Advertisement

“ಶಿಕ್ಷಣ ನೀತಿ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ’ : ಪ್ರೊ|ವೈ.ಎಸ್‌.ಸಿದ್ದೇಗೌಡ

10:55 PM Feb 27, 2021 | Team Udayavani |

ಮಂಗಳಗಂಗೋತ್ರಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿ.ವಿ.ಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಮಂಗಳೂರು ವಿವಿ ಉತ್ತಮ ಕಾರ್ಯ ನಡೆಸುತ್ತಿದ್ದು, ಶಿಕ್ಷಣ ನೀತಿಯ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ ಎಂದು ತುಮಕೂರು ವಿವಿಯ ಪ್ರೊ| ವೈ.ಎಸ್‌. ಸಿದ್ದೇಗೌಡ ಸಂತಸ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಶಿಕ್ಷಣ ಮಂಡಲ್‌ ಮತ್ತು ನೀತಿ ಆಯೋಗದ ಸಹಯೋಗದೊಂದಿಗೆ ಮಂಗಳೂರು ವಿ.ವಿ.ಯಲ್ಲಿ ನೂತನ ಶಿಕ್ಷಣ ಪದ್ಧತಿಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ -ಜಾಗೃತಿ, ದೃಷ್ಟಿಕೋನ, ಸವಾಲುಗಳು ಮತ್ತು ಪ್ರತಿಕ್ರಿಯೆ ಕುರಿತು ವಿಶ್ವವಿದ್ಯಾಲಯದ ದಲ್ಲಿ ಸುಮಾರು ಒಂದು ಸಾವಿರ ಪ್ರಾಧ್ಯಾಪಕರುಗಳ ಜತೆಗೆ ನಡೆದ ವೆಬಿನಾರ್‌ ಸಂವಾದದಲ್ಲಿ ಅವರು ಮಾತನಾಡಿದರು.

ಮಂಗಳೂರು ವಿ.ವಿ.ಯ ಸಿಂಡಿಕೇಟ್‌ ಸದಸ್ಯ ಡಾ| ಕರುಣಾಕರ ಕೋಟೆಕಾರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಪಾರಂ ಪರಿಕ ಕಲಿಕೆ, ಆಧುನಿಕ ಲೋಕದ ಮುನ್ನಡೆಗೆ ಕೈಪಿಡಿ ಸಮಗ್ರ ಭಾರತದ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.

ಜಾಗತಿಕ ನಾಯಕತ್ವಕ್ಕೆ ಪೂರಕ
ಅಧ್ಯಕ್ಷತೆ ವಹಿಸಿದ ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಜಾಗತಿಕ ನಾಯಕತ್ವಕ್ಕೆ ಭಾರತ ರಾಷ್ಟ್ರಿಯ ಶಿಕ್ಷಣ ನೀತಿ ಪೂರಕವಾಗಿದೆ ಸಾಧ್ಯವಾಗಿದೆ ಎಂದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ| ಜಯಶಂಕರ್‌, ಕುಲಸಚಿವ ರಾಜು ಮೊಗವೀರ, ಸ್ವಸ್ತಿಕ್‌ ಸಂಸ್ಥೆಯ ಅಧ್ಯಕ್ಷ ಡಾ| ರಾಘವೇಂದ್ರ ಹೊಳ್ಳ, ಐಕೆಎಸಿ ನಿರ್ದೇಶಕಿ ಪ್ರೊ| ಕಿಶೋರಿ ನಾಯಕ್‌ ಉಪಸ್ಥಿತರಿದ್ದರು.

ವಿ.ವಿ.ಯ ಎಲ್ಲ ವಿಭಾಗಗಳ ಪ್ರಾಧ್ಯಾಪಕರು, ಸಂಯೋಜಿತ ಕಾಲೇಜುಗಳ ಮುಖ್ಯಸ್ಥರು, ಘಟಕ ಕಾಲೇಜುಗಳು, ಸರಕಾರಿ ಕಾಲೇಜುಗಳ ಅಧ್ಯಾಪಕರ ಸಲಹೆಗಳನ್ನು ಆರು ಗುಂಪುಗಳಾಗಿ ಪಡೆದು ಪ್ರಮುಖರು ಸಲಹೆ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next