Advertisement

“ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಸಾಧನೆ ಅನುಕರಣೀಯ’

03:18 PM Apr 10, 2017 | |

ಕಡಬ : ಪುತ್ತೂರು ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉನ್ನತೀಕರಿಸಲು ಮಿಶನ್‌ 95+ ಕಾರ್ಯಕ್ರಮ ಹಮ್ಮಿಕೊಂಡು ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ  ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌. ಅವರನ್ನು  ಕಡಬದ ಪಿಜಕಳ ಸರಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತಾÂ ರೈ ಅವರು, ಶಶಿಧರ್‌ ಅವರ ಸಾಧನೆ ಎಲ್ಲ  ಅಧಿಕಾರಿಗಳಿಗೂ ಅನುಕರಣೀಯ. ತಾಲೂಕಿನಲ್ಲಿ ಶಿಕ್ಷಣಾಧಿಕಾರಿಯಾಗಿ ಅವರು ಮಾಡಿದ ಸಾಧನೆಗಳು ಚಿರಾಯುವಾಗಲಿದೆ ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಪಿಜಕಳ ಶಾಂತಪ್ಪ ಗೌಡ ಅವರು ಮಾತನಾಡಿ ಶಶಿಧರ್‌ ಅವರ ದೂರದೃಷ್ಟಿಯ ಫಲವಾಗಿ ಇಂದು ಪುತ್ತೂರಿನಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಮಿಶನ್‌ 95+ ಕಾರ್ಯಕ್ರಮದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದರು. 

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವ ಸ್ಥಾನದ ವ್ಯವಸ್ಥಾಪನ ಸಮಿತ್ಯಿ ಅಧ್ಯಕ್ಷ ಪಣೆಮಜಲು ಜನಾರ್ದನ ಗೌಡ ಅವರು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಸೃಜನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ಕ್ರಾಂತಿ ಮಾಡಿದ ಶಶಿಧರ್‌ ಅವರ ದೂರದೃಷ್ಟಿಯ ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆ ಜಾರಿಗೆ ತರುತ್ತಿರುವುದು ನಮಗೆಲ್ಲರಿಗೂ ಖುಷಿಯ ಸಂಗತಿ ಎಂದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾ ಧಿಕಾರಿ ಶಶಿಧರ್‌ ಜಿ.ಎಸ್‌. ಅವರು ನಮ್ಮ ಶಿಕ್ಷಕರು ಹಾಗೂ ತಾಲೂಕಿನ ಎಲ್ಲರ ಸಂಘಟಿತ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
 
ನಿವೃತ್ತ ಮುಖ್ಯ ಶಿಕ್ಷಕಿಯರಾದ ರುಕ್ಮಿಣಿ ಕೆ.ಬಿ. ಪಿಜಕಳ ಹಾಗೂ ವಿಮಲಾ ಕೋಡಿಂಬಾಳ ಅವರು ಅನಿಸಿಕೆ ವ್ಯಕ್ತಪಡಿಸಿದರು. 
ಗ್ರಾ.ಪಂ. ಸದಸ್ಯೆ ಸರೋಜಿನಿ ಸದಾನಂದ ಆಚಾರ್ಯ, ಕ್ಲಸ್ಟರ್‌ ಮುಖ್ಯಸ್ಥ ಕುಮಾರ್‌, ಕಡಬ ಜೇಸಿಯ ನಿಕಟಪೂರ್ವ ಅಧ್ಯಕ್ಷ ಜಯರಾಮ ಗೌಡ ಆರ್ತಿಲ, ಪಿಜಕಳ ಕುಮಾರಧಾರಾ ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ ಪೊಯೆÂತ್ತಡ್ಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ವಿಜಯಾ ಯತೀಂದ್ರ ಗೌಡ, ಉಪಾಧ್ಯಕ್ಷೆ ನಳಿನಿ ಧರ್ಮಪಾಲ ನಾೖಕ್‌, ಗೌರವ ಶಿಕ್ಷಕಿ ಕವಿತಾ ಮೊದಲಾದವರು ಉಪಸ್ಥಿತರಿದ್ದರು. 

Advertisement

ಸಮಾರಂಭದಲ್ಲಿ ಯಕ್ಷಗಾನ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಚೇತನಾ ಸಾಯಿಪ್ರಸಾದ್‌ ಸ್ವಾಗತಿಸಿ, ಅಭಿನಂದನಾ ಭಾಷಣ ಮಾಡಿದರು. ವಿದ್ಯಾರ್ಥಿನಿಯರಾದ ರಶ್ಮಿತಾ ಮತ್ತು ರಕ್ಷಿತಾ ಮತ್ತು ರಶ್ಮಿತಾ ನಿರೂಪಿಸಿದರು. ದಿವ್ಯಶ್ರೀ ಪಿ. ವಂದಿಸಿದರು. 

ಗಮನ ಸೆಳೆದ ಗುಬ್ಬಚ್ಚಿ ಸ್ಪೀಕಿಂಗ್‌
ಬಿಇಒ ಶಶಿಧರ್‌ ಅವರ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸುವ ಮಹತ್ವಾಕಾಂಕ್ಷೆಯ “ಗುಬ್ಬಚ್ಚಿ  ಸ್ಪೀಕಿಂಗ್‌’ ಯೋಜನೆಯನ್ನು ಪಿಜಕಳ ಶಾಲೆಯಲ್ಲಿ  ಅಳವಡಿಸಲಾ ಗಿದ್ದು, ಅದರಲ್ಲಿ ತರಬೇತಿ ಪಡೆದ 4ನೇ ತರಗತಿಯ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಕಾರ್ಯಕ್ರಮ ನಿರ್ವಹಣೆ ಮತ್ತು ವಂದನಾರ್ಪಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next