Advertisement

ಪುರಸಭೆ ಕಣದಲ್ಲಿ ವಿದ್ಯಾವಂತ ಅಭ್ಯರ್ಥಿಗಳು

11:32 AM Aug 25, 2018 | Team Udayavani |

ಎಚ್‌.ಡಿ.ಕೋಟೆ: ಈ ತಿಂಗಳ ಅಂತ್ಯದಲ್ಲಿ ನಡೆಯುವ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದವಿಧರ ವಿದ್ಯಾವಂತ ಅಭ್ಯರ್ಥಿಗಳು ವಿವಿಧ ಪಕ್ಷಗಳ ಅಭ್ಯರ್ಥಿಗಳಾಗಿ ಸ್ಪರ್ಧೆ ಬಯಸಿ ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ವಿಶೇಷವಾಗಿದ್ದು, ಚುನಾವಣ ಕಣ ತೀವ್ರ ಕುತೂಹಲ ಕೇರಳಿಸಿದೆ.

Advertisement

ಪಟ್ಟಣದ ಎಚ್‌.ಡಿ.ಕೋಟೆ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಿಗೆ ಆ.31ರಂದು ನಡೆಯಲಿರುವ ಚುನಾವಣೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ವಿವಿಧ ಪಕ್ಷಗಳಿಂದ 91 ಅಭ್ಯರ್ಥಿಗಳು ಕಣದಲ್ಲಿದ್ದು, ಇಂಜಿನಿಯಂರಿಗ್‌, ಸ್ನಾತಕೋತ್ತರ ಪದವಿ ಸೇರಿ ಪದವಿ ತೆರ್ಗಡೆಯಾಗಿರುವ 13 ಜನ ಅಭ್ಯರ್ಥಿಗಳು ಸ್ಪರ್ಧಿಸಿದರೆ, 10 ಜನ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ,

ಇನ್ನು 21 ಜನ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗಮಾಡಿದರೇ, 36ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆದವರಾಗಿದ್ದಾರೆ. ಇನ್ನು ಇವರುಗಳ ಜೊತೆಗೆ ಮ್ಯಾಕನಿಕಲ್‌ ಇಂಜಿನಿಯರಿಗ್‌, ಸೇರಿದಂತೆ ಡಿಪ್ಲೋಮೊ, ಜೆಒಸಿ ತಾಂತ್ರಿಕ ವಿಭಾಗದಲ್ಲಿ ಶಿಕ್ಷಣ ಪಡೆದಿರುವ ಕೆಲ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ.

ಪದವಿ ಪಡೆದ ಅಭ್ಯರ್ಥಿಗಳು: 5ನೇ ವಾರ್ಡಿನ ಗಾಯಕ ಸಿದ್ದರಾಜು(ಬಿಎ,ಬಿಇಡಿ), ಅದೇ ವಾರ್ಡಿನ ಅಭ್ಯರ್ಥಿ ನಂಜಪ್ಪ(ಬಿಎ,ಡಿಇಡಿ) 7ನೇ ವಾರ್ಡಿನ ಅಭ್ಯರ್ಥಿ ತಿಮ್ಮನಾಯ್ಕ(ಬಿಎ), ಕೋಟೆ ಬೀರಪ್ಪ(ಬಿಎ), 9ನೇ ವಾರ್ಡಿನ ಅಭ್ಯರ್ಥಿ ಪ್ರೇಮಕುಮಾರಿ(ಬಿಇ),10ನೇ ವಾರ್ಡಿನ ಅಭ್ಯರ್ಥಿ ಜಿ.ಲೋಕೆಶ್‌(ಬಿಬಿಎಂ), ಅದೇ ವಾರ್ಡಿನ ಅಭ್ಯರ್ಥಿ ಲಲಿತ್‌ಕುಮಾರ್‌(ಬಿಎಸ್ಸಿ). 

11ನೇ ವಾರ್ಡಿನ ವೆಂಕಟೇಶ್‌(ಎಂ.ಎ), 13 ವಾರ್ಡಿನ  ರಾಕೇಶ್‌ ಶರ್ಮ(ಬಿಎ), ಮಧುಕುಮಾರ್‌(ಬಿಎ), 15ನೇ ವಾರ್ಡಿನ ಅಭ್ಯರ್ಥಿ ಹೆಚ್‌.ಎನ್‌.ಕುಸುಮ(ಬಿಎಸ್ಸಿ), 16ನೇವಾರ್ಡಿನ  ನಜ್ಮಾಬಾನು (ಎಂಎ,ಎಂಪಿಲ್‌), ಜಾ,ದಳದ ಕೆ.ದರ್ಶಿನಿ(ಬಿಎಸ್ಸಿ), ಸುಮಾ ಸಂತೋಷ್‌(ಬಿಎ), 19ನೇ ವಾರ್ಡಿನ  ಡಿ.ಸುರೇಂದ್ರ(ಎಂಎ) ವಿವಿಧ ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳಾಗಿದ್ದಾರೆ.

Advertisement

ಇನ್ನು ತಾಂತ್ರಿಕ ವಿಭಾಗದಿಂದ 12ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಅಭಿಜಿತ್‌(ಮ್ಯಾಕನಿಕಲ್‌ ಇಂಜಿನಿಯರಿಂಗ್‌),18ನೇ ವಾರ್ಡಿನ ವೈ.ಬಿ.ಲೋಹಿತ್‌ಕುಮಾರ್‌(ಡಿಪೊÉಮೊ),ಶಿಕ್ಷಣ ಪಡೆದವರಾಗಿದ್ದಾರೆ.

ಪುರಸಭೆ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತೇ ಕಣಕ್ಕೆ..!!: ಈ ಬಾರಿಯ ಚುನಾವಣೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟಬಸವನಾಯ್ಕ, ಮಾಜಿ ಪ.ಪಂ ಅಧ್ಯಕ್ಷ ರಫೀಕ್‌, ರುಕ್ಮಿಣಿ ಜಯಶೀಲ, ಸೇರಿದಂತೆ ಮಾಜಿ ಪುರಸಭೆ ಮತ್ತು ಪ.ಪಂ ಸದಸ್ಯರಾದ 1ನೇ ವಾರ್ಡಿನಿಂದ ತಾಜ್‌, 2ನೇ ವಾರ್ಡಿನಿಂದ ಸರೋಜಮ್ಮ, 4ನೇ ವಾರ್ಡಿನಿಂದ ಹೆಚ್‌.ಸಿ.ನರಸಿಂಹಮೂರ್ತಿ, 5ನೇ ವಾರ್ಡಿನಿಂದ ಎಚ್‌.ಸಿ.ರವೀಂದ್ರ, 6ನೇ ದಾಕ್ಷಯಿಣಿ, 10ನೇ ವಾರ್ಡಿನಿಂದ ಮಿಲ್‌ ನಾಗರಾಜ್‌, 15ನೇ ವಾರ್ಡಿನಿಂದ ಕೆ.ಎಲ್‌.ಸುಹಾಸಿನಿ, 16ನೇ ವಾರ್ಡಿನಿಂದ ಸುಮಾ ಸಂತೋಷ್‌, ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ಕೂಡ ತೀವ್ರ ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next