Advertisement

ನೆಮ್ಮದಿ ಬದುಕಿಗೆ ಪ್ರೇರಣೆಯಾಗಲಿ ಶಿಕ್ಷಣ

04:37 PM Aug 10, 2018 | |

ಧಾರವಾಡ: ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಶಿಕ್ಷಣವು ಹಣ ಗಳಿಸುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡಿದ್ದು, ವಿದ್ಯಾರ್ಥಿ ಸಮುದಾಯದಲ್ಲಿ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಕಾರಣವಾಗಿದೆ ಎಂದು ಅಮ್ಮಿನಬಾವಿಯ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಪಿಯು ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2018-19ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಮೌಲ್ಯಯುತವಾದ ಗುಣಗಳ ಸಂಸ್ಕಾರ ನೀಡುವ ಶಿಕ್ಷಣದ ಅಗತ್ಯವಿದ್ದು, ಅದು ವ್ಯಕ್ತಿ ಮತ್ತು ಸಮುದಾಯದ ಏಳ್ಗೆಗೆ ತಳಹದಿಯಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಬಲ್ಲದು ಎಂದರು. ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ನ. ವಜ್ರಕುಮಾರ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರನ್ನು ಹಾಗೂ ಪರಸ್ಪರರನ್ನು ಗೌರವಿಸುವುದರಲ್ಲಿ ಇರುವ ಆನಂದವನ್ನು ಗುರುತಿಸಿಕೊಳ್ಳಬೇಕು. ಇದು ಅವರಿಗೆ ಪ್ರತಿಯಾಗಿ ಗೌರವವನ್ನು ಮಾತ್ರವಲ್ಲ ಸಾಮಾಜಿಕ ಸಾಮರಸ್ಯಕ್ಕೂ ಕಾರಣವಾಗುತ್ತದೆ ಎಂದರು.

ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿ ಡಾ| ಅಜಿತ ಪ್ರಸಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯರಾದ ಡಾ| ವೈ.ಎಸ್‌. ರಾಯಬಾಗಿ ಪ್ರಾಸ್ತಾವಿಕ ಮಾತನಾಡಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉಪಾಧ್ಯಕ್ಷ ಪ್ರೊ|ಬಸವರಾಜ ವಕ್ಕುಂದ ಹಾಗೂ ಕ್ರೀಡಾ ನಿರ್ದೇಶಕ ಪವನ ಗೊರವರ, ದರ್ಶನ ಸಿದ್ದಪ್ಪಗೌಡರ, ವೈಷ್ಣವಿ ದಲಾಲ ಇದ್ದರು. ಶಶಿಕಲಾ ಬಗಲಿ ಹಾಗೂ ನಿಶಾ ದೇಶಪಾಂಡೆ ನಿರೂಪಿಸಿದರು. ದರ್ಶನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next