ಕುಳಾಯಿ: ವಿದ್ಯಾರ್ಥಿಗಳಿಗೆ ನೀಡುವ ಯಾವುದೇ ಶೈಕ್ಷಣಿಕ ಪ್ರೋತ್ಸಾಹ ಅವರ ಮುಂದಿನ ಜೀವನಕ್ಕೆ ದಾರಿ ದೀಪವಾಗುತದೆ. ಈ ನಿಟ್ಟಿನಲ್ಲಿ ಸಂಘ – ಸಂಸ್ಥೆಗಳು, ಹೆತ್ತವರ ಪಾತ್ರ ಬಹಳ ಮಹತ್ವದ್ದು ಎಂದು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್‌ನ ಚೇಯರ್‌ಮನ್ ಪ್ರೇಮಾನಂದ ಕುಲಾಲ್ ನುಡಿದರು.
ಕುಳಾಯಿ ಶ್ರೀ ವೆಂಕಟರಮಣ ಶಾಲೆಯಲ್ಲಿ ಕುಲಾಲ ಸಂಘ, ಕುಲಾಲ ಮಹಿಳಾ ಮಂಡಲ ಮತ್ತು ಕುಲಾಲ ರಜತ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಸುರೇಶ್ ಕುಲಾಲ್, ಬಂಟ್ವಾಳ ತಾಲೂಕು ಸೇವಾ ದಳದ ಅಧ್ಯಕ್ಷ ಶೇಷಪ್ಪ ಮಾಸ್ಟರ್ ಬಂಟ್ವಾಳ ಶುಭ ಹಾರೈಸಿದರು.
ಪಿಯುಸಿ, ಎಸೆಸೆಲ್ಸಿಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಜತ ಸೇವಾ ಟ್ರಸ್ಟ್ ನಿಂದ ದತ್ತು ಪಡೆದ ವಿದ್ಯಾರ್ಥಿಗಳಿಗೆ ಅವರ ಸಂಪೂರ್ಣ ವೆಚ್ಚ, ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಲಾಯಿತು. 150 ಅ ಧಿಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚಲಾಯಿತು. ಕರಾಟೆಯಲ್ಲಿ 10ರ ವಯೋಮನ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ವಿಜೇತ ಮಾಸ್ಟರ್ ಜೀತನ್ ಬಂಗೇರ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ರಾದ ಗಂಗಾಧರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಮಹಿಳಾ ಮಂಡಳಿ ಅಧ್ಯೆಕ್ಷೆ ಮೀರಾ ಮೋಹನ್, ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಐ. ಮೂಲ್ಯ, ವಾಮನ ಚಿತ್ರಾಪುರ, ರವೀಂದ್ರ ಜನನಿ ಹೊಸಬೆಟ್ಟು , ಕುಲಾಲ ಸಂಘದ ನಿಕಟ ಪೂರ್ವ ಅಧ್ಯಕ್ಷ ಕುಮಾರ್ ಕುಲಾಲ್, ಜನಾರ್ದನ್ ಸಾಲ್ಯಾನ್, ಹರೀಶ್ ಕುಲಾಲ್, ಜಯೇಶ ಗೋವಿಂದ್, ಗಣೇಶ್ ಕುಲಾಲ್, ಶ್ರೀನಾಥ್ ವಂಶಿ, ಯೋಗೀಶ್ ಡಿ ಕುಲಾಲ್, ಗಣೇಶ್ ನಿವೃತ್ತ ಎನ್‌ಎಂಪಿಟಿ, ದಿನೇಶ್ ಕುಲಾಲ್, ಗಣೇಶ್ ಅಂಚನ್ ರಮೇಶ್ ಆರ್.ಕೆ. ಕುಲಾಲ ಮಹಿಳಾ ಮಂಡಳಿಯ ಜಯಂತಿ ಕೆ. ರಾಜೀವಿ ಹರೀಶ್, ಭಾರತಿ ಗಂಗಾಧರ್, ಶ್ವೇತಾ ಪುರುಷೊತ್ತಮ್, ತಾರಾ ಚಂದ್ರಹಾಸ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಗಂಗಾಧರ್ ಬಂಜನ್ ಸ್ವಾಗತಿಸಿದರು. ದಿವ್ಯಾ ಕುಲಾಲ್ ನಿರೂಪಿಸಿದರು. ನಾಗೇಶ್ ಕುಲಾಲ್ ವಂದಿಸಿದರು.