Advertisement

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

03:45 PM Apr 28, 2024 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರೋಬ್ಬರಿ 2,326 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಶೇ.76.98ರಷ್ಟು ಮತದಾನ ದಾಖಲಾಗಿದ್ದು, ಕಳೆದ ಸಲ ಶೇ.76.78ರಷ್ಟು ಮತದಾನವಾಗಿತ್ತು. ಈ ಬಾರಿ ಕಳೆದ ಬಾರಿಗಿಂತ ಸ್ವಲ್ಪ ಏರಿಕೆ ಕಂಡಿದೆ.ವಿಶೇಷ ಅಂದರೆ ಈ ಬಾರಿ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ದಾಖಲೆ ಬರೆದಿದ್ದಾರೆ.ಇನ್ನೂ ಕ್ಷೇತ್ರದಲ್ಲಿ ಮತದ ಲೆಕ್ಕಾಚಾರ ಜೋರಾಗಿದ್ದು, ಎಲ್ಲರ ಚಿತ್ತ ಜೂನ್‌ 4ರ ಫ‌ಲಿತಾಂಶದತ್ತ ಹರಿದಿದೆ.

Advertisement

ಹೌದು, ಇಡೀ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 9,83,775 ಮಂದಿ ಪುರುಷರು, 9,97,306 ಮಂದಿ ಮಹಿಳೆಯರು, ಇತರೇ 266 ಮಂದಿ ಸೇರಿ ಒಟ್ಟು 19,81,347 ಮಂದಿ ಮತದಾರರು ಇದ್ದರು. ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದು, ಪುರುಷರು ಕಡಿಮೆ ಪ್ರಮಾಣದಲ್ಲಿದ್ದರೂ ಚುನಾವಣೆಯಲ್ಲಿ ಮಾತ್ರ ಈ ಬಾರಿ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿ ಗಮನ ಸೆಳೆದಿದ್ದಾರೆ. ಒಟ್ಟು 9,83,775 ಮಂದಿ ಪೈಕಿ ಚುನಾವಣೆಯಲ್ಲಿ ಪುರುಷರು 7,66,151 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರೆ 9,97,306 ಮಂದಿ ಇರುವ ಮಹಿಳಾ ಮತದಾರರು ಚುನಾವಣೆಯಲ್ಲಿ 7,58,952 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿ ಅತಿ ಕಡಿಮೆ ಮತದಾನ ದಾಖಲಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇನ್ನೂ ಇತರೇ 266 ಮಂದಿ ಪೈಕಿ 96 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಬಾಗೇಪಲ್ಲಿ ಕ್ಷೇತ್ರ: ಬಾಗೇಪಲ್ಲಿ ಕ್ಷೇತ್ರದಲ್ಲಿ 1,00,200ಪುರುಷರು, 1,02,603 ಮಹಿಳೆಯರು ಇತರೇ 27 ಮಂದಿ ಸೇರಿ ಒಟ್ಟು, 2,02,830 ಮಂದಿ ಇದ್ದು, ಆ ಪೈಕಿ ಚುನಾವಣೆಯಲ್ಲಿ ಪುರುಷರು 81,363, ಮಹಿಳೆಯರು 80.280 ಮಂದಿ ಸೇರಿ ಒಟ್ಟು 1,61,648 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿ ಶೇ.79.70 ರಷ್ಟು ಮತದಾನ ದಾಖಲು ಮಾಡಿದ್ದಾರೆ. ಇತರೇ 27 ಮಂದಿ ಪೈಕಿ ಕೇವಲ 5 ಮಂದಿ ಮತದಾನ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,03,316 ಪುರುಷರು,1,07,236 ಮಹಿಳೆಯರು, ಇಯರೇ 15 ಸೇರಿ ಒಟ್ಟು 2,10,567 ಮಂದಿ ಮತದಾರರ ಪೈಕಿ ಚುನಾವಣೆಯಲ್ಲಿ 89,920 ಮಂದಿ ಪುರುಷರು, 89,723 ಮಂದಿ ಮಹಿಳೆಯರು ಹಾಗೂ ಇತರೇ 4 ಮಂದಿ ಸೇರಿ ಒಟ್ಟು 1,79.647 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿ ಶೇ.85.32 ರಷ್ಟು ಮತದಾನ ಮಾಡಿದ್ದಾರೆ.

ಗೌರಿಬಿದನೂರು ಕ್ಷೇತ್ರ: ಗೌರಿಬಿದನೂರು ಕ್ಷೇತ್ರದಲ್ಲಿ 1,03,832 ಪುರುಷರು ಹಾಗೂ 1,07050 ಮಹಿಳೆಯರು ಹಾಗೂ ಇತರೇ 3 ಸೇರಿ ಒಟ್ಟು 2,10,885 ಮತದಾರರ ಪೈಕಿ ಚುನಾವಣೆಯಲ್ಲಿ 83,392 ಪುರುಷರು ಹಾಗೂ 83,566 ಮಹಿಳೆತರು ಹಾಗೂ ಇತರೇ 2 ಸೇರಿ ಒಟ್ಟು ಚುನಾವಣೆಯಲ್ಲಿ 1,66,960 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿ ಶೇ |79.17 ರಷ್ಟು ಮತದಾನ ದಾಖಲಾಗಿದೆ.

Advertisement

ದೇವನಹಳ್ಳಿ ಕ್ಷೇತ್ರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ದೇವನಹಳ್ಳಿಯಲ್ಲಿ ಒಟ್ಟು 1,07,245 ಮಂದಿ ಪುರುಷರು,1,09,443ಮಹಿಳೆಯರು, ಇತರೇ 16 ಸೇರಿ ಒಟ್ಟು 2,16,704 ಮಂದಿ ಪೈಕಿ ಚುನಾವಣೆಯಲ್ಲಿ 90,940 ಪುರುಷರು ಹಾಗೂ 88,879 ಮಹಿಳೆಯರು, ಇತರೇ 4 ಮಂದಿ ಸೇರಿ ಒಟ್ಟು 1,79.823 ಮಂದಿ ತಮ್ಮ ಹಕ್ಕು ಚಲಾವಣೆ ಮೂಲಕ ಒಟ್ಟಾರೆ ಶೇ.82.98ರಷ್ಟು ಮತದಾನ ದಾಖಲಾಗಿದೆ.

ದೊಡ್ಡಬಳ್ಳಾಪುರ ಕ್ಷೇತ್ರ: ದೊಡ್ಡಬಳ್ಳಾಪುರ ವಿಧಾಣಸಭಾ ಕ್ಷೇತ್ರದಲ್ಲಿ 1,08,921 ಮಂದಿ ಪುರು ಷರು, 1,11,346 ಮಹಿಳೆ ಯರು, ಇತರೇ 1ಸೇರಿ ಒಟ್ಟು 2.20,268 ಮಂದಿ ಪೈಕಿ ಚುನಾವಣೆಯಲ್ಲಿ 88,918 ಮಂದಿ ಪುರುಷರು, 88,106 ಮಂದಿ ಮಹಿಳೆಯರು ಇತರೇ 1 ಸೇರಿ ಒಟ್ಟು 1,77,025 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿ ಶೇ.80.37 ರಷ್ಟು ಮತದಾನ ದಾಖಲಾಗಿದೆ.

ನೆಲಮಂಗಲ ಕ್ಷೇತ್ರ: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 1,09,256 ಪುರುಷರು, 1,12,958 ಮಂದಿ ಮಹಿಳೆಯರು ಹಾಗೂ ಇತರೇ 105 ಮಂದಿ ಸೇರಿ ಒಟ್ಟು 2,22,319 ಮಂದಿ ಮತದಾರರು ಇದ್ದು ಆ ಪೈಕಿ ಲೋಕಸಭಾ ಚುನಾವಣೆಯಲ್ಲಿ 86,716 ಮಂದಿ ಪುರುಷರು, 86,907 ಮಂದಿ ಮಹಿಳೆಯರು, ಇತರೇ 42 ಮಂದಿ ಸೇರಿ ಒಟ್ಟು 1,73,665 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಯಲಹಂಕ ಕ್ಷೇತ್ರದ ವಿವರ: ಬೆಂಗಳೂರು ನಗರಕ್ಕೆ ಸೇರುವ ಹೆಚ್ಚು ಮತದಾರರನ್ನು ಹೊಂದಿರುವ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2,32,343 ಮಂದಿ ಪುರುಷರು, 2,26,196 ಮಹಿಳೆಯರು ಹಾಗು 78 ಇತರೇ ಮತದಾರರು ಸೇರಿ ಒಟ್ಟು 4,58,617 ಮಂದಿ ಮತದಾರರು ಇದ್ದು ಆ ಪೈಕಿ 1,41,005 ಪುರುಷರು, 1,38,652 ಮಂದಿ ಮಹಿಳೆಯರು ಹಾಗೂ ಇತರೇ 25 ಮಂದಿ ಸೇರಿ ಒಟ್ಟು ಚುನಾವಣೆಯಲ್ಲಿ 2,79.682 ಮಂದಿ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಇಡೀ ಲೋಕಸಬಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ಎಂಬ ಅಪಖ್ಯಾತಿಗೆ ಕ್ಷೇತ್ರ ಒಳಗಾಗಿದೆ.

ಹೊಸಕೋಟೆ ಕ್ಷೇತ್ರದಲ್ಲಿ ದಾಖಲೆ ಮತದಾನ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,18,662 ಮಂದಿ ಪುರುಷರು, 1,20,474 ಮಹಿಳೆತರು, ಇತರೇ 21 ಮಂದಿ ಸೇರಿ ಒಟ್ಟು 2,39,157 ಮಂದಿ ಮತದಾರರು ಇದ್ದು, ಆ ಪೈಕಿ ಚುನಾವಣೆಯಲ್ಲಿ 1 ,03,897 ಮಂದಿ ಪುರುಷರು, 1,02,839 ಮಂದಿ ಮಹಿಳೆಯರು ಹಾಗೂ ಇತರೇ 13 ಮಂದಿ ಸೇರಿ ಒಟ್ಟು ಚುನಾವಣೆಯಲ್ಲಿ 2,06,749 ಮಂದಿ ಮತದಾನ ಮಾಡುವ ಮೂಲಕ ಕ್ಷೇತ್ರದಲ್ಲಿ 86.45 ರಷ್ಟು ದಾಖಲೆಯ ಮತದಾನವಾಗಿದೆ.

ಚಿಂತಾಮಣಿ ಶೇ.77.54, ಶಿಡ್ಲಘಟ್ಟ ಕ್ಷೇತ್ರದಲ್ಲಿ ಶೇ.81.13ರಷ್ಟು ಮತದಾನ:

ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ವ್ಯಾಪ್ತಿಗೆ ಸೇರುವ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,12,221 ಮಂದಿ ಪುರುಷರು, 1,16,039 ಮಹಿಳಾ ಮತದಾರರು ಹಾಗೂ ಇತರೇ 39 ಮಂದಿ ಸೇರಿ ಒಟ್ಟು 2,28,299 ಮಂದಿ ಮತದಾರರು ಇದ್ದು, ಆ ಪೈಕಿ ಚುನಾವಣೆಯಲ್ಲಿ 88,349 ಮಂದಿ ಪುರುಷರು, 88,659 ಮಂದಿ ಮಹಿಳೆಯರು ಹಾಗೂ ಇತರೇ 13 ಮಂದಿ ಸೇರಿ ಒಟ್ಟು 1,17,021 ಮಂದಿ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಕ್ಷೇತ್ರದಲ್ಲಿ ಶೇ.77.54 ರಷ್ಟು ಮತದಾನ ದಾಖಲುಗೊಂಡಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ 1,02,327 ಮಂದಿ ಪುರುಷರು, 1,03,453 ಮಂದಿ ಮಹಿಳೆಯರು, ಇತರೇ 9 ಮಂದಿ ಸೇರಿ ಒಟ್ಟು 2,05,789 ಮಂದಿ ಇದ್ದು ಆ ಪೈಕಿ 84,858 ಪುರುಷರು, 82,095 ಮಂದಿ ಮಹಿಳೆಯರು ಹಾಗೂ ಇತರೇ 2 ಮಂದಿ ಸೇರಿ ಒಟ್ಟು 1,66,955 ಮಂದಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಶೇ.81.13 ರಷ್ಟು ಮತದಾನ ದಾಖಲಾಗಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next