Advertisement
ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಬುಧವಾರ ಸುಳ್ಯ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಕನ್ನಡ ನೆಲ, ಜಲವನ್ನು ಬಳಸಿ ಕನ್ನಡ ತಾಯಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಯುವಜನತೆಯಲ್ಲಿ ಕನ್ನಡಾಭಿಮಾನದ ಜಾಗೃತಿ ಮೂಡಿಸಬೇಕು ಎಂದರು. ನಗರ ಪಂಚಾಯತ್ ಅದ್ಯಕ್ಷೆ ಶೀಲಾವತಿ ಗೌಡ, ಸರಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು ಎಂದರು.
Related Articles
ಮತ್ತು ಮಾತೃಭಾಷೆಯಾಗಿರುವ ಕನ್ನಡವನ್ನೇ ಹೆಚ್ಚು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ
ನೀಡಬೇಕು ಎಂದರು.
Advertisement
ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದಮುಂಡೋಡಿ, ತಾಲೂಕು ಕಸಾಪ ಅದ್ಯಕ್ಷ ಹರಪ್ರಸಾದ್ ತುದಿಯಡ್ಕ, ನ.ಪಂ. ಸದಸ್ಯ ಗೋಕುಲ್‌ದಾಸ್, ನಾಮನಿರ್ದೇಶಿತ ಸದಸ್ಯ ನಝಿರ್, ಕೆಪೆಕ್ ನಿರ್ದೆಶಕ ಪಿ.ಎ. ಮಹಮ್ಮದ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಗೃಹರಕ್ಷಕ ದಳದ ಕಮಾಡೆಂಟ್ ಜಯಂತ್ ಶೆಟ್ಟಿ, ನಿವೃತ್ತ ಕಮಾಡೆಂಟ್ ರಾಮಕೃಷ್ಣ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ಸ್ವಾಗತಿಸಿ, ಶಿಕ್ಷಣ ಸಮನ್ವಯಾಧಿಕಾರಿ ವೀಣಾ ಎಂ.ಟಿ. ವಂದಿಸಿದರು. ಉಷಾ
ಹಾಗೂ ಜಲಜಾಕ್ಷಿ ನಿರೂಪಿಸಿದರು. ಗೌರವವಂದನೆ
ತಹಶೀಲ್ದಾರ್ ಎಂ.ಎಂ. ಗಣೇಶ್ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ರಾಜ್ಯೋತ್ಸವದ ಸಂದೇಶ ವಾಚಿಸಿದರು. ಸುಳ್ಯ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಅವರು ಪರೇಡ್ ನಿರ್ವಹಿಸಿದರು. ಆಕರ್ಷಕ ಪಥಸಂಚಲನದಲ್ಲಿ ಪೋಲಿಸ್ ಸಶಸ್ತ್ರ ಪಡೆ, ಗೃಹರಕ್ಷಕದಳ ಸ್ಕೌಟ್ಸ್ -ಗೈಡ್ಸ್ ಸೇವಾದಳ, ಬುಲ್‌ಬುಲ್ ಹಾಗೂ ಎನ್
ಸಿಸಿ ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. ಸಮ್ಮಾನ, ಬಹುಮಾನ
ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾಪಟುವಾಗಿರುವ ಮತ್ತು ಕ್ರೀಡಾದರ್ಶಿನಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಕೆ.ಎಂ. ಅವರನ್ನು ಸಮ್ಮಾನಿಸಲಾಯಿತು. ಕನ್ನಡ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಯಶ್ವಿತಾ, ಸುಷ್ಮಾ ಎಸ್. ಹಾಗೂ ಹಸಿಬಾ ಅವರಿಗೆ ಪ್ರಶಸ್ತಿ ಫಲಕ ಮತ್ತು ರಾಜೋತ್ಸವದ ಪ್ರಯುಕ್ತ ಕೆವಿಜಿ ಶಿಕ್ಷಣ ಸಂಸ್ಥೆ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.