ ಖರೀದಿಸುವ ಮೂಲಕ ರೈತರ ಹಿತ ಕಾಪಾಡುವ ಕಾರ್ಯ ಮಾಡಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಶನಿವಾರ ಸಮೀಪದ ಯಳವತ್ತಿ ಗ್ರಾಮದಲ್ಲಿ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಎಲ್ಲ ಹಂತದಲ್ಲೂ ನೆರವಿಗೆ ನಿಲ್ಲುವ ರೈತ ನಾಯಕರಾಗಿದ್ದಾರೆ. ಪ್ರಸಕ್ತ ವರ್ಷ ಸಕಾಲಿಕವಾಗಿ ಹತ್ತಿ, ಶೇಂಗಾ, ಕಡಲೆ, ತೊಗರಿ ಸೇರಿ ಬಹುತೇಕ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಲಾಗಿದೆ. ಮುಖ್ಯವಾಗಿ ಹತ್ತಿ ಬೆಳೆಗಾರರಿಗೆ ಬೆಂಬಲ ಬೆಲೆ ಸಾಕಷ್ಟು ಅನುಕೂಲವಾಗಿದೆ ಎಂಬುದನ್ನೂ ರೈತರೇ ಅತ್ಯಂತ ಸಂತೋಷದಿಂದ ಹೇಳುತ್ತಿದ್ದಾರೆ. ರೈತರಿಗಾಗಿ ಇರುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸು ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಂಘದ ಕಾರ್ಯದರ್ಶಿ ಚಂದ್ರಶೇಖರ ಸೊರಟೂರ ಮಾತನಾಡಿ, ರೈತರು 1 ಎಕರೆಗೆ 3 ಕ್ವಿಂಟಾಲ್‌ ಅಥವಾ 1 ಖಾತೆಗೆ ಗರಿಷ್ಟ 10 ಕ್ವಿಂಟಾಲ್‌ ಕಡಲೆ ತಂದು ಮಾರಾಟ ಮಾಡಬಹುದು. ಪ್ರತಿ ಕ್ವಿಂಟಾಲ್‌ಗೆ 4875 ರೂ. ದರದಲ್ಲಿ ಖರೀದಿ ಮಾಡಲಾಗುವುದು. ರೈತರು ಆಧಾರ್‌ ಕಾರ್ಡ್‌, ಎಫ್‌ಐಡಿ ನೋಂದಾಯಿತ ಉತಾರ, ಬ್ಯಾಂಕ್‌ ಪಾಸ್‌ಬುಕ್‌ ತರಬೇಕು ಎಂದರು.

ಈ ವೇಳೆ ತಾಪಂ ಅಧ್ಯಕ್ಷೆ ಹುಸೇನಬಿ ಅತ್ತಿಗೇರಿ, ಗ್ರಾಪಂ ಅಧ್ಯಕ್ಷೆ ಜೈತುನಬಿ ಗಮ್ಮಣ್ಣವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹಾದೇವಪ್ಪ ಒಣರೊಟ್ಟಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಕಪಲಟ್ಟಿ, ಗ್ರಾಪಂ ಉಪಾಧ್ಯಕ್ಷ ಕುಬೇರಪ್ಪ ಶಿಗ್ಲಿ, ಎಪಿಎಂಸಿ ಸದಸ್ಯ ವೆಂಕರೆಡ್ಡಿ ಹೊಂಬಳ, ಬಸಪ್ಪ ಪಾಪಲಟ್ಟಿ, ಫಕ್ಕೀರಪ್ಪ ಹೂಗಾರ, ಜಿ.ಬಿ. ಹೊಂಬಳ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next