Advertisement

ಶಿಕ್ಷಕರಿಗೆ ವಿದ್ಯಾರ್ಥಿಗಳೇ ಅನ್ನದಾತರು

05:46 PM Feb 21, 2021 | Team Udayavani |

ಕನಕಗಿರಿ: ಶಿಕ್ಷಕರಿಗೆ ವಿದ್ಯಾರ್ಥಿಗಳೇ ಅನ್ನದಾತರು ಎಂಬುದನ್ನು ಯಾವ ಶಿಕ್ಷಕರು ಮರೆಯಬಾರದು ಎಂದು ಗಂಗಾವತಿ ಕ್ಷೇತ್ರ ಸಮನ್ವಯಾಧಿ ಕಾರಿ ವಿ.ವಿ. ಗೊಂಡಬಾಳ ಹೇಳಿದರು.

Advertisement

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಇಲ್ಲಿನ ಶಾಸಕರಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಅಭಿನಂದನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರೇ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಸ್ವಂತಮಕ್ಕಳಂತೆ ಕಂಡು ಪ್ರೀತಿಸುವ ಗುಣ ಬೆಳೆಸಿಕೊಳ್ಳಿ ಹಾಗೂ ವೃತ್ತಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬರ ಕೆಲಸವಾಗಬೇಕು. ಅಧಿಕಾರಿಗಳನ್ನುಮೆಚ್ಚಿಸುವ ಬದಲಾಗಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಬೇಕೆಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ರಾಜ್ಯಸಂಘಟನಾ ಕಾರ್ಯದರ್ಶಿ ಎಂ. ನಾಗನಗೌಡ,ರಾಜ್ಯ ಸಹ ಕಾರ್ಯದರ್ಶಿ ಸುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸನಗೌಡ. ತಾಲೂಕುಘಟಕದ ಅಧ್ಯಕ್ಷೆ ಶಂಶಾದಬೇಗಂ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಮಾತನಾಡಿದರು.

ಸನ್ಮಾನ: ತಾಲೂಕಿನ ಎಂಟು ಜನ ಶಿಕ್ಷಕಿಯರಿಗೆ ಸಾವಿತ್ರಿ ಬಾಫುಲೆ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದತಾಲೂಕಿನ ಶಿಕ್ಷಕರನ್ನು ಸಂಘದ ವತಿಯಿಂದಸನ್ಮಾನಿಸಲಾಯಿತು. ಕೋಶಾಧ್ಯಕ್ಷಚೇತನಕುಮಾರ ಅವರು ಮನವಿ ಸಲ್ಲಿಸಿದರು.ಇದೇ ಸಮಯದಲ್ಲಿ ಪ್ರಸಕ್ತ ಸಾಲಿನ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು.

Advertisement

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಣ್ಣ ಕನಕಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ,ಸಂಘಟನಾ ಕಾರ್ಯದರ್ಶಿಗಳಾದ ಮಂಜುಳಾಶ್ಯಾವಿ, ಪರಶುರಾಮ ಗಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣೆಗೌಡ ಪಾಟೀಲ, ರಾಜ್ಯ ಪರಿಷತ್‌ ಸದಸ್ಯ ಡಿ.ಜಿ. ಸಂಗಮ್ಮನವರ್‌, ನಿರ್ದೇಶಕ ಬಾಳಪ್ಪ ಕಾಳೆ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಪ್ರಾಣೇಶ ಪೂಜಾರ, ಲಕ್ಷ್ಮಣ ಪೂಜಾರ, ಚಾಂದಪಾಷ, ಎಸ್‌.ವಿ. ಧರಣಾ, ಗೌರವಾಧ್ಯಕ್ಷ ದೇವೇಂದ್ರಗೌಡ, ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರ ಮಾಕಣ್ಣನವರ್‌, ರುದ್ರಗೌಡ, ನಿರ್ದೇಶಕರಾದಮಂಜುನಾಥ, ತಿಪ್ಪೇಶ, ಮುಖ್ಯಶಿಕ್ಷಕ

ಮಲ್ಲಿಕಾರ್ಜುನ ಕುಷ್ಟಗಿ, ಪದಾಧಿಕಾರಿಗಳಾದ ದ್ರಾಕ್ಷಾಯಿಣಿ ಶೇಖರಯ್ಯ, ಶೇಖರ ನಾಯಕ್‌, ಪ್ರಶಾಂತ ಬಂಕಾಪುರ, ಪವಿತ್ರ ಮಂಜುನಾಥ, ವಿನೋದ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next